ಅಮೆರಿಕ ಅರಿಜೋನಾ ಕನ್ನಡ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ

Published : Jan 09, 2019, 03:51 PM ISTUpdated : Jan 09, 2019, 04:04 PM IST
ಅಮೆರಿಕ ಅರಿಜೋನಾ ಕನ್ನಡ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ

ಸಾರಾಂಶ

ಕನ್ನಡ ಸಂಘಟನೆಗಳು ಕರ್ನಾಟಕ ಮತ್ತು ಭಾರತಕ್ಕೆ ಮಾತ್ರ ಸೀಮಿತ ಆಗಿಲ್ಲ. ಅಮೆರಿಕದಲ್ಲಿಯೂ ಕನ್ನಡ ಪರ ಚಟುವಟಿಕೆಗಳು ನಿರಂತರ. ಅರಿಜೋನಾ ಕನ್ನಡ ಸಂಘಕ್ಕೆ ಹೊಸ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಫೀನಿಕ್ಸ್(ಜ.9)  ಅಮೆರಿಕದ ನೈರುತ್ಯ ಭಾಗದಲ್ಲಿರುವ ಅರಿಜೋನಾ ರಾಜ್ಯದ, ಅರಿಜೋನಾ ಕನ್ನಡ ಸಂಘಕ್ಕೆ 2019-20ರ ಸಾಲಿಗೆ ಹೊಸದಾಗಿ 9 ಜನ ನಿರ್ದೇಶಕರನ್ನು ಕಳೆದ ನವೆಂಬರಿನಲ್ಲಿ ನಡೆದ ದೀಪಾವಳಿ ಹಬ್ಬದ ಸಮಾರಂಭದಲ್ಲಿ ಸದಸ್ಯರು ಆಯ್ಕೆ ಮಾಡಿದ್ದರು. 

ಇದೀಗ ಈ ನೂತನ ನಿರ್ದೇಶಕರ ಮಂಡಳಿಗೆ ವಿವಿಧ ಹುದ್ದೆಗಳ ಜವಾಬ್ದಾರಿ ವಹಿಸಲಾಗಿದೆ. ಸಂಘಕ್ಕೆ ಅನಿಲ್ ಭಾರದ್ವಾಜ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರವೀಂದ್ರ ಜೋಶಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಿಲ್ಪಾ ದೇಸಾಯಿ, ಖಜಾಂಚಿಯಾಗಿ ಅಮರ್ ವಸಂತಕುಮಾರ, ಪ್ರಚಾರ ಹಾಗೂ ಸಂವಹನಾ ವಿಭಾಗಕ್ಕೆ ಪ್ರಮೋದ ಹಳಪ್ಯಾಟಿ ಆಯ್ಕೆಯಾಗಿದ್ದಾರೆ. ಊಟೋಪಾಚಾರ ವಿಭಾಗಕ್ಕೆ ಗಣೇಶ್ ಹಾಗೂ ಶ್ರೀಕಾಂತ್ ಆಯ್ಕೆಯಾಗಿದ್ದು ಸಾಂಸ್ಕೃತಿಕ ವಿಭಾಗಕ್ಕೆ ಚೇತನಾ ಹಾಗೂ ಅನಿತಾ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಇನ್ನು ಬೋರ್ಡ್ ಆಫ್ ಟ್ರಸ್ಟಿಗಳಾಗಿ ಕುಮಾರಸ್ವಾಮಿ, ಕವಿತಾ ಕುಲಕರ್ಣಿ, ರಮೇಶ ಅರಕೆರೆ ಹಾಗೂ ಅಚ್ಯುತ ಕುಮಾರ ಆಯ್ಕೆಯಾಗಿದ್ದಾರೆ.

ಕತಾರ್‌ನಲ್ಲೂ ಮೊಳಗಿದ ಕನ್ನಡ ಡಿಂಡಿಮ, ಸಾಧಕರಿಗೆ ಸನ್ಮಾನ

ಸಂಘದ ಬಗ್ಗೆ : ಅರಿಜೋನಾ ಕನ್ನಡ ಸಂಘವು 1988ರಲ್ಲಿ ಫೀನಿಕ್ಸ್ ನಗರದಲ್ಲಿ ಸ್ಥಾಪನೆಯಾಗಿದ್ದು ಉತ್ತರ ಅಮೆರಿಕದಲ್ಲಿ ಆರಂಭಗೊಂಡ ಹಳೆಯ ಕನ್ನಡ ಸಂಘಗಳ ಪೈಕಿ ಇದೂ ಸಹ ಒಂದು. ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ರಾಷ್ಟ್ರಮಟ್ಟದ ಅಮೆರಿಕ ಕನ್ನಡಿಗರ ಉತ್ಸವ 'ಅಕ್ಕ ಸಮ್ಮೇಳನ'ದ ರೂಪುರೇಷೆ ಬಹುವರ್ಷಗಳ ಹಿಂದೆ ಇದೇ ಕನ್ನಡ ಸಂಘದಲ್ಲಿ ಸಿದ್ಧಗೊಂಡಿದ್ದು ಎಂದು ಈಗಲೂ ಇಲ್ಲಿನ ಹಳೆಯ ಪದಾಧಿಕಾರಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ