ಕೊರೋನಾ ಕಾಟ: UAEನಲ್ಲಿರುವ ಕನ್ನಡಿಗರಿಗೆ ಸುವರ್ಣ ನ್ಯೂಸ್‌ ನೆರವು

By Kannadaprabha NewsFirst Published May 8, 2020, 11:29 AM IST
Highlights

ಸಂಯುಕ್ತ ಅರಬ್‌ ರಾಷ್ಟ್ರಗಳಲ್ಲಿರುವ ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ಕ್ರಮ| ಯುಎಇನಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಮನವಿ| ಮನವಿಗೆ ಸ್ಪಂದಿಸಿದ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ |

ಬೆಂಗಳೂರು(ಮೇ.08): ಸಂಯುಕ್ತ ಅರಬ್‌ ರಾಷ್ಟ್ರಗಳಲ್ಲಿರುವ (ಯುಎಇ) ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವುದು ನಮ್ಮ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಇದಕ್ಕೆ ಕಾರಣರಾದ ಜನಪ್ರತಿನಿಧಿಗಳು ಹಾಗೂ ಸುವರ್ಣ ನ್ಯೂಸ್‌ ವಾಹಿನಿಗೂ ಧ್ಯನವಾದ ಎಂದು ಕರ್ನಾಟಕ ಎನ್‌ಆರ್‌ಐ ಫೋರಂ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ತಿಳಿಸಿದ್ದಾರೆ.

ಯುಎಇನಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ನಮ್ಮ ಮನವಿಗೆ ಸ್ಪಂದಿಸಿದರು. ಅಲ್ಲದೇ ಈ ಬಗ್ಗೆ ಸುವರ್ಣ ನ್ಯೂಸ್‌ ನಿರಂತರ ವರದಿ ಪ್ರಸಾರ ಮಾಡಿ ಸರ್ಕಾರಕ್ಕೆ ಒತ್ತಾಯಿಸಿತ್ತು. ಒತ್ತಾಯಕ್ಕೆ ಮಣಿದ ಸರ್ಕಾರ ಕನ್ನಡಿಗರನ್ನು ಕರೆತರಲು ಸಿದ್ಧತೆ ಮಾಡಿರುವುದಾಗಿ ತಿಳಿಸಿದೆ. 

ಯುಎಇ ಕನ್ನಡಿಗರಿಗೆ ಮರಳಲು ಸಹಾಯಹಸ್ತ!

ಮೇ 12ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕನ್ನಡಿಗರು ಆಗಮಿಸಲಿದ್ದಾರೆ ಎಂದು ಪ್ರವೀಣ್‌ ಶೆಟ್ಟಿ ವಿಡಿಯೋ ಸಂದೇಶದ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

click me!