ದೀಪಕ್ ಮೃತದೇಹ ಗೌಪ್ಯ ರವಾನೆ; ಗೃಹ ಸಚಿವರು ಆಗಮಿಸಬೇಕೆಂದು ಹಿಂದೂ ಸಂಘಟನೆಗಳು ಪಟ್ಟು

Published : Jan 04, 2018, 10:08 AM ISTUpdated : Apr 11, 2018, 01:02 PM IST
ದೀಪಕ್ ಮೃತದೇಹ ಗೌಪ್ಯ ರವಾನೆ; ಗೃಹ ಸಚಿವರು ಆಗಮಿಸಬೇಕೆಂದು ಹಿಂದೂ ಸಂಘಟನೆಗಳು ಪಟ್ಟು

ಸಾರಾಂಶ

ದೀಪಕ್ ರಾವ್ ಮೃತದೇಹವನ್ನು ಗೌಪ್ಯವಾಗಿ ಶವಾಗಾರದಿಂದ ಸಾಗಿಸಿದ್ದಕ್ಕೆ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು (ಜ.04): ದೀಪಕ್ ರಾವ್ ಮೃತದೇಹವನ್ನು ಗೌಪ್ಯವಾಗಿ ಶವಾಗಾರದಿಂದ ಆ್ಯಂಬುಲೆನ್ಸ್ ಮೂಲಕ ಮನೆಗೆ ಸಾಗಿಸಿದ್ದಕ್ಕೆ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಡಿಜಿಪಿ ಕಮಲ್ ಪಂಥ್ ಜೊತೆ ಹಿಂದೂ ಮುಖಂಡರ ಮಾತುಕತೆ ವಿಫಲವಾಗಿದೆ.  ಸ್ಥಳಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಕ್ಷಣ ಆಗಮಿಸಬೇಕು.  ದೀಪಕ್ ಕುಟುಂಬದ ನೋವು ಆಲಿಸಿ ಪರಿಹಾರ ಕೊಡಬೇಕು.  ಮನೆಯವರ ಅನುಮತಿಯಿಲ್ಲದೆ ಸರ್ಕಾರ ಪೊಲೀಸರ ಮೂಲಕ ಶವ ಸಾಗಿಸಿದೆ.  ಈ ಮೂಲಕ ಸರ್ಕಾರ ಕುಟುಂಬದ ಸದಸ್ಯರಿಗೆ ಅಗೌರವ ತೋರಿದೆ.  ಅಲ್ಲದೆ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಗೃಹ ಮಂತ್ರಿಗಳೇ ಆಗಮಿಸಿ ಪರಿಹಾರದ ಚೆಕ್ ನೀಡಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಸ್ಥಳದಿಂದ ಕದಲುವುದಿಲ್ಲ ಎಂದು ಸಂಘ ಪರಿವಾರದವರು ಪಟ್ಟು ಹಿಡಿದಿದ್ದಾರೆ.

ಹಿಂದೂ ಸಂಘಟನೆ ಮುಖಂಡರೊಂದಿಗೆ ಎಡಿಜಿಪಿ ಕಮಲ್​ ಪಂತ್, ಪೊಲೀಸ್ ಆಯುಕ್ತ ಸುರೇಶ್ ಮಾತುಕತೆ ನಡೆಸಿದ್ದು, ಆದರೆ ಅವರು ಪಟ್ಟು ಸಡಿಲಿಸುತ್ತಿಲ್ಲ.  ಗೃಹ ಸಚಿವರು ಸ್ಥಳಕ್ಕೆ ಬರಬೇಕೆಂದು ಹಿಂದೂ ಸಂಘಟನೆಗಳ ಆಗ್ರಹಿಸಿವೆ.  ಎಜೆ ಆಸ್ಪತ್ರೆಗೆ ಶವ ವಾಪಸ್​ ತೆಗೆದುಕೊಂಡು ಹೋಗಬೇಕು. ಆಸ್ಪತ್ರೆಯಿಂದ ಮೆರವಣಿಗೆ ಮೂಲಕ ಶವ ತರಬೇಕು ಎಂದು  ಪೊಲೀಸರಿಗೆ ಗ್ರಾಮಸ್ಥರು ಹಾಗೂ ಪೋಷಕರ ಒತ್ತಾಯಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!