
ನನಗೆ 22 ವರ್ಷ. ಒಂದು ವರ್ಷದಿಂದ ಸ್ವಪ್ನಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಈ ಒಂದು ವರ್ಷದಲ್ಲಿ ನನ್ನ ತಲೆಕೂದಲು ಉದುರತೊಡಗಿದೆ. ಬೊಕ್ಕತಲೆಯ ಆತಂಕ ಕಾಡುತ್ತಿದೆ. ಇದಕ್ಕೆ ಹಸ್ತಮೈಥುನವೇ ಕಾರಣವೇ? ಈ ಅಭ್ಯಾಸದಿಂದ ನೆನಪಿನ ಶಕ್ತಿಯೂ ಕುಗ್ಗುತ್ತದಂತೆ. ಇದು ನಿಜವೇ?
- ಹೆಸರು ಬೇಡ, ಊರು ಬೇಡ
ಸ್ವಪ್ನಸ್ಖಲನ ಒಂದು ಸಹಜಕ್ರಿಯೆ. ಅದರಿಂದ ತಲೆಕೂದಲು ಉದುರುವುದಾಗಲೀ, ಬೇರಾವುದೇ ತೊಂದರೆಯಾಗಲೀ ಆಗುವುದಿಲ್ಲ. ಅದರ ಬಗ್ಗೆಯೇ ಚಿಂತಿಸುತ್ತಲೇ ಇದ್ದರೆ ತೊಂದರೆಗಳು ಆಗಬಹುದು. ಹಸ್ತಮೈಥುನದಿಂದಲೂ ಯಾವುದೇ ಅಡ್ಡಪರಿಣಾಮಗಳಿಲ್ಲ. ಇದರಿಂದ ನೆನಪಿನ ಶಕ್ತಿ ಕುಗ್ಗುತ್ತದೆಂಬ ಭಯವೂ ಬೇಡ. ಇದೆಲ್ಲ ನಿಮ್ಮ ಭ್ರಮೆಯಷ್ಟೇ. ಸಹಜ ಸಂಭೋಗವಿಲ್ಲದೆ ಇರುವಾಗ ವೀರ್ಯ ಹೊರಬರಲು ಹಸ್ತಮೈಥುನ, ಸ್ವಪ್ನಸ್ಖಲನದ ನೆರವು ಬೇಕಾಗುತ್ತದೆ. ಅವುಗಳ ಬಗ್ಗೆ ಹೆಚ್ಚು ಯೋಚಿಸಿದರೆ ಅವು ಇನ್ನೂ ಹೆಚ್ಚಾಗುತ್ತವೆ. ಹಾಗಾಗಿ ಕೆಲವು ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ಈ ವ್ಯಸನಗಳಿಂದ ಹೊರಬರುವ ಪ್ರಯತ್ನ ಮಾಡಿ. ಒಳ್ಳೆಯ ಸಂಗೀತ, ಸದಭಿರುಚಿಯ ಸಿನಿಮಾ, ಸಾಹಿತ್ಯದ ಪುಸ್ತಕಗಳು, ಗೆಳೆಯರೊಂದಿಗೆ ಪ್ರವಾಸ, ಕುಟುಂಬದೊಂದಿಗೆ ಹೆಚ್ಚು ಹೊತ್ತು ಕಳೆಯುವುದು- ಇವನ್ನೆಲ್ಲ ರೂಢಿಸಿಕೊಂಡರೆ ಈ ಸಮಸ್ಯೆಯಿಂದ ದೂರವಾಗಿ ಮನಸ್ಸಿಗೆ ಹೆಚ್ಚು ಲವಲವಿಕೆ ಸಿಗುತ್ತದೆ. ಒಮ್ಮೊಮ್ಮೆ ಸ್ವಪ್ನಸ್ಖಲನ ಆದಾಗ ಅದು ಸಹಜವೆಂದು ಸುಮ್ಮನಿದ್ದುಬಿಡಿ.
(ಕನ್ನಡಪ್ರಭ ವಾರ್ತೆ, ಡಾ. ಬಿಆರ್ ಸುಹಾಸ್, ಲೈಂಗಿಕ ತಜ್ಞ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.