ಯುವ ಅಥ್ಲೀಟ್‌ಗಳನ್ನು ಸನ್ಮಾನಿಸಿ ಹುರಿದುಂಬಿಸಿದ ಕ್ರೀಡಾಸಚಿವ ಅನುರಾಗ್‌ ಠಾಕೂರ್

By Suvarna News  |  First Published Aug 25, 2021, 6:26 PM IST

* ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 3 ಪದಕ ಗೆದ್ದ ಭಾರತ

* ಪದಕ ಗೆದ್ದ ಅಥ್ಲೀಟ್‌ಗಳನ್ನು ಭೇಟಿಯಾಗಿ ಸನ್ಮಾನಿಸಿದ ಅನುರಾಗ್ ಠಾಕೂರ್

* ಕೀನ್ಯಾ ರಾಜಧಾನಿ ನೈರೋಬಿಯಲ್ಲಿ ನಡೆದ ಕಿರಿಯರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌


ನವದೆಹಲಿ(ಆ.25): ಇತ್ತೀಚೆಗಷ್ಟೇ ನೈರೋಬಿಯಲ್ಲಿ ಮುಕ್ತಾಯವಾದ ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಅಥ್ಲೀಟ್‌ಗಳನ್ನು ಬುಧವಾರ(ಆ.25) ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ 

ಕೀನ್ಯಾ ರಾಜಧಾನಿ ನೈರೋಬಿಯಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮೂರು ಪದಕಗಳನ್ನು ಜಯಿಸುವ ಮೂಲಕ ಗಮನ ಸೆಳೆದಿತ್ತು. 4*400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತ ಕಂಚಿನ ಪದಕಕ್ಕೆ ಕೊರಳೊಡ್ಡಿತ್ತು. ಇದಾದ ಬಳಿಕ 10,000 ಮೀಟರ್‌ ನಡಿಗೆ ಸ್ಪರ್ಧೆಯಲ್ಲಿ ಅಮಿತ್ ಖತ್ರಿ ಬೆಳ್ಳಿ ಪದಕ ಜಯಿಸಿದ್ದರು. ಇನ್ನು 17 ವರ್ಷದ ಮಹಿಳಾ ಲಾಂಗ್‌ ಜಂಪ್ ಪಟು ಶೈಲಿ ಸಿಂಗ್ ಕೂಡಾ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದರು.

Latest Videos

undefined

ಅಂಡರ್ 20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌: ಪದಕ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ

India won three medals including two silver in the Championship

More former athletes should come forward for coaching to handhold young athletes and motivate them: Sports Minister

Read: https://t.co/PEsVF482gA pic.twitter.com/MO1DuppEXz

— PIB India (@PIB_India)

Sports Minister interacts with India’s ‘World 2021 U20 Athletics Championship’Medalists; says, "The government will ensure all facilities and best training for athletes to excel in international competitions"

Read: https://t.co/PEsVF482gA pic.twitter.com/nbzlZQ9EvV

— PIB India (@PIB_India)

ಎಲ್ಲಾ ಪದಕ ವಿಜೇತ ಅಥ್ಲೀಟ್‌ಗಳನ್ನು ಭೇಟಿಯಾಗಿ ಅಭಿನಂದಿಸಿದ ಅನುರಾಗ್ ರಾಕೂರ್, ನಾವು ಯುವ ಅಥ್ಲೀಟ್‌ಗಳಿಗೆ ಬೇರು ಮಟ್ಟದಲ್ಲೇ ಉತ್ತಮ ತರಬೇತಿ ನೀಡಿದ್ದೇವೆ. ಇದರ ಪರಿಣಾಮ ಫಲಿತಾಂಶ ಪದಕ ರೂಪದಲ್ಲಿ ಸಿಕ್ಕಿದೆ. ಈ ವಿಚಾರಕ್ಕೆ ನಮಗೆಲ್ಲರಿಗೂ ಹೆಮ್ಮೆಯಿದೆ. ಮುಂಬರುವ ಕ್ರೀಡಾ ಸ್ಪರ್ಧೆಯಲ್ಲಿ ಇನ್ನಷ್ಟು ಕ್ರೀಡಾಪಟುಗಳು ಪದಕ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಜಯಿಸಿದ ಸಾಧನೆ ಮಾಡಿದೆ. ಆದರೆ ಇದೇ ಮೊದಲ ಬಾರಿಗೆ ಭಾರತ ಆವೃತ್ತಿಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಜಯಿಸಿದ ಸಾಧನೆ ಮಾಡಿದೆ. 

click me!