ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಹೋರಾಟ ಅಂತ್ಯವಾಗಿದೆ. ಈ ವರ್ಷ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಸೈನಾ ಸೆಮೀಸ್ ಹಾದಿಯಲ್ಲಿ ಮುಗ್ಗರಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಪ್ಯಾರಿಸ್(ಅ.26): ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.
ಫ್ರೆಂಚ್ ಓಪನ್: ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಸೈನಾ, ಸಿಂಧು
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ, ಕೊರಿಯಾದ ಅನ್ ಸೆ ಯಂಗ್ ವಿರುದ್ಧ 20-22, 21-23 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ರೋಚಕತೆಯಿಂದ ಕೂಡಿದ್ದ ಎರಡೂ ಗೇಮ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಸೈನಾ, ಟೂರ್ನಿಯಿಂದ ಹೊರನಡೆದರು. ವಿಶ್ವ ನಂ.16 ಯಂಗ್, ಕೇವಲ 49 ನಿಮಿಷಗಳಲ್ಲಿ ಜಯಭೇರಿ ಬಾರಿಸಿ ಸೆಮೀಸ್‌ಗೆ ಪ್ರವೇಶ ಪಡೆದರು.
Womens Singles - Quarterfinals 🏸
AN Se Young🇰🇷 VS Saina NEHWAL 🇮🇳 (22/20 23/21) ! pic.twitter.com/1BFUiLSn30
ಈ ವರ್ಷದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬಳಿಕ ಸೈನಾ, ಇದೇ ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಕಳೆದ 3 ಟೂರ್ನಿಗಳಾದ ಚೀನಾ, ಕೊರಿಯಾ ಮತ್ತು ಡೆನ್ಮಾರ್ಕ್ ಓಪನ್‌ಗಳಲ್ಲಿ ಸೈನಾ ಮೊದಲ ಸುತ್ತಲ್ಲೇ ಹೊರಬಿದ್ದಿದ್ದರು. 2012ರ ಫ್ರೆಂಚ್ ಓಪನ್‌ನಲ್ಲಿ ಸೈನಾ ಫೈನಲ್‌ಗೇರಿದ್ದರು. ಅ.29ರಿಂದ ಜರ್ಮನಿಯ ಸಾರ್‌ಬ್ರುಕೆನ್‌ನಲ್ಲಿ ನಡೆಯಲಿರುವ ಸಾರ್‌ಲೊರ್‌ಲಕ್ಸ್ ಓಪನ್‌ನಲ್ಲಿ ಸೈನಾ ಆಡಲಿದ್ದಾರೆ.