
ಇಸ್ತಾಂಬುಲ್(ಆ.9): ಚೀನಾ ಮಹಾಗೋಡೆ ಎಲ್ಲಿ ಅಂತಾ ಶಾಲಾ ಮಕ್ಕಳಿಗೆ ಕೇಳಿ ನೋಡಿ. ಏನ್ರೀ ಚೀನಾ ಹೆಸರು ಹೇಳಿ ಪ್ರಶ್ನೇ ಕೇಳ್ತಿರಲ್ಲಾ ಅಂತಾ ಮುಖಕ್ಕೆ ಹೊಡೆದಂತೆ ಉತ್ತರ ಕೊಡುತ್ತವೆ. ಆದರೆ ಟರ್ಕಿ ದೇಶದ ‘ಕೌನ್ ಬನೇಗಾ ಕರೋಡ್ ಪತಿ’ಯ ಅವತರಣಿಕೆಯಲ್ಲಿ ಮಹಿಳಾ ಸ್ಪರ್ಧಿಯೋರ್ವಳು 2 ಲೈಫ್‌ಲೈನ್ ಬಳಿಸಿ ಟ್ರೋಲ್‌ಗೆ ಒಳಗಾಗಿದ್ದಾಳೆ.
ಹೌದು, 26 ವರ್ಷದ ಸು ಅಯಾನ್ ಎಂಬ ಯುವತಿ ಟರ್ಕಿಯ ಕರೋಡ್ ಪತಿ ಅವತರಣಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಈಕೆಗೆ ಚೀನಾದ ಮಹಾಗೋಡೆ ಎಲ್ಲಿದೆ ಅಂತಾ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ 4 ಆಯ್ಕೆಗಳನ್ನು ಕೊಡಲಾಗಿತ್ತು. ಈ ಆಯ್ಕೆಗಳಲ್ಲಿ ಚೀನಾ, ಭಾರತ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳಿದ್ದವು.
ಈ ಪ್ರಶ್ನೆಗೆ ಉತ್ತರ ಕೊಡಲು ತಡಕಾಡಿದ ಸು ಅಯಾನ್, ಕೊನೆಗೆ 2 ಲೈಫ್‌ಲೈನ್ ಸಹಾಯ ಪಡೆದು ಉತ್ತರ ನೀಡಿದ್ದಾಳೆ. ಆಶ್ಚರ್ಯ ಎಂದರೆ ಪ್ರಶ್ನೆಯಲ್ಲೇ ಚೀನಾ ದೇಶದ ಉಲ್ಲೇಖವಿದ್ದು, ಇದೂ ಕೂಡ ಮಹಿಳಾ ಸ್ಪರ್ಧಿಗೆ ಗೊತ್ತಾಗಿಲ್ಲ. ಸು ಅಯಾನ್ ಈ ಪ್ರಶ್ನೆಗೆ ಉತ್ತರ ಕೊಡಲು ಆಡಿಯನ್ಸ್ ಪೋಲ್ ಮತ್ತು ಫೋನ್ ಆಫ್ ಫ್ರೆಂಡ್ ಎರಡೂ ಲೈಫ್‌ಲೈನ್ ಬಳಸಿಕೊಂಡಿದ್ದಾಳೆ. ಅಂದಹಾಗೆ ಸು ಅಯಾನ್ ಅರ್ಥಶಾಸ್ತ್ರ ಪದವಿಧರೆ ಅಂದರೆ ನಿಮಗೆ ಆಶ್ಚರ್ಯವಾಗಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.