ರಾಷ್ಟ್ರಪತಿಗಳಿಗೆ ಎಚ್.ಡಿ ದೇವೇಗೌಡ ಪತ್ರ ಬರೆದು ಆಕ್ರೋಶ

By Web DeskFirst Published Aug 9, 2018, 2:06 PM IST
Highlights

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಪತ್ರ ಬರೆದು ಅಸ್ಸಾಂ ಎನ್ ಆರ್ ಸಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಹೇಳಿದ್ದಾರೆ. 

ಬೆಂಗಳೂರು :  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಪತ್ರ ಬರೆದು ಅಸ್ಸಾಂ ನಲ್ಲಿ ಸಿದ್ದವಾಗಿರುವ NRC ಪಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುಪ್ರೀಂ ಕೋರ್ಟ್ ಸೂಚನೆಯಂತೆ ಎಲ್ಲಾ ಭಾರತೀಯ ನಾಗರೀಕರಿಗೂ ಬದುಕುವ ಹಕ್ಕು ಇದೆ. ಕೋರ್ಟ್ ಆದೇಶದ ವಿರುದ್ದ  ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ದೇವೇಗೌಡ ಅವರು ಪತ್ರದಲ್ಲಿ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ. 

ಎಚ್ ಡಿ ದೇವೇಗೌಡರಿಗೆ, ಫಾರೂಕ್ ಅಬ್ದುಲ್ಲಾ ಆನಂದ್ ಶರ್ಮ, ರಾಮ್ ಗೊಪಾಲ್ ಯಾದವ್, ಸಂಜಯ್ ಸಿಂಗ್ ಸತೀಶ್ ಚಂದ್ರ ಮಿಶ್ರ ಸೇರಿ ಹಲವರು ಸಾಥ್ ನೀಡಿದ್ದು, ವಲಸಿಗರನ್ನು ಓಡಿಸುವ ನೆಪದಲ್ಲಿ ಅನೇಕ ಭಾರತೀಯರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

NRC ಪಟ್ಟಿ ಸಿದ್ದಗೊಂಡಿರುವ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿದೆ, ಪಟ್ಟಿಯಲ್ಲಿ ಮಾಜಿ ಸೈನಿಕರ ಹೆಸರನ್ನೂ ಸೇರಿಸಿರುವ ವಿಚಾರ ಬಹಿರಂಗವಾಗಿದ್ದು,  ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. 

click me!