ಮಸ್ಕತ್‌ನಲ್ಲಿ ಕನ್ನಡ ಹಬ್ಬ, ಹಾಸ್ಯ, ಸಂಗೀತ, ಸಾಹಿತ್ಯ ರಸಧಾರೆ

By Web DeskFirst Published Nov 28, 2018, 6:25 PM IST
Highlights

ಕರ್ನಾಟಕ  ಸಂಘ ಮಸ್ಕತ್ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ  ಏರ್ಪಡಿಸಿದ  ಕಾರ್ಯಕ್ರಮ 'ಕರ್ನಾಟಕ ಉತ್ಸವ -2018' ನವೆಂಬರ್ 9 ರಂದು ಮಸ್ಕತ್‌ನ ಅಲ ಫಲಾಜ್  ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕನ್ನಡಿಗರೆಲ್ಲ ಒಂದು ಕಡೆ ಬೆರೆತು ತಮ್ಮ ತನವನ್ನು ಹಂಚಿಕೊಂಡರು. ಭಾಷಾ ಪ್ರೀತಿ ಮೆರೆದರು.

ಮಸ್ಕತ್[ನ.28] ಕರ್ನಾಟಕ  ಸಂಘ ಮಸ್ಕತ್ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ  ಏರ್ಪಡಿಸಿದ  ಕಾರ್ಯಕ್ರಮ 'ಕರ್ನಾಟಕ ಉತ್ಸವ -2018'ಕ್ಕೆ ಸುಮಾರು 1200ಕ್ಕೂ ಹೆಚ್ಚು ಕನ್ನಡಿಗರು ಸಾಕ್ಷಿಯಾದರು.  ಅತಿಥಿಗಳಾಗಿ ತಾಯ್ನಾಡಿನಿಂದ ಆಗಮಿಸಿದ್ದ  ಕಲಾವಿದರನ್ನು  ಹುರಿದುಂಬಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. 

ಕರ್ನಾಟಕ ರಾಜ್ಯೋತ್ಸವದಲ್ಲಿ  ಪಾಲ್ಗೊಳ್ಳಲು ಅದ್ವಿತೀಯ ವಾಗ್ಮಿ ಪ್ರೊಫೆಸರ್ ಶ್ರೀ ಕೃಷ್ಣೆ ಗೌಡ,  ಪ್ರಖ್ಯಾತ ಗಾಯಕರುಗಳಾದ  ಶ್ರೀಮತಿ ಎಂ ಡಿ ಪಲ್ಲವಿ, ಶ್ರೀ ಹೇಮಂತ್, ಕುಮಾರಿ ಅನುರಾಧ ಭಟ್  ಇವರಲ್ಲದೆ  ಶ್ರೀ ಅರುಣ್ ಕುಮಾರ್ (ಡ್ರಮ್ಸ್)  ಶ್ರೀ ಶ್ರೀನಿವಾಸ್ ಆಚಾರ್ (ಕೀ ಬೋರ್ಡ್)), ಶ್ರೀ ಉಮೇಶ್ ಮೂರ್ತಿ ( ಕೀ ಬೋರ್ಡ್ ), ಶ್ರೀ ವೇಣುಗೋಪಾಲ್ (ಗಿಟಾರ್) ಹಾಗೂ ಶ್ರೀ  ಪ್ರದ್ಯುಮ್ನ  ( ತಬಲಾ)  ಮುಂತಾದ  ದಿಗ್ಗಜ ಕಲಾವಿದರು ಮಸ್ಕತ್ಗೆ ಆಗಮಿಸಿದ್ದರು.

ಕತಾರ್‌ನಿಂದ ಬಂದು ಕೊಡಗು ನೋವಿಗೆ ಸ್ಪಂದಿಸಿದ ಕನ್ನಡಿಗರು

ಒಮಾನ್  ಭಾರತದ ರಾಯಭಾರಿ ಮುನು ಮಹಾವರ್ ಉಪಸ್ಥಿತರಿದ್ದರು. ಇದಲ್ಲದೆ ಬ್ಯಾಂಕ್ ಮಸ್ಕತ್ ನ  ಜಿ .ವಿ. ರಾಮಕೃಷ್ಣ (Head -National sales  & Expat services),  ದಿವಾಕರ್ ಶೆಟ್ಟಿ ( ಮ್ಯಾನೇಜಿಂಗ್  ಡೈರೆಕ್ಟರ್ - ಮಲ್ಟಿಟೆಕ್ ಕಾಂಟ್ರಾಕ್ಟಿಂಗ್ ) ಡಾ . ಸಿ.ಕೆ. ಅಂಚನ್ ( ಮ್ಯಾನೇಜಿಂಗ್ ಡೈರೆಕ್ಟರ್ - ವರ್ಲ್ಡ್ ವೈಡ್ ಬಿಸಿನೆಸ್ ಗ್ರೂಪ್ ), ರಂಗನಾಥ್ ( ಸಿಇಓ ಲಾರ್ಸನ್ ಅಂಡ್ ಟ್ಯೂಬ್ರೋ)  ಶ್ರೀ ಗಣೇಶ್ ಶೆಟ್ಟಿ  ( ಎಸ್ ಟಿ ಎಸ್), ಶ್ರೀ ಮಂಜುನಾಥ್ ನಾಯಕ್ (ಎಸ್ ಟಿ ಎಸ್ ), ಶ್ರೀ  ಹಿರಿಯಣ್ಣ ( ಗ್ರೂಪ್ ಫೈನಾನ್ಸ್ ಕಂಟ್ರೊಲರ್ , ಅಲ ಮಹಾ ಪೆಟ್ರೋಲಿಯಂ)  ಶ್ರೀ ಕಾರ್ಣಿಕ್ ( ಅರೀಜ್ ಆಯಿಲ್ಸ್), ಶಶಿಧರ ಶಾಸ್ತ್ರಿ, ಬ್ರಾಹ್ಮೀನ್ಸ್ ಕೆಫೆಯ ರಾಧಾಕೃಷ್ಣ ಅಡಿಗ, ಮಸ್ಕತ್ ಫಾರ್ಮಸಿಯ ರವಿ, ಸಂಘಟಕರಲ್ಲಿ ಒಬ್ಬರಾದ ರಾಮಕೃಷ್ಣ ಆದಿಯಾಗಿ ಗಣ್ಯಾತಿ ಗಣ್ಯರು ಕಾರ್ಯಕ್ರಮವನ್ನು ಆನಂದಿಸಿದರು. 

ಕರ್ನಾಟಕ ಸಂಘ  ಮಸ್ಕತ್-  ಕಳೆದ ವರ್ಷದಿಂದ ಕಲೆ, ಸಾಹಿತ್ಯ, ಭಾಷೆ ಮತ್ತು ಸಮಾಜದ ಏಳಿಗೆಗಾಗಿ ಅದ್ವಿತೀಯ ಸೇವೆ ಸಲ್ಲಿಸಿದ ಕನ್ನಡಿಗರೋರ್ವರನ್ನು  ಗುರುತಿಸಿ ‘ಮಸ್ಕತ್ ಕರ್ನಾಟಕ ರತ್ನ’ ಬಿರುದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸುವ ಪರಿಪಾಠ ಪ್ರಾರಂಭಿಸಿದೆ. ಈ  ವರ್ಷ ಕವಿತಾ ರಾಮಕೃಷ್ಣ  ವೇದಾಂತಿಯವರಿಗೆ ಈ ಪ್ರಶಸ್ತಿಯನ್ನು ನೀಡಿ  ಸನ್ಮಾನಿಸಿದೆ.

ಕರ್ನಾಟಕ ಸಂಘ- ಮಸ್ಕತ್ ಇದರ ಪದಾಧಿಕಾರಿಗಳಾದ ಶ್ರೀ ಕರುಣಾಕರ್ ರಾವ್ ( ಅಧ್ಯಕ್ಷರು), ಶ್ರೀ ರಮೇಶ್ ಕುಮಾರ್ ( ಉಪಾಧ್ಯಕ್ಷರು), ಶ್ರೀ ಭೀಮ್ ನೀಲಕಂಠ  ರಾವ್ ಹಂಗರಗೆ ( ಕೋಶಾಧಿಕಾರಿ), ಶ್ರೀ ಹಿತೇಶ್ ಮಂಗಳೂರು( ಕ್ರೀಡಾ ಕಾರ್ಯದರ್ಶಿ), ಶ್ರೀಮತಿ ಜಯಲಕ್ಷ್ಮಿ ಶೆಣೈ (  ಸಾಂಸ್ಕೃತಿಕ ಚಟುವಟಿಕೆ ಕಾರ್ಯದರ್ಶಿ) ಶ್ರೀಮತಿ  ಭಾರತಿ ಬಾಲಗುರಗಿ( ಮಹಿಳಾ ಸಂಘಟನೆ ಕಾರ್ಯದರ್ಶಿ ), ಶ್ರೀ ರಾಮಚಂದ್ರಪ್ಪ ( ಸಮುದಾಯ ಕಲ್ಯಾಣ ಕಾರ್ಯದರ್ಶಿ), ಶ್ರೀ ಕೆ.  ಎಸ್  ರಾಜು (ಉಪ ಕೋಶಾಧಿಕಾರಿ) ಹಾಜರಿದ್ದರು.  ಶ್ರೀಮಾತಾ ಹಿರಿಯಣ್ಣ ಅವರ ನಿರೂಪಣೆ ಗಮನ ಸೆಳೆಯಿತು.

click me!