ಬ್ಯಾರಿ ಚೆಂಬರ್ಸ್‌ನ ಹೊಸ ಶಾಖೆ ದುಬೈನಲ್ಲಿ ಆರಂಭ

Published : Sep 19, 2018, 05:59 PM ISTUpdated : Sep 19, 2018, 06:36 PM IST
ಬ್ಯಾರಿ ಚೆಂಬರ್ಸ್‌ನ ಹೊಸ ಶಾಖೆ ದುಬೈನಲ್ಲಿ ಆರಂಭ

ಸಾರಾಂಶ

ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರುವ ಮಂಗಳೂರು ಮೂಲದ ಸಂಸ್ಥೆಯೊಂದು ತನ್ನ ವ್ಯವಹಾರವನ್ನು ಇದೀಗ ದುಬೈಗೂ ವಿಸ್ತರಿಸಲಿದೆ.

ದುಬೈ(ಸೆ.19]: ಮಂಗಳೂರು ಮೂಲದ ಬ್ಯಾರಿ ಚೆಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್ (ಬಿಸಿಸಿಐ)ಯು ಯುಎಇಯಲ್ಲಿ ತನ್ನ ಹೊಸ ಶಾಖೆಯನ್ನು ಆರಂಭಿಸಲು ಮುಂದಾಗಿದೆ.

ಬಿಸಿಸಿಐ ಅಧ್ಯಕ್ಷ ಹಾಜೀ ಎಸ್. ಎಂ. ರಶೀದ್ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದರೆ ವಸತಿ ಸಚಿವ ಯು.ಟಿ. ಖಾದರ್, ಎಂಎಲ್‌ ಸಿ ಬಿ.ಎಂ.ಫಾರುಕ್, ತುಂಬೆ ಮೊಯ್ದೀನ್, ಎನ್‌ ಆರ್ ಐ ಉದ್ಯಮಿಗಳಾದ ಅಬ್ದುಲ್ ಲತೀಫ್, ಮಹಮದ್ ಮಾನ್ಸೂರ್ ಮತ್ತಿತರರು ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್ ಆರಂಭದಲ್ಲಿ ದುಬೈನಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು ಡಾ.ಬಿ.ಕೆ.ಯುಸಫ್, ಇಮ್ರಾನ್ ಅಹಮದ್, ಮಹಮದ್ ಅಲಿ ಉಚ್ಚಿಲ್, ಎಸ್.ಎಂ. ಬಷೀರ್ ಭಾಗವಹಿಸಿದ್ದರು. ಅಬ್ದುಲ್ ಮಡಮೂಳೆ, ಎಂ.ಇ.ಮಲ್ಲೂರು, ಹಿದಾಯಿತುಲ್ಲಾ, ಮೋಯಿದ್ದೀನ್ ಕುಟ್ಟಿ ಹಾಜಿ, ಅಲ್ತಾಫ್ ಡೈಮಂಡ್ ಲೀಸ್, ಅಬ್ದುಲ್ ರವೂಫ್, ತನ್ವೀರ್ ರಝಾಕ್, , ಸಿದ್ದಿಕ್ ಉಚ್ಚಿಲ್, ಮೊಹಮದ್ ಇಬ್ರಾಹಿಂ ಸಹ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ