ಅಲ್ಟ್ರಾ ರನ್ನಿಂಗ್ ವಿಶ್ವ ಚಾಂಪಿಯನ್‌ಶಿಪ್: ಪದಕದ ನಿರೀಕ್ಷೆಯಲ್ಲಿ ಬೆಂಗಳೂರಿನ ಉಲ್ಲಾಸ್, ಶ್ಯಾಮಲಾ

By Web Desk  |  First Published Oct 26, 2019, 6:25 PM IST

ಬೆಂಗಳೂರಿನ ಅಲ್ಟ್ರಾ ರನ್ನರ್‌ಗಳಾದ ಉಲ್ಲಾಸ್ ಹಾಗೂ ಶ್ಯಾಮಲಾ ಫ್ರಾನ್ಸ್‌ನಲ್ಲಿ ನಡೆಯಲಿರುವ IAU 24 ಗಂಟೆಗಳ ವಿಶ್ವಚಾಂಪಿಯನ್’ಶಿಪ್’ನಲ್ಲಿ ಭಾರತ ತಂಡದ ಮುಂದಾಳತ್ವ ವಹಿಸಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬೆಂಗಳೂರು[ಅ.26]: ಬೆಂಗಳೂರಿನ ಅಲ್ಟ್ರಾ ರನ್ನರ್ ಉಲ್ಲಾಸ್ ನಾರಾಯಣ ಹಾಗೂ ಶ್ಯಾಮಲಾ ಸತ್ಯನಾರಾಯಣ ಫ್ರಾನ್ಸ್’ನಲ್ಲಿ ಈ ವಾರಂತ್ಯದಲ್ಲಿ ನಡೆಯಲಿರುವ IAU 24 ಗಂಟೆಗಳ ವಿಶ್ವಚಾಂಪಿಯನ್’ಶಿಪ್’ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಪ್ರಸ್ತುತ ಕೆನಡಾದ ವ್ಯಾಂಕೋವರ್’ನಲ್ಲಿ ಕೆಲಸ ಮಾಡುತ್ತಿರುವ ಉಲ್ಲಾಸ್, 24 ಗಂಟೆ ಅವಧಿಯಲ್ಲಿ 250.371 ಕಿಲೋ ಮೀಟರ್ ಓಡುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಈ ಅಂತರವನ್ನು ಬೆಂಗಳೂರಿನ ಸ್ಟೇಡಿಯಂವೊಂದರಲ್ಲಿ ಓಡುವ ಮೂಲಕ IAU 24 ಗಂಟೆಗಳ ವಿಶ್ವಚಾಂಪಿಯನ್’ಶಿಪ್’ನಲ್ಲಿ ಭಾಗವಹಿಸಲು ಅರ್ಹತೆಗಿಟ್ಟಿಸಿಕೊಂಡಿದ್ದಾರೆ.

Tap to resize

Latest Videos

ಡೇವಿಸ್‌ ಕಪ್‌: ಪಾಕ್‌ಗೆ ತೆರ​ಳ​ಲಿ​ದ್ದಾರೆ ಪೇಸ್‌!

ಈ ಟೂರ್ನಿಯಲ್ಲಿ ಭಾರತದ 9 ಓಟಗಾರರು ಪಾಲ್ಗೊಳ್ಳುತ್ತಿದ್ದು, ಇದರಲ್ಲಿ ಐವರು ಪುರುಷರು ಹಾಗೂ 4 ಮಹಿಳೆಯರನ್ನು ಭಾರತೀಯ ಅಥ್ಲೇಟಿಕ್ ಫೆಡರೇಶನ್ ಆಯ್ಕೆ ಮಾಡಿದೆ. ಭಾರತದಲ್ಲಿ ನಡೆಯುವ ಹಲವಾರು ಮ್ಯಾರಥಾನ್ ಸ್ಪರ್ಧೆಗಳಿಗೆ ಪ್ರೋತ್ಸಾಹ ನೀಡುವ IDBI ಫೆಡರಲ್ ಲೈಫ್ ಇನ್ಶೂರೆನ್ಸ್ ಕಂಪನಿಯು ಈ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ಮೂವರು ಅಲ್ಟ್ರಾ ರನ್ನರ್ ಜತೆಗೆ ಐವರು ಪ್ರಮುಖ ಮೆಡಿಸಿನ್ ಸಹಾಯಕ ಸಿಬ್ಬಂದಿಯೂ ಈ ಕ್ರೀಡಾಕೂಟಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ವಿಜಯ್ ಹಜಾರೆ ಟ್ರೋಫಿ: ಸೋಲಿನ ಬೆನ್ನಲ್ಲೇ ಅಶ್ವಿನ್’ಗೆ ಆಘಾತ..?

IDBI ಫೆಡರಲ್ ಲೈಫ್ ಇನ್ಶೂರೆನ್ಸ್ ಕಂಪನಿಯು, ಆರೋಗ್ಯಯುತ ಹಾಗೂ ಫಿಟ್ನೆಸ್ ವಿಚಾರದಲ್ಲಿ ಕಠಿಬದ್ಧವಾಗಿದೆ. ಇದೀಗ ಅಲ್ಟ್ರಾ ರನ್ನರ್’ಗಳಿಗೆ ಸಹಕಾರ ನೀಡುತ್ತಿರುವುದು IDBI ಸಂಸ್ಥೆಯನ್ನು ಇನ್ನೊಂದು ಮಟ್ಟಕ್ಕೆ ಏರಿಸಿದೆ ಎಂದು ಕಂಪನಿಯ ಮುಖ್ಯ ಮಾರ್ಕೆಂಟಿಂಗ್ ಅಧಿಕಾರಿ ಕಾರ್ತಿಕ್ ರಾಮನ್ ತಿಳಿಸಿದ್ದಾರೆ.

ಮುಂದುವರಿದು, ಈ ವರ್ಷ ಭಾರತ ಕ್ರೀಡಾಕೂಟಕ್ಕೆ ಬಲಿಷ್ಠ ತಂಡವನ್ನು ಕಳಿಸುತ್ತಿದೆ. ತಂಡವು ಈಗಾಗಲೇ ಕೋಚ್’ಗಳ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸಿದೆ ಭಾರತದ ಪರ ಒಳ್ಳೆಯ ಫಲಿತಾಂಶ ಬರುವ ವಿಶ್ವಾಸವಿದೆ ಎಂದವರು ಹೇಳಿದರು.

ವಿಶ್ವದ 45 ದೇಶಗಳ ಅಗ್ರ ಮ್ಯಾರಥಾನ್ ಹಾಗೂ ಅಲ್ಟ್ರಾ ರನ್ನರ್ ಪಟುಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಮಹಿಳೆಯರ ವಿಭಾಗದಲ್ಲಿ ವಿಶ್ವದಾಖಲೆ ಬರೆದಿರುವ ಅಮೆರಿಕಾದ ಕೆಮಿಲ್ಲೇ ಹೆರ್ರಾನ್ ಕೂಡಾ ಈ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 24 ಗಂಟೆಗಳ ಸ್ಟೇಡಿಯಂ ರನ್’ನಲ್ಲಿ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಶ್ಯಾಮಲಾ 167.6 ಕಿಲೋ ಮೀಟರ್ ಓಡುವ ಮೂಲಕ ಮಹತ್ವದ ಟೂರ್ನಿಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಶ್ಯಾಮಲಾ ಓರ್ವ ಅತ್ಯದ್ಭುತ ಅಲ್ಟ್ರಾ ರನ್ನರ್ ಆಗಿದ್ದು, ಈಗಾಗಲೇ ಜಗತ್ತಿನಾದ್ಯಂತ ಮ್ಯಾರಥಾನ್, ಹಾಫ್ ಮ್ಯಾರಥಾನ್ ಸೇರಿದಂತೆ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದೀಗ ದೇಶಕ್ಕಾಗಿ ಮಹತ್ವದ ಟೂರ್ನಿಯಲ್ಲಿ ಪದಕ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ.

ಸುನಿಲ್ ಶರ್ಮಾ[215.6 ಕಿ.ಮೀ], ಬಿನ್ನಿ ಶಾ[222.240 ಕಿ.ಮೀ], ಪ್ರಣಯ ಮೊಹಾಂತಿ[211.6 ಕಿ.ಮೀ] ಹಾಗೂ ಕನನ್ ಜೈನ್[207.2 ಕಿ.ಮೀ] ಪುರುಷ ಸ್ಪರ್ಧೆಗಳಾದರೆ, ಅಪೂರ್ವ ಚೌಧರಿ[176.8 ಕಿ.ಮೀ], ಹೇಮಲತಾ ಸೈನಿ[172.3 ಕಿ.ಮೀ] ಮತ್ತು ಪ್ರಿಯಾಂಕಾ ಭಟ್[170 ಕಿ.ಮೀ] ಭಾರತವನ್ನು ಪ್ರತಿನಿಧಿಸುವ ಮಹಿಳಾ ಸ್ಪರ್ಧಿಗಳಾಗಿದ್ದಾರೆ.

ಅಲ್ಟ್ರಾ ರನ್ನಿಂಗ್ ಸ್ಪರ್ಧೆಯಲ್ಲಿ ಭಾರತ ಉದಯೋನ್ಮುಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು NEB ಸ್ಪೋರ್ಟ್ಸ್’ನ ನಾಗರಾಜ್ ಅಡಿಗ ಹೇಳಿದ್ದಾರೆ. ನಮ್ಮ ತಂಡದ ಸ್ಪರ್ಧಿಗಳು ಖಂಡಿತ ಕಳೆದ ಸ್ಪರ್ಧೆಗಿಂತ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಇದು ದೇಶದ ಕ್ರೀಡೆಗೆ ಇನ್ನಷ್ಟು ಉತ್ತೇಜನ ಸಿಕ್ಕಂತಾಗುತ್ತದೆ. ಭಾರತೀಯರು ಈ ಚಾಂಪಿಯನ್’ಶಿಪ್’ನಲ್ಲಿ ಹೊಸ ದಾಖಲೆ ಬರೆಯುವುದನ್ನು ಎದುರು ನೋಡುತ್ತಿದ್ದೇನೆ. ನಾವು ಈಗಲು ಪ್ರಮುಖ 2-3 ತಂಡಗಳ ನಡುವೆ ಅಂತರವನ್ನು ಹೊಂದಿದ್ದೇವೆ. ಆದರೆ ಈ ಅಂತರವನ್ನು ಗಣನೀಯವಾಗಿ ಕಡಿಮೆಗೊಳಿಸುವುದನ್ನು ನೋಡಲು ಕಾತುರನಾಗಿದ್ದೇನೆ ಎಂದು ಅಡಿಗ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತವು 2017ರಿಂದ IAU ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ ಹಾಗೂ ಈಗಾಗಲೇ 2018ರಲ್ಲಿ ತೈಪೆಯಲ್ಲಿ ನಡೆದ 24 ಗಂಟೆಗಳ ಏಷ್ಯಾ ಓಶಾನಿಯಾ ಚಾಂಪಿಯನ್’ಶಿಪ್’ನಲ್ಲಿ ವೈಯುಕ್ತಿಕ ಹಾಗೂ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತನ್ನ ಹೆಜ್ಜೆ ಗುರುತನ್ನು ಮೂಡಿಸಿದೆ.

ಈ ವರದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.

 

click me!