ಫ್ರೆಂಚ್‌ ಓಪನ್‌: ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಔಟ್‌

By Kannadaprabha NewsFirst Published Jun 10, 2021, 8:36 AM IST
Highlights

* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ

*  ಮಹಿಳಾ ಸಿಂಗಲ್ಸ್‌ ಹಾಲಿ ಚಾಂಪಿಯನ್‌ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಹೋರಾಟ ಅಂತ್ಯ

* ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ಗೆ ಕ್ವಾರ್ಟರ್‌ ಫೈನಲ್‌ನಲ್ಲೇ ಮುಖಭಂಗ

ಪ್ಯಾರಿಸ್(ಜೂ.10)‌: ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಸೋಲುಂಡು ಹೊರಬಿದ್ದಿದ್ದಾರೆ. 

ಗ್ರೀಸ್‌ನ ಮಾರಿಯಾ ಸಕ್ಕಾರಿ ವಿರುದ್ಧ ನಡೆದ ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಸ್ವಿಯಾಟೆಕ್‌, 4-6, 4-6 ನೇರ ಸೆಟ್‌ಗಳಲ್ಲಿ ಸೋಲುಂಡರು. ಸಕಾರಿ, ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ, ಸ್ಲೋವೇನಿಯಾದ ತಮಾರ ಜಿಡಾನ್ಸೆಕ್‌, ರಷ್ಯಾದ ಅನಸ್ತಾಸಿಯಾ ಪಾವ್ಲು್ಯಚೆಂಕೋವಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ನಾಲ್ವರೂ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಟೂರ್ನಿಯ ಸೆಮೀಸ್‌ಗೇರಿರುವುದು ವಿಶೇಷ. 

Consider the moment seized 👏

In her first career major quarter-final, 🇬🇷 earns the upset over defending champ and No.8 seed Iga Swiatek 6-4, 6-4. She'll face Krejcikova for a spot in the final. pic.twitter.com/y4cWZwUnn2

— Roland-Garros (@rolandgarros)

ಫ್ರೆಂಚ್‌ ಓಪನ್‌: ಜೋಕೋವಿಚ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

ಸತತ 5ನೇ ವರ್ಷ ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್‌ ಹೊಸ ಚಾಂಪಿಯನ್‌ಗೆ ಸಾಕ್ಷಿಯಾಗಲಿದೆ. ಇದೇ ವೇಳೆ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ಗೆ ಗ್ರೀಸ್‌ನ ಸ್ಟೆಫಾನೋಸ್‌ ಸಿಸ್ಟಿಪಾಸ್‌ ಹಾಗೂ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಪ್ರವೇಶ ಪಡೆದಿದ್ದಾರೆ.

click me!