ನಿರ್ದೇಶಕಿ ದೀಪಾ ಮೆಹ್ತಾರ ‘ಫನ್ನಿ ಬಾಯ್‌’ ಕೆನಡಾದಿಂದ ಆಸ್ಕರ್‌ಗೆ ನಾಮನಿರ್ದೇಶನ

Kannadaprabha News   | Asianet News
Published : Oct 31, 2020, 02:49 PM ISTUpdated : Oct 31, 2020, 02:56 PM IST
ನಿರ್ದೇಶಕಿ ದೀಪಾ ಮೆಹ್ತಾರ ‘ಫನ್ನಿ ಬಾಯ್‌’ ಕೆನಡಾದಿಂದ ಆಸ್ಕರ್‌ಗೆ ನಾಮನಿರ್ದೇಶನ

ಸಾರಾಂಶ

ಚಿತ್ರ ನಿರ್ದೇಶಕಿ ದೀಪಾ ಮಹ್ತಾ ಅವರ 'ಫನ್ನಿ ಬಾಯ್‌' ಚಿತ್ರ 93ನೇ ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಕೆನಡಾವನ್ನು ಪ್ರತಿನಿಧಿಸಲಿದೆ.   

ಲಾಸ್‌ ಏಂಜಲೀಸ್‌:  ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ವಿಭಾಗದಲ್ಲಿ ಫನ್ನಿ ಬಾಯ್‌ ಚಿತ್ರ ಆಯ್ಕೆಗೊಂಡಿದೆ.

ಮೆಹ್ತಾ ಮೂಲತಃ ದೆಹಲಿ ಮೂಲದವರಾಗಿದ್ದು, ಟೊರೆಂಟೋದಲ್ಲಿ ನೆಲೆಸಿದ್ದಾರೆ. ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳುತ್ತಿರುವ ದೀಪಾ ಮಹ್ತಾ ಅವರ 2ನೇ ಚಿತ್ರ ಇದಾಗಿದೆ. 2007ರಲ್ಲಿ ದೀಪಾ ಮೆಹ್ತಾ ನಿರ್ದೇಶನದ ವಾಟರ್‌ ಚಿತ್ರ ಆಸ್ಕರ್‌ ನಾಮನಿರ್ದೇಶನಗೊಂಡಿತ್ತು. 

ಲತಾ ಮಂಗೇಶ್ಕರ್‌ ಹಾಗೂ ಎ.ಆರ್. ರೆಹಮಾನ್‌ ಕಾಂಬೀನೆಷನ್‌ನ ಟಾಪ್‌ ಹಾಡುಗಳು!

'ಫನ್ನಿ ಬಾಯ್‌' ಕೆನಡಾ ಲೇಖಕ ಶ್ಯಾಮ್‌ ಸೆಲ್ವದುರೈ' ಅವರ ಕಾದಂಬರಿ ಆಧಾರಿತ ಚಿತ್ರವಾಗಿದೆ. ಕೋಲಂಬೋದ ಶ್ರೀಮಂತ ತಮಿಳು ಕುಟುಂಬದಲ್ಲಿ ಜನಿಸಿದ ಬಾಲಕನೊಬ್ಬನ ಕತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ.

 

ಕೆನಡಾದ ಟೆಲಿಫಿಲ್ಮ್‌ ಟ್ಟಿಟರ್‌ ಖಾತೆ ದೀಪಾ ಮೆಹ್ತಾ ಅವರ‌ ಸಿನಿಮಾ ಆಯ್ಕೆ ಆಗಿರುವುದರ ಬಗ್ಗೆ ಮಾಹಿತಿ ನೀಡಿದೆ. 'ಫೆನ್ನಿ ಬಾಯ್‌ ನಮ್ಮ ದೇಶದ ಬಗ್ಗೆ ತುಂಬಾನೇ ಹೇಳುತ್ತದೆ. ಆಯ್ಕೆ ಆಗಿರುವುದಕ್ಕೆ ನಮಗೆ ಸಂತೋಷವಾಗಿದೆ' ಎಂದು.  ಫೈನಲ್ ಆಸ್ಕರ್ ನಾಮಿನೇಷನ್ ಮಾರ್ಚ್ 15ರಂದು ಮುಕ್ತಾಯವಾಗಲಿದೆ.  ಏಪ್ರಿಲ್ 25, 2021ರಲ್ಲಿ ಅಕಾಡೆಮಿ ಅವಾರ್ಡ್‌ ಪ್ರದಾನವಾಗಲಿದೆ.

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ