ವಿನೇಶ್‌ ಪೋಗಟ್‌ ಮಾತ್ರವಲ್ಲ ಅನರ್ಹತೆ ಭೀತಿಯಲ್ಲಿದ್ರು ಅಂತಿಮ್‌ ಪಾಂಗಾಲ್‌, ತೂಕ ಇಳಿಸೋಕೆ ಮಾಡಿದ್ದರು 2 ದಿನ ಉಪವಾಸ!

By Santosh Naik  |  First Published Aug 7, 2024, 10:03 PM IST


ವಿನೇಶ್ ಪೋಗಟ್‌ ಚಿನ್ನದ ಪದಕದ ಪಂದ್ಯದಿಂದ ಅನರ್ಹತೆಗೊಂಡ ಮೂರು ಗಂಟೆಗಳ ಬಳಿಕ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ಅಂತಿಮ್‌ ಪಾಂಗಲ್‌ ಕೂಡ ಅನರ್ಹತೆ ಭೀತಿ ಎದುರಿಸಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ.


ನವದೆಹಲಿ (ಆ.7): ಒಲಿಂಪಿಕ್‌ ಫೈನಲ್‌ಗೂ ಮುನ್ನ ಕುಸ್ತಿಪಟುಗಳು ಸಾಮಾನ್ಯವಾಗಿ ಆ ರಾತ್ರಿಯನ್ನು ಹೇಗೆ ಕಳೆಯುತ್ತಾರೆ? ಹೆಚ್ಚಿನ ಸಂದರ್ಭದಲ್ಲಿ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ಆ ದಿನ ಅವರು ಮೂರು ಪಂದ್ಯಗಳನ್ನು ಆಡಿ ಅತಿಯಾಗಿ ಸುಸ್ತಾಗಿರುತ್ತಾರೆ. ಹೋರಾಟದ ಪಂದ್ಯಗಳ ಬಳಿಕ ಮತ್ತೊಮ್ಮೆ ತಮ್ಮ ದೇಹವನ್ನು ಹುರಿಗಟ್ಟಲು ಆರಂಭಿಸುತ್ತಾರೆ. ಮಸಾಜ್‌, ಮಾಡುವುದು ಮಾತ್ರವಲ್ಲ, ಐಸ್‌ಬಾತ್‌ಗಳನ್ನು ಮಾಡಿ ಹಲವು ಗಂಟೆಗಳ ಸುಖನಿದ್ರೆಯನ್ನು ಮಾಡುತ್ತಾರೆ. ಆದರೆ, ವಿನೇಶ್‌ ಪೋಗಟ್‌ ವಿಚಾರದಲ್ಲಿ ಹಾಗಾಗಲಿಲ್ಲ. ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ವಿರುದ್ಧ ಸೆಮಿಫೈನಲ್‌ ಗೆದ್ದ ಬಳಿಕಸ ಆಕೆ, ಸ್ಕಿಪ್ಪಿಂಗ್‌, ಸೈಕ್ಲಿಂಗ್‌ ಮಾಡಿ ರಾತ್ರಿ ಇಡೀ ಬೆವರು ಸುರಿಸಿದ್ದರು. ಕೂದಲು ಕತ್ತರಿಸಿಕೊಂಡರು, ದೇಹದಲ್ಲಿದ್ದ ರಕ್ತವನ್ನು ಹೊರತೆಗೆಯಲು ಒಪ್ಪಿಗೆ ನೀಡಿದರು. ಯಾಕೆಂದರೆ, ಅವರ ತೂಕ 50 ಕೆಜಿಯ ಒಳಗೆ ಬರಬೇಕಾಗಿತ್ತು. ಆದರೆ, ಕೇವಲ ನಿಗದಿತ ಮಿತಿಗಿಂತ 100 ಗ್ರಾಮ ಹೆಚ್ಚಿನ ತೂಕ ಇದ್ದ ಕಾರಣಕ್ಕೆ ಅವರು ಅನರ್ಹರಾಗಿದ್ದಾರೆ. ಭಾರತಕ್ಕೆ ಬರಬೇಕಾಗಿದ್ದ ಪದಕ ಬೇರೆ ದೇಶಕ್ಕೆ ಹೋಗಿದೆ. ಇಲ್ಲಿಯವರೆಗಿನ ವಿಚಾರದಿಂದ ಒಂದಂತೂ ಸ್ಪಷ್ಟ. ಹಾಗೇನಾದರೂ ವಿನೇಶ್‌ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರೆ, ಖಂಡಿತವಾಗಿ ಅವರು ಚಿನ್ನವಂತೂ ಗೆಲ್ಲುತ್ತಿರಲಿಲ್ಲ. ಯಾಕೆಂದರೆ, ಅವರ ದೇಹ ಆ ಸ್ಥಿತಿಯಲ್ಲಿ ಇದ್ದಿರಲೇ ಇಲ್ಲ.

ಹಾಗಂತ ಭಾರತ ಕುಸ್ತಿ ಟೀಮ್‌ನ ಒಲಿಂಪಿಕ್ಸ್ ಗೋಳು ಇಲ್ಲಿಗೆ ಮುಗಿಯೋದಿಲ್ಲ. ವಿನೇಶ್‌ ಪೋಗಟ್‌ ಅನರ್ಹಗೊಂಡ ಮೂರೇ ಗಂಟೆಗಳಲ್ಲಿ ಅಂತಿಮ್‌ ಪಾಂಗಾಲ್‌ ಕೂಡ ಅನರ್ಹತೆಯ ಭೀತಿ ಎದುರಿಸಿದ್ದರು ಎನ್ನುವ ಮಾಹಿತಿ ಬಂದಿದೆ. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಭಾರತದ ಸ್ಪರ್ಧಿಯಾಗಿದ್ದ ಅಂತಿಮ್‌ ಪಾಂಗಾಲ್‌ ಟರ್ಕಿಯ ಜೆಯ್ನೆಪ್‌ ಯೆತ್ನಿಗ್‌ ವಿರುದ್ಧ ಕೇವಲ 101 ಸೆಕೆಂಡ್‌ಗಳಲ್ಲಿ ಸೋಲು ಕಂಡರು. ಅದರೂ ಕೂಡ 10-0 ಅಂತರದಿಂದ. ಇದನ್ನ ಕುಸ್ತಿ ಭಾಷೆಯಲ್ಲಿ ಟೆಕ್ನಿಕಲ್‌ ಸುಪೀರಿಯಾರಿಟಿ ಗಲುವು ಅಂತಾರೆ. ಬಾಕ್ಸಿಂಗ್‌ನಲ್ಲಿ ನಾಕೌಟ್‌ ಗೆಲುವು ಅಂತಾರಲ್ಲ ಹಾಗೆ. ವಿನೇಶ್‌ ಪೋಗಟ್‌ ಬಳಿಕ ಮಹಿಳಾ ಕುಸ್ತಿಯಲ್ಲಿ ಭಾರತದ ಪದಕದ ಭರವಸೆ ಆಗಿದ್ದವರು ಅಂತಿಮ್‌. ಆದರೆ, ಟರ್ಕಿ ರೆಸ್ಲರ್‌ ಮುಂದೆ ದಯನೀಯವಾಗಿ ಆಕೆ ಸೋಲು ಕಂಡರು.

ಇದರಲ್ಲಿ ಟ್ವಿಸ್ಟ್‌ ಏನೆಂದರೆ, ಅಂತಿಮ್‌ ಪಾಂಗಾಲ್‌ ಕೂಡ ತಮ್ಮ ತೂಕವನ್ನು 53 ಕೆಜಿ ಮಿತಿಯ ಒಳಗೆ ಬರೋದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು ಅನ್ನೋದು. ನಿಗದಿತ 53 ಕೆಜಿಯ ಒಳಗೆ ಬರಬೇಕು ಅನ್ನೋ ನಿಟ್ಟಿನಲ್ಲಿ ಅಂತಿಮ್‌ ಪಾಂಗಾಲ್‌ ಕಳೆದ ಎರಡು ದಿನಗಳಿಂದ ಹೆಚ್ಚೂ ಕಡಿಮೆ ಉಪವಾಸ ಮಾಡಿದ್ದರು ಎಂದು ಟೀಮ್‌ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಆಕೆಯಲ್ಲಿ ಪಂದ್ಯದಲ್ಲಿ ಹೋರಾಟ ಮಾಡುವ ಶಕ್ತಿಯೇ ಇದ್ದಿರಲಿಲ್ಲ. ಇದರಿಂದಾಗಿ ಕೇವಲ 101 ಸೆಕೆಂಡ್‌ನಲ್ಲಿಯೇ ಸೋಲು ಕಂಡು ಹೊರಬಿದ್ದಿದ್ದಾರೆ. ಮ್ಯಾಟ್‌ನಲ್ಲಿ ಕಣ್ಣೀರಿಡುತ್ತಾ ಹೊರನಡೆದ ಅಂತಿಮ್‌ ಪಾಂಗಾಲ್‌, ಪತ್ರಕರ್ತರ ಜೊತೆಗೂ ಮಾತನಾಡಲಿಲ್ಲ.

ಈ ಪ್ರಕರಣಗಳ ಬಳಿಕ, ಕುಸ್ತಿ ತಂಡದ ಸಹಾಯಕ ಸಿಬ್ಬಂದಿಗಳ ಮೇಲೆ ಪ್ರಶ್ನೆಗಳು ಏಳೋಕೆ ಆರಂಭವಾಗಿದೆ. ಉದಾಹರಣೆಗೆ ವಿನೇಶ್‌. ಅವರ ಮೂಲ ವಿಭಾಗ 48 ಕೆಜಿ ಕುಸ್ತಿ. 2014ರ ಗ್ಲಾಸ್ಗೋ ಒಲಿಂಪಿಕ್ಸ್‌ನಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರೆ, ರಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಕಾಲಿನ ಗಾಯದಿಂದಾಗಿ ಸೋಲು ಕಂಡಿದ್ದರು. 2018ರ ಕಾಮನ್ವೆಲ್ತ್‌ ಗೇಮ್ಸ್‌ ವೇಳೆಗೆ ಅವರು 50 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು.  2022ರಲ್ಲಿ ಅವರು ಬರ್ಮಿಂಗ್‌ಹ್ಯಾಂ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ತಮ್ಮ ಮೂರನೇ ಸತತ ಚಿನ್ನ ಗೆಲ್ಲುವ ವೇಳೆಗೆ ಅವರು 53 ಕೆಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧೆ ಮಾಡುತ್ತಿದ್ದರು.

ಕಳೆದ ಏಪ್ರಿಲ್‌ನಲ್ಲಿ ಕಿರ್ಗಿಸ್ತಾನ್‌ನ ಬಿಶ್‌ಕೆಕ್‌ನಲ್ಲಿ, ಅರ್ಹತಾ ಪಂದ್ಯಾವಳಿಯ ಮುನ್ನ ತೂಕವನ್ನು ಹೇಗಾದರೂ ಕಡಿಮೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ರೆಡ್‌ ಹಾಟ್‌ ಸೌನಾದಲ್ಲಿ ಮೂರು ಅವಧಿಯನ್ನು ಕಳೆದಿದ್ದರು. ಅದರಿಂದಲೂ ಆಕೆ ಪಾಠ ಕಲಿತಿರಲಿಲ್ಲ. ಸಾಮಾನ್ಯವಾಗಿ ರೆಸ್ಲರ್‌ಗಳು ತೂಕದಲ್ಲಿ ಆಕಷ್ಟು ಬಫರ್‌ಗಳನ್ನು ಬಿಡುತ್ತಾರೆ. 50ಕೆಜಿ ವಿಭಾಗದ ಸ್ಪರ್ಧೆ ಎಂದರೆ, ತಮ್ಮ ತೂಕ 49.4 ಅಥವಾ 49.5 ಕೆಜಿ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ, ವಿನೇಶ್‌ ಅವರ ತೂಕ ಮಂಗಳವಾರದ ಪ್ರಾಥಮಿಕ ಸುತ್ತಿನ ವೇಳೆಗೆ 49.9 ಕೆಜಿ ಇತ್ತು.

Tap to resize

Latest Videos

undefined

Explainer: ರೆಸ್ಲಿಂಗ್‌ನಲ್ಲಿ ತೂಕ ಇಳಿಸೋದು ಅಂದ್ರನೇ ಸಾಧನೆ, ಇದೇ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ 3ನೇ ರೆಸ್ಲರ್‌ ವಿನೇಶ್‌!

ಪಂದ್ಯದ ಬಳಿಕ ತೆಗೆದುಕೊಂಡ ಆಹಾರ ಹಾಗೂ ಹೈಡ್ರೇಷನ್‌ನ ಕಾರಣದಿಂದಾಗಿ ಅವರ ತೂಕ ಸರಿಸುಮಾರು 53 ಕೆಜಿಯ ಹತ್ತಿರ ಹೋಗಿತ್ತು. ಆದರೆ, ಅವರು ಸಿಬ್ಬಂದಿ ಇದು 51.5 ಕೆಜಿ ಆಗಬಹುದು ಎಂದು ಲೆಕ್ಕಾಚಾರ ಮಾಡಿದ್ದರು. ಇಡೀ ರಾತ್ರಿಯ ವ್ಯಾಯಾಮ ಹಾಗೂ ಡಿಹೈಡ್ರೇಷನ್‌ ಮಾಡಿದರೂ ಆಕೆಯ ನಿಗದಿತ ಮಿತಿಗೆ ಇಳಿಯಲಿಲ್ಲ. ಕೊನೆಗೆ ವಿನೇಶ್‌ಗೆ ಸ್ನಾಯು ನೋವಿನಿಂದ ಅಳಲು ಕೂಡ ಆರಂಭಿಸಿದ್ದರು. ಇನ್ನು ತೂಕ ಪರೀಕ್ಷೆ ಮಾಡುವಾಗ ಪ್ರತಿ ರೆಸ್ಲರ್‌ಗೆ 15 ನಿಮಿಷದ ಸಮಯ ಕೊಡುತ್ತಾರೆ. ಈ ಸಮಯದಲ್ಲಿ ಅವರ ತೂಕ ಇಳಿಕೆ ಮಾಡುವ ಅವಕಾಶ ನೀಡಲಾಗುತ್ತದೆ. ಹಾಗಿದ್ದರೂ, ವಿನೇಶ್‌ 100 ಗ್ರಾಂ ತೂಕ ಹೆಚ್ಚೇ ಇದ್ದರು ಎನ್ನುವುದು ಗೊತ್ತಾಗಿದೆ.

'ವಿನೇಶ್‌ ನೀವು ಎಲ್ಲರಿಗೂ ಚಾಂಪಿಯನ್‌..' ಚಿನ್ನದ ಪದಕದ ಪಂದ್ಯದಿಂದ ಅನರ್ಹಗೊಂಡ ಬೆನ್ನಲ್ಲೇ ಮೋದಿ ಟ್ವೀಟ್‌!

ಹಾಗಂತ ಇದರಲ್ಲಿ ತಪ್ಪು ಯಾರದು ಅನ್ನೋದನ್ನ ನೋಡೋದಾದರೆ, ಸಿಬ್ಬಂದಿಗಳ ನಿರ್ಲಕ್ಷ್ಯವೇ ಇಲ್ಲಿ ಹೆಚ್ಚಾಗಿ ಕಾಣುತ್ತದೆ. ವಿನೇಶ್‌ ಆಗಲಿ, ಅಂತಿಮ್‌ ಆಗಲಿ ಇಲ್ಲಿ ತಪ್ಪು ಮಾಡಿಲ್ಲ. ಜಗತ್ತಿನ ಬಹುತೇಕ ರೆಸ್ಲರ್‌ಗಳು ಇದೇ ರೀತಿ ಮಾಡುತ್ತಾರೆ. ತಮ್ಮ ನ್ಯೂಟ್ರಿಷನ್‌ ನೀಡುವ ಸಲಹೆಗಳನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತಾರೆ. ಆದರೆ, ಸಿಬ್ಬಂದಿ ಲೆಕ್ಕಾಚಾರದಲ್ಲಿ ಮಿಸ್‌ ಆದಾಗ ಮಾತ್ರವೇ ಇಡೀ ದೇಶಕ್ಕೆ ಶಾಕ್‌ ಆಗುವಂಥ ಇಂಥ ಸಂಗತಿ ಎದುರಾಗುತ್ತದೆ.

click me!