ಶಾದಿ ಭಾಗ್ಯ : ಸಿಎಂ ನಡೆಗೆ ಜಮೀರ್ ಅಹಮದ್ ಆಕ್ರೋಶ

By Web DeskFirst Published Aug 9, 2018, 3:02 PM IST
Highlights

ಶಾದಿ ಭಾಗ್ಯ ಯೋಜನೆಯ ಅನುದಾನ ಕಡಿತ ಮಾಡಿರುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು :  ಮೈತ್ರಿ ಸರ್ಕಾರದಲ್ಲಿ ಶಾದಿ ಭಾಗ್ಯ ಯೋಜನೆ ಮೂಲೆಗುಂಪು ಮಾಡಿ,  ಅನುದಾನ ಕಡಿತ ಮಾಡಲಾಗಿದೆ ಎಂದು ಸಚಿವ ಜಮೀರ್ ಅಹಮದ್ ಅವರು ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  

ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದು, ಶಾದಿ ಭಾಗ್ಯ ಯೋಜನೆಗೆ ನೀವು ಮಂಡಿಸಿದ ಬಜೆಟ್ ನಲ್ಲಿ125 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ  ಕುಮಾರಸ್ವಾಮಿ ಅವರ ಬಜೆಟ್ ನಲ್ಲಿ ಕೇವಲ 55  ಕೋಟಿ ಮಿಸಲಿರಿಸಲಾಗಿದೆ ಎಂದು ಹೇಳಿದ್ದಾರೆ. 

ಬಜೆಟ್ ಮಂಡನೆ ಬಳಿಕ ಸಚಿವ ಖಾದರ್ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಣಕಾಸಿನ ನೆರವು ಬಗ್ಗೆ ಪ್ರಶ್ನಿಸಿದ್ದರು. ಎಚ್.ಡಿ ರೇವಣ್ಣ ಅವರ ಗಮನಕ್ಕೆ ತಂದು ಸರಿಪಡಿಸಲು ಮನವಿ ಮಾಡಿದ್ದರು.  ನಾನು ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೆ.  ಈ ವೇಳೆ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಹಣ ಇಟ್ಟಿರುವ ಹಣದ ಪ್ರಮಾಣ ಮುಂದುವಿರಯುತ್ತದೆ ಎಂದು ಸಿಎಂ ಭರವಸೆ ನೀಡಿದ್ದರು. 

ಆದರೆ ಇದೀಗ ಅನುದಾನವನ್ನು  125 ಕೋಟಿಯಿಂದ 55 ಕೋಟಿಗೆ ಕಡಿತಗೊಳಿಸಿದ್ದಾರೆ. ಒಟ್ಟು 33592 ಅರ್ಜಿಗಳು ಬಾಕಿ ಇದ್ದು, 120 ಕೋಟಿ ಹಣ ಈ ಅರ್ಜಿಗಳ ವಿಲೇವಾರಿಗೆ ಬೇಕಾಗಿದೆ. ಆದರೆ ಮುಖ್ಯಮಂತ್ರಿ ಅನುದಾನ ಕಡಿತ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿ ಮಾಡಿರುವುದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಜಮೀರ್ ಅಹಮದ್ ಹೇಳಿದ್ದಾರೆ. 

click me!