
ಇಂಪಾಲ್(ಜೂ.10): 1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತದ ಬಾಕ್ಸರ್ ನಂಗೊಮ್ ಡಿಂಗ್ಕೊ ಸಿಂಗ್(41) ಅವರನ್ನು ಕೊರೋನಾ ವೈರಸ್ ಬಲಿ ಪಡೆದಿದೆ. ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಡಿಂಗ್ಕೊ ಸಿಂಗ್ ಇದೀಗ ಕೋವಿಡ್‌ಗೆ ತುತ್ತಾಗಿದ್ದಾರೆ.
ಮೊದಲೇ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಡಿಂಗ್ಕೊ ಸಿಂಗ್ 2017ರಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವರ್ಷ ಡಿಂಗ್ಕೊ ಸಿಂಗ್ ಅವರಿಗೆ ಕೋವಿಡ್ 19 ತಗುಲಿರುವುದು ದೃಢಪಟ್ಟಿತ್ತು. ಇದೀಗ ಕೋವಿಡ್ ವಿರುದ್ದದ ಹೋರಾಟದಲ್ಲಿ ಕೇವಲ 41 ವರ್ಷದ ಭಾರತದ ಬಾಕ್ಸರ್ ಕೊನೆಗೂ ಶರಣಾಗಿದ್ದಾರೆ.
ಡಿಂಗ್ಕೊ ಸಿಂಗ್ ತಮ್ಮ ತವರು ಇಂಪಾಲ್‌ಗೆ ಮರಳುವ ಮುನ್ನ 2020ರ ಜನವರಿಯಲ್ಲಿ ದೆಹಲಿಯ ಐಎಲ್‌ಬಿಸ್(ಇನ್ಸ್‌ಟ್ಯೂಟ್ ಆಫ್ ಲಿವರ್ ಅಂಡ್ ಬಿಲೇರಿ ಸೈನ್ಸ್) ರೇಡಿಯೇಷನ್ ಥೆರಪಿಗೆ ಒಳಗಾಗಿದ್ದರು. ಏಪ್ರಿಲ್‌ನಲ್ಲಿ ಡಿಂಗ್ಕೊ ಸಿಂಗ್ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಆಸ್ಪತ್ರೆಯಿಂದ ನೇರವಾಗಿ ತವರಿಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಡಿಂಗ್ಕೊ ಸಿಂಗ್ ಕ್ಯಾನ್ಸರ್, ಕೋವಿಡ್ ಮಾತ್ರವಲ್ಲದೇ ಜಾಂಡೀಸ್‌ನಿಂದಲೂ ಬಳಲುತ್ತಿದ್ದರು.
ದಿಲ್ಲಿ ಜೈಲ್ಲಲೇ ಕುಸ್ತಿಪಟು ಸುಶೀಲ್ ಕುಮಾರ್ ಕೊಲೆಗೆ ಸುಪಾರಿ?
ಡಿಂಗ್ಕೊ ಸಿಂಗ್ ತಮ್ಮ ಅದ್ಭುತ ಕ್ರೀಡಾಸಾಧನೆಗೆ 1998ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು 2013ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪ್ರಶಸ್ತಿಯಾದ ಪದ್ಮಶ್ರೀ ಗೌರವಕ್ಕೂ ಭಾಜನರಾಗಿದ್ದರು.
ಡಿಂಗ್ಕೊ ಸಿಂಗ್ ನಿಧನಕ್ಕೆ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಕಂಬನಿ ಮಿಡಿದಿದ್ದಾರೆ. ಡಿಂಗ್ಕೊ ಸಿಂಗ್ ನಿಧನಕ್ಕೆ ನನ್ನ ಭಾವಪೂರ್ಣ ನಮನಗಳು. ಅವರ ಬದುಕಿನ ಪಯಣ ಹಾಗೂ ಹೋರಾಟ ಮುಂದಿನ ತಲೆಮಾರಿಗೆ ಸ್ಪೂರ್ತಿಯಾಗಿ ಉಳಿಯಲಿದೆ. ಅವರ ಪ್ರೀತಿಪಾತ್ರರಿಗೆ ಕುಟುಂಬಸ್ಥರಿಗೆ ಈ ನೋವು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ವಿಜೇಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.