ನೈಜೀರಿಯಾ NRIಗಳಿಂದ ನೆರೆ ಸಂತ್ರಸ್ತರಿಗೆ ದೇಣಿಗೆ

By Web Desk  |  First Published Oct 17, 2019, 12:02 AM IST

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ದೇಣಿಗೆ/ 1 ಲಕ್ಷ ರೂ. ಫಂಡ್ ನೀಡಿದ ನೈಜೀರಿಯಾ NRI ಗಳು/ ಉತ್ತರ ಕರ್ನಾಟಕಕ್ಕೆ ಮನ ಮಿಡಿದವರಿಗೆಲ್ಲ ಅನಂತ ಧನ್ಯವಾದ


ಬೆಂಗಳೂರು[ಅ. 16]  ಕರ್ನಾಟಕದ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನೈಜೀರಿಯಾದಲ್ಲಿ ನೆಲೆಸಿರುವ ಕನ್ನಡಿಗರು1 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ನೀಡಿದರು.

ಸಿಎಂ ಯಡಿಯೂರಪ್ಪ ಅವರ ಕೈಗೆ ಚೆಕ್ ಹಸ್ತಾಂತರ ಮಾಡಿದರು.  ನೈಜೀರಿಯಾ ಕನ್ನಡ ಸಂಘದ ಕಾರ್ಯದರ್ಶಿಗಳಾದ ಕಲ್ಕಟ್ಟೆ ಶ್ರೀನಿವಾಸ್ ರಾಮ್, ಸಂತೋಷ ತೀರ್ಥಹಳ್ಳಿ ಉಪಸ್ಥಿತರಿದ್ದರು.

Latest Videos

undefined

ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಅಕ್ಕ ಸಂಘಟನೆಯಿಂದಲೂ ನೀಡಲಾಗಿತ್ತು. ಅಗತ್ಯ ವಸ್ತುಗಳನ್ನು ಹೊತ್ತ ಲಾರಿಗೆ ಸಿಎಂ ಯಡಿಯೂರಪ್ಪ ನಿಶಾನೆ ತೋರಿಸಿದ್ದರು. ಅಕ್ಕ ಸಂಘಟನೆ ಮೂಲಕ ಕನಿಷ್ಠ 100 ಮನೆಗಳನ್ನು ನಿರ್ಮಿಸಿಕೊಡಲಿದೆ ಎಂದು ತಿಳಿಸಿದ್ದರು.

ನೆರೆ ಸಂತ್ರಸ್ತರಿಗೆ ಅಕ್ಕ ಸಂಘಟನೆಯಿಂದ ನೆರವು

ಒಟ್ಟಿನಲ್ಲಿ ಕರ್ನಾಟಕ, ಭಾರತ ಮಾತ್ರವಲ್ಲದೇ ದೇಶದಿಂದ ಹೊರಗೆ ವಿವಿಧ ಕೆಲಸ ಮಾಡಿಕೊಂಡಿರುವ ನಮ್ಮ ಜನರ ಮನಸ್ಸು ನೆರೆ ಸಂತ್ರಸ್ತರಿಗಾಗಿ ಮಿಡಿದಿದೆ ಮತ್ತು ಮಿಡಿಯುತ್ತಿದೆ. ಹಣ ನೀಡಿದವರಿಗೆಲ್ಲ ಅನಂತ ಅನಂತ ಧನ್ಯವಾದ ಅರ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

click me!