ರಂಜಾನ್ ಹಬ್ಬದ ರಜೆಗೆ ಕತ್ತರಿ ಹಾಕಿದ ಯೋಗಿ ಸರ್ಕಾರ

By Suvarna Web DeskFirst Published Jan 4, 2018, 10:43 AM IST
Highlights

ಯೋಗಿ ಸರ್ಕಾರದಿಂದ ಮುಸ್ಲಿಮರ ರಂಜಾನ್ ಹಬ್ಬದ  ರಜೆಗೆ ಕತ್ತರಿ ಹಾಕಲು ನಿರ್ಧರಿಸಿದೆ. ರಾಜ್ಯದ ಮದರಸಾಗಳಿಗೆ ನೀಡುತ್ತಿದ್ದ 92 ರಜೆಗಳನ್ನು 86 ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ನವದೆಹಲಿ (ಜ.04): ಯೋಗಿ ಸರ್ಕಾರದಿಂದ ಮುಸ್ಲಿಮರ ರಂಜಾನ್ ಹಬ್ಬದ  ರಜೆಗೆ ಕತ್ತರಿ ಹಾಕಲು ನಿರ್ಧರಿಸಿದೆ. ರಾಜ್ಯದ ಮದರಸಾಗಳಿಗೆ ನೀಡುತ್ತಿದ್ದ 92 ರಜೆಗಳನ್ನು 86 ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ಈ ಪೈಕಿ ರಂಜಾನ್ ರಜೆಯನ್ನು 46 ರಿಂದ 42 ಕ್ಕೆ ಇಳಿಸಲಾಗಿದೆ. ಮದರಸಾಗಳಲ್ಲಿ ಹಿಂದೂ ಹಬ್ಬಗಳಿಗೆ ರಜೆ ನೀಡಬೇಕು ಎಂದು ಆದೇಶಿಸಲಾಗಿದೆ. ಮುಸ್ಲಿಂ ಧಾರ್ಮಿಕ ವಿಧ್ವಾಂಸರು ಮತ್ತು ಸಾಮಾಜಿಕ ಕಾರ್ಯಕರ್ತರು ನಿರ್ಧಾರವನ್ನು ಸ್ವಾಗತಿದ್ದಾರೆ. ಆದರೆ ಆರೆಸ್ಸೆಸ್ ಶಾಲೆಗಳಲ್ಲಿ ಕೂಡ ಮುಸ್ಲಿಂ ಹಬ್ಬಗಳ ಬಗ್ಗೆ ಕಲಿಕೆಗೆ ಅವಕಾಶವಿರಲಿ ಎಂದು ಅವರು ಒತ್ತಾಯಿಸಿದ್ದಾರೆ. ರಕ್ಷಾಬಂಧನ, ಬುದ್ಧ ಪೂರ್ಣಿಮಾ ಮತ್ತು ಮಹಾವೀರ ಜಯಂತಿ ಮುಂತಾದ ಹತ್ತು ರಜೆಗಳನ್ನು ಹೆಚ್ಚಿಸಲಾಗಿದೆ.

Latest Videos

click me!