
ಕೊಪ್ಪಳ(ಡಿ.12): ಅದು ಸಣ್ಣದಾಗಿ ಶುರುವಾದ ಜಗಳ ಇದೀಗ, ಹೆಮ್ಮರವಾಗಿ ಬೆಳೆದು ದೊಡ್ಡ ಅವಾಂತರವನ್ನೇ ಸೃಷ್ಠಿಸಿದೆ. ಜೊತೆಗೆ ಎರಡು ಧರ್ಮಗಳ ನಡುವೆ ಕಂದಕವನ್ನೇ ಸೃಷ್ಟಿಸಿದೆ. ಪೊಲೀಸ್ ಲಾಠಿಚಾರ್ಜ್ ಆದರೂ ಪರಿಸ್ಥಿತಿ ಇನ್ನೂ ತಹಬದಿಗೆ ಬಂದಿಲ್ಲ. ಅಷ್ಟಕ್ಕೂ ಏನಿದು ಗಲಾಟೆ? ಎಲ್ಲಿ ನಡೆದಿರೋದು ಅಂತೀರಾ? ಇಲ್ಲಿದೆ ವಿವರ
ಕೊಪ್ಪಳದ ಗಂಗಾವತಿ ನಗರದಲ್ಲಿ ನಿನ್ನೆ ಮಧ್ಯಾಹ್ನದಿಂದ ಹೊತ್ತಿ ಉರಿಯುತ್ತಿರುವ ಬೆಂಕಿ ಇನ್ನೂ ಆರಿಲ್ಲ. ಎರಡು ಕೋಮುಗಳ ಕೆಲ ಯುವಕರ ನಡುವಿನ ಈ ಗಲಾಟೆ ಇಡೀ ಊರಿನ ನೆಮ್ಮದಿಯನ್ನೇ ಕೆಡಸಿದೆ. ಇಂದಿನ ಹನುಮಮಾಲಾ ಧಾರಾಣ ಯಾತ್ರೆ ಹಾಗೂ ಈದ್ ಮಿಲಾದ್ ಆಚರಣೆಯ ಮೆರವಣಿಗೆಯ ಧ್ವಜ ಕಟ್ಟುವ ಸಂಬಂಧ ಕಿಡಿ ಹೊತ್ತಿದೆ.
ಧ್ವಜ ಕಟ್ಟುವ ವಿಚಾರಕ್ಕೆ ಪ್ರತಿರೋಧ-ಆಕ್ರೋಶ
ಆಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕರು ಕೆಲ ಮನೆಗಳ ಮೇಲೆ ದೌರ್ಜನ್ಯದಿಂದ ಧ್ವಜ ಕಟ್ಟಿದ್ದಾರೆ. ಆಗ ವಿರೋಧ ಮಾಡಿದ ಮನೆ ಮಹಿಳೆಯರ ಮೇಲೆ ಸಿಟ್ಟಿಗೆದ್ದ ಯುವಕರು ಹಲ್ಲೆ ನಡೆಸಿದ್ದಾರೆ. ಅಲ್ದೆ, ದೇವಸ್ಥಾನ, ಅಂಗಡಿಗಳ ಮೇಲೆ ಕಲ್ಲು ತೂರಿದ್ದಾರೆ.
ಹನುಮ ಭಕ್ತ, ಅಯ್ಯಪ್ಪ ಭಕ್ತರ ಮೇಲೆ ಲಾಠಿ ಚಾರ್ಜ್
ಇದರಿಂದ ಸಿಟ್ಟಿಗೆದ್ದ ಇನ್ನೊಂದು ಕೋಮಿನ ಯುವಕರು ಠಾಣೆಗೆ ಬಂದು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಟೈಮ್ನಲ್ಲಿ ಪ್ರತಿಭಟನಾನಿರತ ಹನುಮಮಾಲಾ ಹಾಗೂ ಅಯ್ಯಪ್ಪಮಾಲಾ ಭಕ್ತರ ಮೇಲೆ ಲಾಠಿ ಚಾರ್ಜ್ ನಡೆಸಿದರು.
ಇತ್ತ ಗಂಗಾವತಿ ನಗರದಲ್ಲಿ ಗಲಾಟೆ ಶುರುವಾಯ್ತು. ಪಂಪಾ ಸರ್ಕಲ್ ಬಳಿ ಅಂಗಡಿ ಹಾಗೂ ಬೈಕಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದರು. ಖಾಸಗಿ ನರ್ಸಿಂಗ್ ಹೋಂನ ಗಾಜುಗಳನ್ನ ಪುಡಿ ಪುಡಿ ಮಾಡಲಾಯಿತು. ಅಂಗಡಿಗಳ ಸಾಮಾನುಗಳನ್ನ ಚೇಲ್ಲಾಪಿಲ್ಲಿಯಾಗಿ ಕೆಡವಲಾಯಿತು. ಕೂಡಲೇ ಪೊಲೀಸ್ರು ಬೆಂಕಿಯನ್ನ ನಂದಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿತು.
ಕಿಚ್ಚಿನ ಮಧ್ಯೆ ಸಂಸದ ಕರಡಿ ಸಂಗಣ್ಣ
ಈ ಮಧ್ಯೆ ಸಂಸದ ಕರಡಿ ಸಂಗಣ್ಣ ಆಗಮಿಸಿ, ಗಲಾಟೆಯನ್ನ ನಿಯಂತ್ರಿಸುವಲ್ಲಿ ವಿಫಲವಾಗಿರುವ PSIಗಳಾದ ಕಾಳಿಕೃಷ್ಣ ಹಾಗೂ ಬಿರಾದಾರ್ ಅವರವನ್ನ ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿದರು. ಎಸ್ಪಿ ಅಮಾನತು ಭರವಸೆ ಬಳಿಕ ಪ್ರತಿಭಟನೆಯನ್ನ ಹಿಂಪಡೆಯಲಾಯ್ತು.
ಗಂಗಾವತಿಯಲ್ಲಿ 144 ಸೆಕ್ಷನ್ ಜಾರಿ
ಸದ್ಯ ಗಂಗಾವತಿ ನಗರದಲ್ಲಿ 144 ಸೆಕ್ಷೆನ್ ಜಾರಿಗೊಳಿಸಲಾಗಿದೆ. ಇವತ್ತು ಮೊದ್ಲಿಗೆ ನಗರದಲ್ಲಿ ಹನುಮ ಮಾಲಾ ಧಾರಿಗಳು ಶೋಭಾ ಯಾತ್ರೆ ನಡೆಸಿ ಬಳಿಕ ಆಂಜನೇಯ ಪರ್ವತಕ್ಕೆ ತೆರಳಲಿದ್ದಾರೆ. ಆಮೇಲೆ ಮುಸ್ಲಿಂ ಸಮುದಾಯದವರು ಈದ್ ಮೀಲಾದ್ ಮೆರವಣಿಗೆ ಮಾಡಲಿದ್ದಾರೆ. ಒಟ್ನಲ್ಲಿ ಧ್ವಜದ ಗಲಾಟೆ ಈಡೀ ನಗರದ ಶಾಂತಿಯನ್ನ ಕದಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.