ಅಭಿಮಾನಿಗಳಿಗೆ ಶಾಕ್; US ಓಪನ್ ಟೆನಿಸ್‌ನಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್!

By Suvarna News  |  First Published Aug 25, 2021, 7:46 PM IST
  • 6 ಬಾರಿ ಯೂಎಸ್ ಚಾಂಪಿಯನ್ ಸೆರೆನಾ ವಿಲಿಯಮ್ಸ್
  • ಯೂಎಸ್ ಓಪನ್ ಟೂರ್ನಿಯಿಂದ ವಿಲಿಯಮ್ಸ್ ಹಿಂದಕ್ಕೆ
  • ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆ ಸರಿದ ಚಾಂಪಿಯನ್
     

ನ್ಯೂಯಾರ್ಕ್(ಆ.25):  ಆರು ಬಾರಿ ಯೂಎಸ್  ಓಪನ್ ಟೂರ್ನಿ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಪ್ರತಿಷ್ಠಿತ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಅಮೆರಿಕದ ಸೆರೆನಾ ವಿಲಿಯಮ್ಸನ್ ಹಿಂದೆ ಸರಿದಿದ್ದಾರೆ. ಮಂಡಿನೋವಿನ ಕಾರಣದಿಂದ ವಿಲಿಯಮ್ಸ್ ಯೂಎಸ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ವಿಂಬಲ್ಡನ್‌: ಗಾಯಗೊಂಡು ಮೊದಲ ಸುತ್ತಿನಲ್ಲೇ ಹೊರಬಿದ್ದ ಸೆರೆನಾ ವಿಲಿಯಮ್ಸ್‌

Latest Videos

undefined

39 ವರ್ಷದ ಸೆರೆನಾ ವಿಲಿಯಮ್ಸ್ ಮಂಡಿನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಗಾಯದಿಂದ ಸಂಪೂರ್ಣ ಗುಣಮುಖವಾಗದ ಕಾರಣ ಯೂಎಸ್ ಓಪನ್ ಟೂರ್ನಿಯಿಂದ ಸೆರೆನಾ ಹಿಂದೆ ಸರಿದಿದ್ದಾರೆ. ವೈದ್ಯರ ಸೂಚನೆಯಿಂದ ನಿರ್ಧಾರ ತೆಗೆದುಕೊಂಡಿದ್ದೇನೆ. ಹೆಚ್ಚಿನ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಸೆರೆನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೆರೆನಾ ವಿಲಿಯಮ್ಸ್ ಟೂರ್ನಿಯಿಂದ ಹಿಂದೆ ಸರಿಯುವುದಕ್ಕೂ ಮೊದಲು ಚಾಂಪಿಯನ್ ಡೋಮಿನಿಕ್ ಥೀಮ್ ಹಾಗೂ ನಾಲ್ಕು ಬಾರಿ ಚಾಂಪಿಯನ್ ರಾಫೆಲ್ ನಡಾಲ್ ಕೂಡ ಈಗಾಗಲೇ ಯೂಎಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಗಾಯದ ಸಮಸ್ಯೆಯಿಂದ ಈ ಟೆನಿಸ್ ಸ್ಟಾರ್ಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!

2017ರ ಬಳಿಕ ಸೆರೆನಾ ವಿಲಿಯಮ್ಸ್ ಯಾವುದೇ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಂ ಗೆದ್ದಿಲ್ಲ. ನಾಲ್ಕು ವರ್ಷಗಳ ಹಿಂದೆ ವಿಲಿಯಮ್ಸ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಒಲಿಂಪಿಯಾ ಎಂದು ಹೆಸರಿಟ್ಟ ವಿಲಿಯಮ್ಸ್ ಬಳಿಕ ಒಂದು ಬಾರಿ ಗ್ರ್ಯಾಂಡ್ ಸ್ಲಾಂ ಫೈನಲ್ ತಲುಪಿದ್ದಾರೆ. ಆದರೆ ಯಾವುದೇ ಪ್ರಶಸ್ತಿ ಗೆದ್ದಿಲ್ಲ. 23ನೇ ಗ್ರ್ಯಾಂಡ್ ಸ್ಲಾಂ ಗೆದ್ದ ಬಳಿಕ ವಿಲಿಯಮ್ಸ್ ಪ್ರಶಸ್ತಿ ಓಟಕ್ಕೆ ಕಳೆದ ನಾಲ್ಕು ವರ್ಷಗಳಿಂದ ಬ್ರೇಕ್ ಬಿದ್ದಿದೆ. ಇದೀಗ ಯುಎಸ್ ಓಪನ್ ಟೂರ್ನಿಯಿಂದಲೂ ಹಿಂದೆ ಸರಿದಿರುವುದು ಅಭಿಮಾನಿಗಳಿಗೆ ಆಘಾತ ನೀಡಿದೆ.

click me!