ಎನ್ ಕೌಂಟರ್ ಸ್ಥಳಕ್ಕೆ ಯುವಕರು ಧಾವಿಸಿ ಆತ್ಮಹತ್ಯೆಗೆ ಯತ್ನ

Published : Mar 30, 2017, 12:36 PM ISTUpdated : Apr 11, 2018, 01:10 PM IST
ಎನ್ ಕೌಂಟರ್ ಸ್ಥಳಕ್ಕೆ ಯುವಕರು ಧಾವಿಸಿ ಆತ್ಮಹತ್ಯೆಗೆ ಯತ್ನ

ಸಾರಾಂಶ

ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಎನ್ ಕೌಂಟರ್ ನಡೆಯುತ್ತಿದ್ದು ಯುವಕರು ಅಲ್ಲಿಗೆ ಧಾವಿಸಿ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ಎಸೆಯುವುದು, ಆತ್ಮಹತ್ಯೆಗೆ ಯತ್ನಿಸುವುದು ಮಾಡುತ್ತಿದ್ದರೆನ್ನಲಾಗಿದ್ದು, ಅಂತಹ ಕೃತ್ಯಗಳನ್ನು ಎಸಗಬೇಡಿ ಎಂದು ಪೊಲೀಸರು ಯುವಕರಿಗೆ ಮನವಿ ಮಾಡಿಕೊಂಡಿದ್ದಾರೆ.

ನವದೆಹಲಿ (ಮಾ.30): ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಎನ್ ಕೌಂಟರ್ ನಡೆಯುತ್ತಿದ್ದು ಯುವಕರು ಅಲ್ಲಿಗೆ ಧಾವಿಸಿ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ಎಸೆಯುವುದು, ಆತ್ಮಹತ್ಯೆಗೆ ಯತ್ನಿಸುವುದು ಮಾಡುತ್ತಿದ್ದರೆನ್ನಲಾಗಿದ್ದು, ಅಂತಹ ಕೃತ್ಯಗಳನ್ನು ಎಸಗಬೇಡಿ ಎಂದು ಪೊಲೀಸರು ಯುವಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಎನ್ ಕೌಂಟರ್ ನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಬುಲೆಟ್ ಪ್ರೂಫ್ ವಾಹನ/ ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎನ್ ಕೌಂಟರ್ ನಡೆಯುತ್ತಿರುವ ಜಾಗಕ್ಕೆ ಯುವಕರು ಧಾವಿಸಿ ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲೆಸೆಯುತ್ತಿದ್ದರೆ ಇನ್ನು ಕೆಲವರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಡಿಜಿಪಿ ಎಸ್.ಪಿ ವೈದ್ ಹೇಳಿದ್ದಾರೆ.

ಎನ್ ಕೌಂಟರ್ ನಡೆಯುತ್ತಿರುವ ಸ್ಥಳಕ್ಕೆ ಧಾವಿಸಬೇಡಿ. ಮನೆಯಲ್ಲೇ ಇರಿ. ಅಲ್ವಾವಧಿ ರಾಜಕಿಯ ಉದ್ದೇಶಕ್ಕಾಗಿ ನಿಮ್ಮನ್ನು ಕೆಲವು ಸಮಾಜಘಾತುಕ ಶಕ್ತಿಗಳು ಬಳಸಿಕೊಳ್ಳುತ್ತಿವೆ. ಕಣಿವೆ ಪ್ರದೇಶದ ಶಾಂತಿ ಕದಡುತ್ತಿವೆ ಎಂದು ಡಿಜಿಪಿ ವೈದ್ ಮನವಿ ಮಾಡಿಕೊಂಡಿದ್ದಾರೆ.

ಉಗ್ರರು ತಪ್ಪಿಸಿಕೊಳ್ಳಲು ಸಹಾಯ ಮಾಡಲು ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲೆಸೆಯುವಂತೆ  ಕೆಲವು ಸಮಾಜ ಘಾತುಕ ಶಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಯುವಕರನ್ನು ಪ್ರೇರೇಪಿಸುತ್ತಿವೆ. ಎನ್ ಕೌಂಟರ್ ಶುರುವಾದೊಡನೆ 300 ವಾಟ್ಸಾಪ್ ಗ್ರೂಪ್ ಗಳು ಹುಟ್ಟಿಕೊಂಡವು. ಪ್ರತಿಯೊಂದು ಗ್ರೂಪ್ ನಲ್ಲಿ 250 ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಯುವರನ್ನು ಪ್ರೇರೇಪಿಸಿ ಈ ರೀತಿ ಮಾಡಿಸಲಾಗುತ್ತಿದೆ. ವಾಟ್ಸಾಪ್ ಗ್ರೂಪ್, ಇತರೆ ಸಾಮಾಜಿಕ ತಾಣದ ಖಾತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ ತಿಳಿಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್