ಅಮೆರಿಕದಲ್ಲಿ ಕನ್ನಡ ಹಬ್ಬ, ನಾವಿಕ ಸಮ್ಮೇಳನಕ್ಕೆ ಈಗಿನಿಂದಲೇ ಸಿದ್ಧತೆ

Published : Jan 16, 2019, 05:24 PM ISTUpdated : Jan 16, 2019, 08:02 PM IST
ಅಮೆರಿಕದಲ್ಲಿ ಕನ್ನಡ ಹಬ್ಬ, ನಾವಿಕ ಸಮ್ಮೇಳನಕ್ಕೆ ಈಗಿನಿಂದಲೇ ಸಿದ್ಧತೆ

ಸಾರಾಂಶ

ಕನ್ನಡ ನಾಡು, ನುಡಿಗೆ ಸಮುದ್ರಗಳ ಎಲ್ಲೆ ಇಲ್ಲ. ಅಮೆರಿಕಾದಲ್ಲಿ ಕನ್ನಡ ಡಿಂಡಿಮ ಮೊಳಗಲು ವೇದಿಕೆ ಸಿದ್ಧವಾಗಿದೆ. ಈ ವರ್ಷದ ಆಗಸ್ಟ್ ಅಂತ್ಯಕ್ಕೆ ಅಮೆರಿಕದಲ್ಲಿ ಕನ್ನಡ ಹಬ್ಬದ ಸಂಭ್ರಮ ಕಳೆಗಟ್ಟಲಿದೆ.

ಸಿನ್ಸಿನಾಟಿ [ಜ.15]  ನಾವಿಕ ಸಮ್ಮೇಳನಕ್ಕೆ ಅಮೆರಿಕ ಈಗಿನಿಂದಲೇ ಸಜ್ಜಾಗುತ್ತಿದೆ. ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಕನ್ನಡ ಹಬ್ಬ ಕಳೆಕಟ್ಟಲಿದೆ.

ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ಆರಂಭವಾಗಿವೆ.

ಸಿನ್ಸಿನಾಟಿ ಡ್ಯೂಕ್ ಎನರ್ಜಿ ಕನ್‌ವೆಕ್ಷನ್ ಸೆಂಟರ್‌ನಲ್ಲಿ ಸಮ್ಮೇಳನ ನಡೆಯಲಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 1ರವರೆಗೆ 3 ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಸಿಂಚನ, ಸಂಗಮ, ಸ್ಪಂದನ ಎಂಬ ಅಡಿ ಬರಹವನ್ನು ಸಮ್ಮೇಳನಕ್ಕೆ ನೀಡಲಾಗಿದೆ ಎಂದು ಸಂಘಟಕರಲ್ಲಿ ಒಬ್ಬರಾದ ವಲ್ಲೀಶ್ ಶಾಸ್ತ್ರಿ ತಿಳಿಸಿದ್ದಾರೆ.

ಅಮೆರಿಕ ಅರಿಜೋನಾ ಕನ್ನಡ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ

ನಾವಿಕ ಅಧ್ಯಕ್ಷ ಸುರೇಶ್ ರಾಮಚಂದ್ರ, ಸಮ್ಮೇಳನದ ಅಧ್ಯಕ್ಷ ಡಾ. ಮನಮೋಹನ್ ಕಟಪಾಡಿ, ಸಮ್ಮೇಳನ ಉಪಾಧ್ಯಕ್ಷ ಸುರೇಶ್ ಶರೋಫ್, ಕನ್ವಿನಿಯರ್ ಅರುಣ್ ಕುಮಾರ್, ಪುಷ್ಪಲತಾ ನವೀನ್, ಅರುಡಿ ರಾಜಗೋಪಾಲ್ ಸಮ್ಮೇಳನದ ನೇತೃತ್ವ ವಹಿಸಿಕೊಂಡಿದ್ದಾರೆ.

ಈ ನಾವಿಕ ಸಂಸ್ಥೆಗೆ ದಶಕದ ಇತಿಹಾಸವಿದೆ. ಶಿಕ್ಷಣ, ಉದ್ಯೋಗ ನಿಮ್ಮಿತ್ತ ತೆರಳಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಅಮೇರಿಕಾ, ಉತ್ತರ, ಪಶ್ಚಿಮ, ಪೂರ್ವ ಹಾಗೂ ಮಧ್ಯ ರಾಜ್ಯಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಈ ಅನಿವಾಸಿ ಕನ್ನಡಿಗರು ವಿಭಿನ್ನ ಸಂಸ್ಕೃತಿಯ ನೆರಳಿನಲ್ಲಿ ಕುಳಿತು ಮೂಲ ಸಂಸ್ಕೃತಿ, ಭಾಷೆಯ ಸೊಗಡನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿದ್ದಾರೆ.

ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಪ್ರಯತ್ನಗಳಲ್ಲಿ ಈ ಸಮ್ಮೇಳನ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದೆ. ಕಳೆದ ವರ್ಷ ಮೈಸೂರಿನಲ್ಲಿ ನಡೆದ ನಾವಿಕ ಸಮ್ಮೇಳನ ಅನೇಕ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಆಗಿತ್ತು.

 

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ