ನ್ಯೂಜರ್ಸಿ ಒಕ್ಕಲಿಗ ಪರಿಷತ್ ಸಮಾವೇಶಕ್ಕೆ ಕುಮಾರಸ್ವಾಮಿ

By Web DeskFirst Published Jul 3, 2019, 10:45 PM IST
Highlights

ಸಿಎಂ ಕುಮಾರಸ್ವಾಮಿ ಅಮೆರಿಕ ಪ್ರವಾಸಕ್ಕೆ ತೆರಳಿರುವ ಅಸಲಿ ಕಾರಣ ಏನು? ಅದಕ್ಕೆ ಉತ್ತರ ಇಲ್ಲಿದೆ. ಹೌದು ಕುಮಾರಸ್ವಾಮಿ ಒಕ್ಕಲಿಗರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.

ನ್ಯೂಜರ್ಸಿ[ಜು. 03]  ಅಮೆರಿಕ ಒಕ್ಕಲಿಗ ಪರಿಷತ್ 16 ನೇ ಸಮ್ಮೇಳನ  ನ್ಯೂಜರ್ಸಿಯ ಪೋತ್ರೆಸ್ಟಲ್ ವಿಲೇಜ್ ನಲ್ಲಿ ಜು. 4 ರಿಂದ 6 ರವೆಗೆ ನಡೆಯಲಿದ್ದು ಅಮೆರಿಕ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರೊಂದಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್, ವಿಧಾನಪರಿಷತ್ ಸದಸ್ಯ ಎಲ್.ಭೋಜೆಗೌಡ ಭಾಗವಹಿಸಲಿದ್ದಾರೆ.

ಮೋದಿ ದಿಗ್ವಿಜಯ ಕಣ್ಣು ತುಂಬಿಕೊಂಡ ಕುವೈತ್ ಕನ್ನಡಿಗರು

ಅಮೆರಿಕ ಒಕ್ಕಲಿಗ ಪರಿಷತ್ ನ ಅಧ್ಯಕ್ಷ ಡಾ. ಬಾಬು, ಉಪಾಧ್ಯಕ್ಷ ಬಸವರಾಜು ಶಿವಣ್ಣ, ಖಚಾಂಚಿ ಮಮತಾ ಜಗದೀಶ್, ಕಾರ್ಯದರ್ಶಿ ದೀಪಕ್ ಬುಡಗುಪ್ಪೆ,  ಜಂಟಿ ಖಚಾಂಚಿ ಡಾ. ನವೀನ್ ಕೃಷ್ಣ, ರಾಘವ ಗೌಡ, ಹರೀಶ್ ಮರಿಯಪ್ಪ, ರವಿ ಸೋಮನಹಳ್ಳಿ, ಚಂದು ಕೆಂಪಯ್ಯ, ಹನುಮೇಶ್ ಶ್ರೀನಿವಾಸ್, ಡಾ. ಬಾಲು ಚಂದ್ರ, ಪ್ರಸನ್ನ ಕುಮಾರ್ , ಡಾ. ಅಮರನಾಥ್ ಲಕ್ಷ್ಮೀ ನಾರಾಯಣ, ಮಧು ರಂಗಯ್ಯ, ರಮೇಶ್ ಗೌಡ, ಧನಂಜಯ್ ಕೆಂಗಯ್ಯ, ಭಾಗ್ಯಾ ಪ್ರಸಾದ್ ಅಮೆರಿಕದ ಕಡೆಯಿಂದ ಪ್ರತಿನಿಧಿಸಲಿದ್ದಾರೆ.

ಮೂರು ದಿನದ ಕಾರ್ಯಕ್ರಮ ವಿವಿಧ ಸಾಂಸ್ಕ್ರತಿಕ ಚಟುವಟಿಕೆಗಳಿಗೂ ಸಾಕ್ಷಿಯಾಗಲಿದೆ. ಕರ್ನಾಟಕದ ಕಂಸಾಳೆ ನೃತ್ಯ ಅಮೆರಿಕದಲ್ಲಿ ತೆರೆದುಕೊಳ್ಳಲಿದೆ. ಹಾಸ್ಯ ಕಲಾವಿದ ಪೊ.ಕೃಷ್ಣೇಗೌಡ, ಅಜಯ್ ವಾರಿಯರ್, ಆಕಾಂಕ್ಷಾ ಬಾದಾಮಿ, ಗಾಯಕಿ ಡಾ. ಶಮಿತಾ ಮಲ್ನಾಡ್ ಅವರು ಮನರಂಜನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಜುಲೈ 6 ರಾತ್ರಿ ಗಾಯಕ ಮತ್ತು ಸಂಗೀತ ನಿರ್ದೇಶಕ ನವೀನ್ ಸಜ್ಜು ಮತ್ತು ತಂಡದವರಿಂದ ಮನರಂಜನೆ ಕಾರ್ಯಕ್ರಮ ಇರಲಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

click me!