ಏಷ್ಯಾ ಟೀಂ ಬ್ಯಾಡ್ಮಿಂಟನ್‌: ಭಾರತ ಕಂಚಿಗೆ ತೃಪ್ತಿ

By Suvarna News  |  First Published Feb 16, 2020, 11:20 AM IST

ದಿಟ್ಟ ಹೋರಾಟ ನೀಡದರೂ ಭಾರತ ಬ್ಯಾಡ್ಮಿಂಟನ್ ತಂಡ ಕಂಚಿಗೆ ತೃಪ್ತಿಪಟ್ಟುಕೊಂಡಿದೆ. ಏಷ್ಯಾ ಟೀಂ ಬ್ಯಾಡ್ಮಿಂಟನ್‌ ಟೂರ್ನಿಯ ಹೈಲೈಟ್ಸ್ ಇಲ್ಲಿದೆ. 


ಮನಿಲಾ(ಫಿಲಿಪೈನ್ಸ್‌)(ಫೆ.15 : ಯುವ ಶಟ್ಲರ್‌ ಲಕ್ಷ್ಯ ಸೆನ್‌ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತ ತಂಡ, ಏಷ್ಯಾ ಟೀಮ್‌ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಇಂಡೋನೇಷ್ಯಾ ಎದುರು 2-3 ರಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಭಾರತ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. 

ಇದನ್ನೂ ಓದಿ: ಪಿಬಿಎಲ್‌: ಬೆಂಗ್ಳೂರಿಗೆ ಸತತ 2ನೇ ವರ್ಷ ಪ್ರಶಸ್ತಿ

Tap to resize

Latest Videos

ಶನಿವಾರ ನಡೆದ ಸೆಮಿಫೈನಲ್‌ ಹಂತದ ಸಿಂಗಲ್ಸ್‌ ವಿಭಾಗದಲ್ಲಿ ಲಕ್ಷ್ಯ, ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಜೋನಾಥನ್‌ ಕ್ರಿಸ್ಟ್‌ ವಿರುದ್ಧ 21-18, 22-20 ಗೇಮ್‌ಗಳಲ್ಲಿ ಜಯ ಪಡೆದರು. ಶುಭಾಂಕರ್‌ ಡೇ, ವಿಶ್ವ ನಂ.20 ಶೇಸರ್‌ ಹಿರೆನ್‌ ವಿರುದ್ಧ 21-17, 21-15 ಗೇಮ್‌ಗಳಲ್ಲಿ ಗೆದ್ದರು. 

ಇದನ್ನೂ ಓದಿ: ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆ!

ಬಿ. ಸಾಯಿ ಪ್ರಣೀತ್‌, ಆ್ಯಂಟೋನಿ ಗಿಂಟಿಂಗ್‌ ಎದುರಿನ ಪಂದ್ಯದ ವೇಳೆ ಗಾಯದಿಂದ ಹಿಂದೆ ಸರಿದರು. ಡಬಲ್ಸ್‌ನಲ್ಲಿ ಅರ್ಜುನ್‌-ಧೃವ್‌ ಜೋಡಿ, ಮೊಹಮದ್‌ ಅಸನ್‌, ಹೆಂದ್ರಾ ಸೆಟಿವಾನ್‌ ಜೋಡಿ ವಿರುದ್ಧ 10-21, 21-14, 21-23 ಗೇಮ್‌ಗಳಲ್ಲಿ ಸೋತಿತು.

ಎರಡು ಸಿಂಗಲ್ಸ್‌ ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, ಇಂಡೋನೇಷ್ಯಾ 1 ಸಿಂಗಲ್ಸ್‌ ಹಾಗೂ 1 ಡಬಲ್ಸ್‌ ಪಂದ್ಯದಲ್ಲಿ ಗೆದ್ದು 2-2 ರಿಂದ ಸಮಬಲ ಸಾಧಿಸಿತ್ತು. 2ನೇ ಡಬಲ್ಸ್‌ ಪಂದ್ಯದಲ್ಲಿ ಚಿರಾಗ್‌ ಶೆಟ್ಟಿ-ಲಕ್ಷ್ಯ ಸೆನ್‌ ಜೋಡಿ, ವಿಶ್ವ ನಂ.1 ಮಾರ್ಕಸ್‌ ಫೆರ್ನಾಲ್ಡಿ-ಕೆವಿನ್‌ ಸಂಜಯ ಜೋಡಿ ವಿರುದ್ಧ 6-21, 13-21 ಗೇಮ್‌ಗಳಲ್ಲಿ ಪರಾಭವ ಹೊಂದಿತು. ಇಂಡೋನೇಷ್ಯಾ ಈ ಜಯದೊಂದಿಗೆ ಫೈನಲ್‌ಗೇರಿದರೆ, ಭಾರತ ಕಂಚಿನ ಪದಕ ಗೆದ್ದಿತು.

click me!