
ನವದೆಹಲಿ(ಆ.03): ಯೋಗ ಸಾಧನೆಯ ಜೊತೆ ಪತಾಂಜಲಿ ಆಯುರ್ವೇದ ಆಹಾರ ಉತ್ಪನ್ನಗಳೊಂದಿಗೆ ದೇಶದಲ್ಲಿಯೇ ಖ್ಯಾತಿ ಪಡೆದಿರುವ ಯೋಗಗುರು ರಾಮ್'ದೇವ್ ಸ್ವದೇಶಿ ಬಟ್ಟೆ ಉದ್ಯಮಕ್ಕೆ ಕಾಲಿಡುತ್ತಿದ್ದಾರೆ.
ಬಾಬಾ ರಾಮ್'ದೇವ್ ಪತಾಂಜಲಿ ಆಯುರ್ವೇದ ಲಿ. ಪುರುಷರು, ಮಹಿಳೆಯರು ಹಾಗೂ ಮಕ್ಕಳ ಬಟ್ಟೆಗಳನ್ನು ಉತ್ಪಾದಿಸಲಿದ್ದು 2018ರ ಏಪ್ರಿಲ್'ನಿಂದ ಕಾರ್ಯಾರಂಭಿಸಲಿದೆ. ಈ ಜವಳಿ ಉದ್ಯಮದಲ್ಲಿ ಮೊದಲ ವರ್ಷದಲ್ಲಿಯೇ 5 ಸಾವಿರ ಕೋಟಿ ಮಾರಾಟ ಗುರಿಯನ್ನು ಹೊಂದಿದೆ
ಆಧುನಿಕ ಉಡುಪುಗಳು ಸೇರಿದಂತೆ ವಿವಿಧ ರೀತಿಯ ಬಟ್ಟೆಗಳನ್ನು ಉತ್ಪಾದಿಸಿ ಮಾರಾಟ ಮಾಡಲಿದ್ದು, ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ. ವಿದೇಶಿ ಕಂಪನಿಗಳು ನೀಡುತ್ತಿರುವ ಉತ್ಪನ್ನಗಳಂತೆಯೇ ಉಡುಪುಗಳನ್ನು ಪತಾಂಜಲಿ ಸಂಸ್ಥೆ ತಯಾರಿಸಲಿದೆ'.
2018ರ ಏಪ್ರಿಲ್'ನಲ್ಲಿ ದೇಶಾದ್ಯಂತ 250 ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಬಿಗ್ ಬಜಾರ್ ಮಳಿಗೆಗಳಲ್ಲೂ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಗಳಲ್ಲೂ ಸಂಸ್ಥೆಯ ಉಡುಪುಗಳು ಲಭ್ಯವಿರುತ್ತದೆ. ಕಂಪನಿಯ ಪ್ರಮುಖ ಉದ್ದೇಶ ಸ್ವದೇಶಿ ಉತ್ಪನ್ನಗಳನ್ನು ದೇಶದಾದ್ಯಂತ ವಿಸ್ತರಿಸುವುದಾಗಿದೆ. ಮುಂದಿನ ದಿನಗಳಲ್ಲಿ ಮಾಂಸಾಹಾರ ಉದ್ಯಮಕ್ಕೂ ಕಾಲಿಡುವ ಯೋಜನೆಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.