MTB ಹಿಮಾಚಲ ಪ್ರದೇಶ ಮೌಂಟೈನ್ ಸೈಕ್ಲಿಂಗ್, ಮೊದಲ ಹಂತದಲ್ಲಿ 54 ರೈಡರ್‌ಗಳಿಂದ 80 ಕಿ.ಮೀ ಪ್ರಯಾಣ!

Published : Jun 25, 2022, 05:47 PM IST
MTB ಹಿಮಾಚಲ ಪ್ರದೇಶ ಮೌಂಟೈನ್ ಸೈಕ್ಲಿಂಗ್,  ಮೊದಲ ಹಂತದಲ್ಲಿ 54 ರೈಡರ್‌ಗಳಿಂದ 80 ಕಿ.ಮೀ ಪ್ರಯಾಣ!

ಸಾರಾಂಶ

ಮೊದಲ ಆವೃತ್ತಿಯ ಹಿಮಾಚಲ ಜಾಂಜೆಹ್ಲಿ ಸೈಕ್ಲಿಂಗ್ ರೇಸ್ ಸೈಕ್ಲಿಂಗ್ ದಾರಿಯಲ್ಲಿ ಕ್ಲಿಷ್ಟಕರ ಬೆಟ್ಟ, ಐತಿಹಿಸಾಕ ಸುತೇಲ್ಜ್ ನದಿ ಹಿಮಾಚಲ ಪ್ರದೇಶ ಪ್ರವಾಸೋದ್ಯಮ ದೃಷ್ಟಿಯಿಂದ ಆಯೋಜನೆ  

ಹಿಮಾಚಲ ಪ್ರದೇಶ(ಜೂ.25): ಐತಿಹಾಸಿಕ ಹಾಗೂ ವಿಶೇಷ ಮೌಂಟೈನ್ ಸೈಕ್ಲಿಂಗ್ ರೇಸ್ ಹಿಮಾಚಲ ಪ್ರದೇಶದಲ್ಲಿ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ  ಆಯೋಜಿಸಿರುವ ಈ ಮೌಂಟೈನ್ ಸೈಕ್ಲಿಂಗ್ ರೇಸ್‌ನಲ್ಲಿ ದೇಶಾದ್ಯಂತದ 54 ರೈಡರ್‌ಗಳು ಪಾಲ್ಗೊಂಡಿದ್ದಾರೆ. ಮೊದಲ ಹಂತದಲ್ಲಿ 80 ಕಿ.ಮೀ ಪ್ರಯಾಣ ಮಾಡಿ ಸೈ ಎನಿಸಕೊಂಡಿದ್ದಾರೆ.

ಹಿಮಾಚಲ ಪ್ರದೇಶ ಸರ್ಕಾರ, ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆ ಹಾಗೂ ಹಿಮಾಲಯನ್ ಆಡ್ವೆಂಚರ್ ಸ್ಪೋರ್ಟ್ಸ್ ಮತ್ತು ಟೂರಿಸಂ ಪ್ರಮೋಶನ್ ಆಸೋಸಿಯೇಶನ್(HASTPA) ಈ ಮೌಂಟೈನ್ ಸೈಕ್ಲಿಂಗ್ ರೇಸ್ ಆಯೋಜಿಸಿದೆ. ಹಿಮಾಚಲ ಪ್ರದೇಶದ ಜಾಂಜೆಹ್ಲಿ ಜಿಲ್ಲೆಯಲ್ಲಿರುವ ಬೆಟ್ಟಗುಡ್ಡ ಹಾಗೂ ಐತಿಹಾಸಿಕ ಸತಾದ್ರು ನದಿ ಬಳಿಯಿಂದ ಈ ಸೈಕ್ಲಿಂಗ್ ರೇಸ್ ಹಾದು ಹೋಗಿದೆ. ಈ ಮೂಲಕ ಹಿಮಾಚಲ ಪ್ರದೇಶದ ಸೌಂದರ್ಯ ಕೂಡ ಅನಾವರಣಗೊಂಡಿದೆ.

 

Himveers 12,500 ಫೀಟ್ ಎತ್ತರದಲ್ಲಿ ಕಬಡ್ಡಿ ಆಡಿದ ಐಟಿಬಿಪಿ ಯೋಧರು!

ಸತಾದ್ರು ನದಿಯ 100 ವಿಶೇಷತೆಗಳನ್ನು ಸಾರುವುದು ಈ ಸ್ಲೈಕಿಂಗ್ ರೇಸ್‌ನ ಉದ್ದೇಶವಾಗಿದೆ. ಈ ಮೂಲಕ ಹಿಮಾಚಲ ಪ್ರದೇಶದ ಪ್ರವಾಸೋದ್ಯಮವನ್ನು ದೇಶದಲ್ಲಿ ಮತ್ತಷ್ಟು ಪ್ರಚುರ ಪಡಿಸಲು ಮೊದಲ ಆವೃತ್ತಿಯ ಮೌಂಟೈನ್ ಸ್ಲೈಕ್ಲಿಂಗ್ ರೇಸ್ ಆಯೋಜಿಸಲಾಗಿತ್ತು. ಇಷ್ಟೇ ಅಲ್ಲ ಮೊದಲ ಹಂತದ ಮೌಂಟೈನ್ ಸೈಕ್ಲಿಂಗ್ ಅತ್ಯಂತ ಯಶಸ್ವಿಯಾಗಿದೆ.

ಜೂನ್ 24 ರಂದು ಮೌಂಟೈನ್ ಸೈಕ್ಲಿಂಗ್ ರೇಸ್ ಆರಂಭಗೊಂಡಿದೆ. ಮೊದಲ ದಿನ ದಾಕ್ ಬಾಂಗ್ಲಾದಿಂದ ಸೀಪುರ, ಚಾಬಾ, ಸುನ್ನಿ, ತಟ್ಟಪಾನಿ, ಚುರಗ್ ಮೂಲಕ ಹಾದುಹೋಗಲಿದೆ. 80 ಕಿ.ಮೀ ದೂರದ ಮಾರ್ಗವನ್ನು ಕ್ರಮಿಸಲಿದ್ದಾರೆ. ಸತಾದ್ರು ನದಿ ಹಾಗೂ ಉಪನದಿಗಳು ಸೇರಿದಂತೆ 100 ಐತಿಹಾಸಿಕ ತಾಣಗಳ ದರ್ಶನವೂ ಆಗಿದೆ.

ಸೈಕ್ಲಿಂಗ್ ಆರಂಭದಲ್ಲಿ 2,300 ಮೀಟರ್‌ಗಳಿಂದ 690 ಮೀಟರ್ ಇಳಿಜಾರಿನ ಪ್ರದೇಶದ ಮಾರ್ಗದಲ್ಲಿ ದಾರಿ ಸಾಗಿದೆ. ಇದು ಸತಾದ್ರು ನದಿಗೆ ಇಳಿಯುವ ಮಾರ್ಗವಾಗಿ ಸೈಕ್ಲಿಂಗ್ ರೇಸ್ ಸಾಗಿದೆ. ಆರಂಭಿಕ ಹಂತದಲ್ಲಿ ಇಳಿಮುಖ ಹಂತದಲ್ಲಿ ಸಾಗಿದರೆ ಬಳಿಕ 40 ಕಿಲೋಮೀಟರ್ ಎತ್ತರ ಬೆಟ್ಟವನ್ನು ಸಾಗಬೇಕು. ಸರಿಸುಮಾರು 2,000 ಮೀಟರ್ ಹೆಚ್ಚು ಕ್ಲೈಬಿಂಗ್ ಮೂಲಕ ಸಾಗಬೇಕು. ಈ ದಾರಿಯಲ್ಲಿ ಅತ್ಯಂತ ಕಡಿದಾದ ದಾರಿ ಎತ್ತರ 800 ಮೀಟರ್ ಎತ್ತರದಲ್ಲಿರುವ ಸುನ್ನಿ ಸೇತುವೆ ದಾರಿ. 2,000 ಮೀಟರ್ ಎತ್ತರದಲ್ಲಿರುವ ಚುರಾಹ ಅತ್ಯುನ್ನತ ಸ್ಥಳವಾಗಿದ್ದರೆ , ಸೈಕ್ಲಿಂಗ್‌ನ ರೇಸ್ ಹತ್ತುವ ಒಟ್ಟು ಎತ್ತರ 1890 ಮೀಟರ್ ಆಗಿದೆ.

Bijli Mahadev temple: 12 ವರ್ಷಗಳಿಗೊಮ್ಮೆ ಸಿಡಿಲಿಗೆ ಒಡೆವ ಶಿವಲಿಂಗ

ಮೌಂಟೈನ್ ಸೈಕ್ಲಿಂಗ್ ರೇಸ್‌ನ 2ನೇ ಹಂತದಲ್ಲಿ ಹಿಮಾಚಲ ಪ್ರದೇಶದ ಆಫ್ ರೋಡ್ ತಾಣಗಳು, ಮಾರ್ಗಗಳು, ಅತ್ಯುತ್ತಮ ವಿಹಂಗಮ ನೋಟವಿರುವ ದಾರಿಗಳು, ಹಿಮಾಲಯ ಪರ್ವತ ಶ್ರೇಣಿಗಳ ದಾರಿ ಸೇರಿದಂತೆ ಹಲವು ಮಾರ್ಗಗಳ ಕುರಿತು ಬೆಳಕು ಚೆಲ್ಲಲಿದೆ. ಈ ಮೂಲಕ ಹಿಮಾಲಯ ನೈಸರ್ಗಿಕ ಸೌಂದರ್ಯವು ಈ ರೇಸ್ ಮೂಲಕ ಅನಾವರಣಗೊಳ್ಳಲಿದೆ.

ಅಂಡರ್ 16 ಕೆಟಗರಿ
1st: ಯುಗಲ್ ಠಾಕೂರ್
2nd: ವಂಶ್ ಠಾಕೂರ್
3rd: ದಿವ್ಯಾಂಶ್ ಕೌಶಾಲ್

ಅಂಡರ್ 19(ಹುಡುಗರ ವಿಭಾಗ)
1st: ಅರ್ಪಿತ್ ಶರ್ಮಾ
2nd: ವಿಶಾಲ್ ಆರ್ಯ
3rd: ಕುನಾಲ್ ಬನ್ಸಾಲ್

ಅಂಡರ್ 19(ಹುಡುಗಿಯರ ವಿಭಾಗ)
1st: ಕನ್ಯಾ ಸೂದ್
2nd: ದಿವಿಜಾ ಸೂದ್

ಅಂಡರ್ 23(ಯುವಕರ ವಿಭಾಗ)
1st: ಅಮನ್‌ದೀಪ್ ಸಿಂಗ್
2nd: ಪೃಥ್ವಿರಾಜ್ ಸಿಂಗ್ ರಾಥೋರ್

ಅಂಡರ್ 23(ಯುವತಿಯರ ವಿಭಾಗ)
1st: ಸುನೀತಾ ಶ್ರೇಷ್ಠ
2nd: ಆಸ್ತಾ ದೋಬಲ್

ಅಂಡರ್ 35(ಪುರುಷರ ವಿಭಾಗ)
1st: ರಾಕೇಶ್ ರಾನಾ
2nd: ಕೃಷ್ಣವೇಂದ್ರ ಯಾದವ್
3rd: ರಾಮಕೃಷ್ಣ ಪಟೇಲ್

ಅಂಡರ್ 50 ಪುರುಷರ ವಿಭಾಗ
1st: ಸುನಿಲ್ ಬಂಗೊರಾ
2nd: ಅಮಿತ್ ಬಲಿಯಾನ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!