ಕನ್ನಡಿಗರಿಗೆ ಸಿಹಿಸುದ್ದಿ: ಗಲ್ಫ್‌ನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭ!

By Web DeskFirst Published Sep 20, 2018, 8:23 PM IST
Highlights
  • ರಾಜ್ಯಾದ್ಯಂತ ಸಿನಿಮಾರಂಗದಲ್ಲಿ ಸಂಚಲನ ಹುಟ್ಟುಹಾಕಿರುವ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’
  •  ಸೆ. 20 ರಿಂದ ಸೆ.26ರವರೆಗೆ ಯುಎಇ, ಒಮಾನ್ ಮತ್ತು ಕುವೈಟ್‌ನ  ಹಲವು ಥಿಯೇಟರ್‌ಗಳಲ್ಲಿ ಪ್ರದರ್ಶನ

ಬೆಂಗಳೂರು: ಆಗಸ್ಟ್‌ನಲ್ಲಿ ಬಿಡುಗಡೆಯಾಗಿ ನಾಡಿನಾದ್ಯಂತ ಭಾರಿ ಸದ್ದು ಮಾಡಿರುವ ರಿಷಭ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಗುರುವಾರದಿಂದ ಗಲ್ಫ್ ದೇಶಗಳಲ್ಲೂ ತೆರೆಕಾಣುತ್ತಿದೆ.

ಅನಂತ್ ನಾಗ್ ನಟಿಸಿರುವ ಈ ಚಿತ್ರ ಸೆ. 20 ರಿಂದ ಸೆ.26ರವರೆಗೆ ಕೊಲ್ಲಿ ದೇಶಗಳಾದ ಯುಎಇ, ಒಮಾನ್ ಮತ್ತು ಕುವೈಟ್‌ನ  ಹಲವು ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಶೀಘ್ರದಲ್ಲಿ ಕತಾರ್ ಹಾಗೂ ಬಹರೈನ್‌ನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಮುಂದಿನ ದಿನಗಳಲ್ಲಿ ‘ಅಂಬಿ ನಿಂಗೆ ವಯಸ್ಸಾಯ್ತೋ!’ ಚಿತ್ರವೂ ಬಿಡುಗಡೆಯಾಗಲಿದೆ.

ಕೇರಳ ಗಡಿನಾಡು ಕಾಸರಗೋಡಿನ ಮಲಯಾಳಿ ನೆಲದಲ್ಲಿ ಕನ್ನಡ ಭಾಷೆಯ ಮೇಲಿನ ದಬ್ಬಾಳಿಕೆಯನ್ನು ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ತೆರೆ ಮೇಲೆ ತಂದಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನ, ಅನಂತ್ ನಾಗ್ ಅಭಿನಯಕ್ಕೆ ಮಾತ್ರ ಚಿತ್ರ ಸೀಮಿತವಾಗಿಲ್ಲ. ವಿವಿಧ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕುವ ಕಾಸರಗೋಡಿನ ನಮ್ಮದೆ ಕನ್ನಡಿಗರ ಬಗ್ಗೆ, ಅವರ ಸಮಸ್ಯೆ ನಿವಾರಣೆ ಬಗ್ಗೆ ಈ ಸಿನಿಮಾ ಪರಿಹಾರ ಸೂತ್ರವೊಂದನ್ನು ತರಲು ಪ್ರಯತ್ನಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ! 
 

click me!