ಆಕ್ಸ್‌ಫರ್ಡ್‌ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಕನ್ನಡತಿ ರಶ್ಮಿ ಸಾವಂತ್‌

By Kannadaprabha News  |  First Published Feb 13, 2021, 7:21 AM IST

ಉಡುಪಿಯ ಎಂ.ಎಸ್‌. ರಶ್ಮಿ ಸಾಮಂತ್‌ ಅವರು ಲಂಡನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿವಿಯ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸವನ್ನು ಬರೆದಿದ್ದಾರೆ. 


ಉಡುಪಿ (ಫೆ.13):  ಮಣಿಪಾಲ ಮಾಹೆ ವಿವಿಯ ಎಂಐಟಿಯ ಹಳೆವಿದ್ಯಾರ್ಥಿನಿ ಎಂ.ಎಸ್‌. ರಶ್ಮಿ ಸಾಮಂತ್‌ ಅವರು ಲಂಡನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿವಿಯ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸವನ್ನು ಬರೆದಿದ್ದಾರೆ. ಅವರು ಆಕ್ಸ್‌ಫರ್ಡ್‌ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಎಂಐಟಿಯಲ್ಲಿ 2016ರಿಂದ 2020ರವರೆಗೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿರುವ ಪ್ರಸ್ತುತ ಆಕ್ಸ್‌ಫರ್ಡ್‌ ವಿವಿಯ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್‌ ಎಂಬ ವಿಷಯದಲ್ಲಿ ಎಂಎಸ್ಸಿ ಪದವಿ ವಿದ್ಯಾರ್ಥಿಯಾಗಿದ್ದಾರೆ.

Tap to resize

Latest Videos

undefined

ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಯ ಪರಿಸರದಲ್ಲಿರುವ ಕ್ರಿಸ್ಟೋಫರ್‌ ಕೊಡ್ರಿಂಗ್ಟನ್‌ ಸೇರಿದಂತೆ ಸಾಮ್ರಾಜ್ಯಶಾಹಿಯ ಎಲ್ಲ ಪ್ರತಿಮೆಗಳನ್ನು ತೆಗೆದುಹಾಕುವ, ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್‌ ಸಾಂಕ್ರಾಮಿಕದ ಸಂಪೂರ್ಣ ನಿಯಂತ್ರಣದ ಘೋಷಣೆವರೆಗೆ ವಿದ್ಯಾರ್ಥಿಗಳ ವಲಸೆ ನಿಯಮಗಳನ್ನು ಸಡಿಲಿಸುವ, ಮಾನಸಿಕ ಆರೋಗ್ಯ ಕಾರ್ಯಯೋಜನೆಗೆ ಹೆಚ್ಚಿನ ಹಣಕ್ಕಾಗಿ ಲಾಬಿ ನಡೆಸುವ ಮತ್ತು ಶೀಘ್ರವೇ ಕಾಲೇಜು ಕ್ಯಾಂಪಸ್‌ನಿಂದ ಪರಿಸರಕ್ಕೆ ಮಾರಕವಾದ ಇಂಧನಗಳನ್ನು ದೂರ ಮಾಡುವ ನಾಲ್ಕು ಭರವಸೆಗಳನ್ನು ನೀಡಿದ್ದರು.

ನಮ್ಮ ಪ್ರಾರ್ಥನೆಗೆ ಸ್ಪಂದಿಸಿದ ಮೋದಿಗೆ ಧನ್ಯವಾದ; ಡೋಮಿನಿಕ ಪ್ರಧಾನಿ ಮನದಾಳ! ..

ಚುನಾವಣೆಯಲ್ಲಿ ಒಟ್ಟು 4 ಮಂದಿ ಸ್ಪರ್ಧಿಸಿದ್ದು, ರಶ್ಮಿ ಅವರು ಒಟ್ಟು 3708 ಮತಗಳಲ್ಲಿ 1966 (ಶೇ.53) ಮತಗಳನ್ನು ಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರು ಗಳಿಸಿದ ಒಟ್ಟು ಮತಗಳು ಇತರ ಮೂರು ಮಂದಿ ಗಳಿಸಿ ಒಟ್ಟು ಮತಗಳಿಗಿಂತಲೂ ಹೆಚ್ಚಾಗಿದ್ದವು. ರಶ್ಮಿ ಅವರು ಅವರು ಮಣಿಪಾಲದ ವತ್ಸಲ ಸಾಮಂತ್‌ ಮತ್ತು ದಿನೇಶ್‌ ಸಾಮಂತ್‌ ಅವರ ಪುತ್ರಿ, ಎಂಐಟಿಯಲ್ಲಿ ವ್ಯಾಸಂಗ ಮಾಡುವಾಗ ವಿದ್ಯಾರ್ಥಿ ಸಂಘದ ತಾಂತ್ರಿಕ ಕಾರ್ಯದರ್ಶಿಯಾಗಿ, ನಾಯಕತ್ವ ಮತ್ತು ಉತ್ಸಾಹಭರಿತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು. ಮಾಹೆಯಲ್ಲಿ ಮಣಿಪಾಲ್‌ ಹ್ಯಾಕಥಾನ್‌ ಎಂಬ ಅಂತರಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಗಳನ್ನು ಆರಂಭಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಎಂಐಟಿಯ ಪ್ರಕಟಣೆ ತಿಳಿಸಿದೆ.

click me!