ಸತತ 12 ಗಂಟೆ ಓಡಿ ದಾಖಲೆ ಬರೆದ ಬೆಂಗ್ಳೂರಿನ ಅಶ್ವಿನಿ

By Kannadaprabha NewsFirst Published Feb 11, 2020, 10:45 AM IST
Highlights

ಬೆಂಗಳೂರಿನ ಮ್ಯಾರಾಥಾನ್‌ ಓಟಗಾರ್ತಿ ಅಶ್ವಿನಿ ಸತತ 12 ಗಂಟೆ ಓಡುವ ಮೂಲಕ ದಾಖಲೆ ಬರೆದಿದ್ದಾರೆ. ಅಶ್ವಿನಿ ಸಾಧನೆಯನ್ನು ಸಚಿವ ಎಸ್‌. ಸುರೇಶ್‌ ಕುಮಾರ್‌ ಕೊಂಡಾಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಬೆಂಗಳೂರು(ಫೆ.11): ಇತ್ತೀಚೆಗಷ್ಟೇ ಚಂಢೀಗಢದಲ್ಲಿ ಮುಕ್ತಾಯವಾದ ಟಫ್‌ಮೆನ್‌ ಕ್ರೀಡಾಂಗಣ ಓಟದಲ್ಲಿ ಬೆಂಗಳೂರಿನ ಮ್ಯಾರಾಥಾನ್‌ ಓಟಗಾರ್ತಿ ಅಶ್ವಿನಿ, ಸತತ 12 ಗಂಟೆಗಳ ಕಾಲ ಓಡಿದ್ದಾರೆ. 

ಟೋಕಿಯೋಗೆ ಭಾರತದ 15 ಶೂಟರ್ಸ್; ರಿಜಿಜು ಅಭಿನಂದನೆ

ಈ ಅವಧಿಯಲ್ಲಿ ಅಶ್ವಿನಿ 112 ಕಿ.ಮೀ. ದೂರ ಕ್ರಮಿಸುವ ಮೂಲಕ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ದಾಖಲೆ ನಿರ್ಮಿಸಿದ್ದಾರೆ. 

ಬೆಂಗಳೂರಿನ ಅಶ್ವಿನಿ ಜಿ ಅವರು 2 ಫೆಬ್ರವರಿ 2020 ರಂದು ಚಂದೀಗಡ್ ನಲ್ಲಿ ಟಫ್ ಮೆನ್ ಸ್ಟೇಡಿಯಮ್ ಓಟ ದಲ್ಲಿ ಸತತವಾಗಿ 12 ಗಂಟೆಗಳ ಅವಧಿಯಲ್ಲಿ 112 ಕಿ ಮೀ ಕ್ರಮಿಸಿ ಮಹಿಳಾ ವಿಭಾಗದಲ್ಲಿ ರಾಷ್ಟ್ರಮಟ್ಟದ ದಾಖಲೆ ಸ್ಥಾಪಿಸಿದ್ದಾರೆ
ಕರ್ನಾಟಕ ರಾಜ್ಯದ ಸಮಸ್ತ ಜನತೆಯಪರವಾಗಿ ಅಶ್ವಿನಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ

— S.Suresh Kumar, Minister - Govt of Karnataka (@nimmasuresh)

ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಅಶ್ವಿನಿ ಅವರ ಸಾಧನೆಯನ್ನು ಪರಿಗಣಿಸಿದ ಸಚಿವ ಎಸ್‌. ಸುರೇಶ್‌ ಕುಮಾರ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ಅಶ್ವಿನಿ ಅವರ ಫೋಟೋದೊಂದಿಗೆ ಕರ್ನಾಟಕ ರಾಜ್ಯದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಬರೆದಿದ್ದಾರೆ.

I am so happy to share this 😊 Ashwini has her name in national records. She created the national record for 12hr female category by running 112kms in Tuffman Chandigarh 12hr stadium run today. It still amazes me how she manages to smile after a brutal record breaking run 😜 pic.twitter.com/4RCrGDQ6Yn

— S.Suresh Kumar, Minister - Govt of Karnataka (@nimmasuresh)
click me!