ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಸಂಭ್ರಮ; ಹೇಗಿದೆ ಹೂವು-ಹಣ್ಣುಗಳ ದರ?

Published : Aug 03, 2017, 06:16 PM ISTUpdated : Apr 11, 2018, 12:51 PM IST
ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಸಂಭ್ರಮ; ಹೇಗಿದೆ ಹೂವು-ಹಣ್ಣುಗಳ ದರ?

ಸಾರಾಂಶ

ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಮಹಿಳೆಯರು ಮಡಿ, ಮೈಲಿಗೆ ಯಿಂದ ಹೊಸ ಸೀರೆಯುಟ್ಟು ಆಚರಿಸುವ ಸಾಂಪ್ರದಾಯಿಕ ಹಬ್ಬವಿದು. ಹೀಗಾಗಿ ಮಾರುಕಟ್ಟೆಯಲ್ಲಿ ಹೂವಿನ ಹಬ್ಬದ ಪರ್ಚೇಸಿಂಗ್ ಭರಾಟೆ ಜೋರಾಗಿತ್ತು. ಇನ್ನು ಹಬ್ಬ ಬಂತಂದ್ರೆ ಮಾರುಕಟ್ಟೆಯಲ್ಲಿ ಹೂ, ಹಣ್ಣು ವ್ಯಾಪಾರದ ಭರಾಟೆಯು ಜೋರಾಗಿರುತ್ತೆ. ಹಾಗಿದ್ರೆ ಇವತ್ತು ಹೂ ಹಣ್ಣುಗಳ ದರ ಹೇಗಿದೆ ಅನ್ನೋದನ್ನ ನೋಡೋಣ.

ಬೆಂಗಳೂರು (ಆ.03): ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಮಹಿಳೆಯರು ಮಡಿ, ಮೈಲಿಗೆ ಯಿಂದ ಹೊಸ ಸೀರೆಯುಟ್ಟು ಆಚರಿಸುವ ಸಾಂಪ್ರದಾಯಿಕ ಹಬ್ಬವಿದು. ಹೀಗಾಗಿ ಮಾರುಕಟ್ಟೆಯಲ್ಲಿ ಹೂವಿನ ಹಬ್ಬದ ಪರ್ಚೇಸಿಂಗ್ ಭರಾಟೆ ಜೋರಾಗಿತ್ತು. ಇನ್ನು ಹಬ್ಬ ಬಂತಂದ್ರೆ ಮಾರುಕಟ್ಟೆಯಲ್ಲಿ ಹೂ, ಹಣ್ಣು ವ್ಯಾಪಾರದ ಭರಾಟೆಯು ಜೋರಾಗಿರುತ್ತೆ. ಹಾಗಿದ್ರೆ ಇವತ್ತು ಹೂ ಹಣ್ಣುಗಳ ದರ ಹೇಗಿದೆ ಅನ್ನೋದನ್ನ ನೋಡೋಣ.

ನಾಳೆ ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಡಗರ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಲಕ್ಷ್ಮಿ ಪೂಜೆ ಮಾಡಲು ಹೂ ಹಣ್ಣುಗಳ ವ್ಯಾಪಾರದ ಭರಾಟೆಯು ಜೋರಾಗಿದೆ. ಕಳೆದ ವಾರಕ್ಕೆ ಹೋಲಿಸಿದ್ರೆ ಹಬ್ಬದ ಹಿನ್ನಲೆ ಎಲ್ಲಾ ಹೂವಿನ ದರ ಕೂಡ ಜಾಸ್ತಿಯಾಗಿದೆ. ಅಷ್ಟೆ ಅಲ್ಲ  ಒಂದೊಂದು ಮಾರ್ಕೆಟಲ್ಲಿ ಒಂದೊಂದು ರೀತಿ ಬೆಲೆಯಿದೆ. ಕೆ ಆರ್ ಮಾರ್ಕೆಟಲ್ಲಿ ಒಂದು ದರ ಆದ್ರೆ, ಇತ್ತ ಮಲ್ಲೇಶ್ವರಂ ಮಾರ್ಕೆಟಲ್ಲೆ ಬೇರೆ ದರ. ಹಾಗಿದ್ರೆ ಕೆಆರ್ ಹಾಗೂ ಮಲ್ಲೇಶ್ವರಂ  ಮಾರ್ಕೆಟಲ್ಲಿ ದರ ಹೇಗಿದೆ ಇಲ್ಲಿದೆ ನೀಡಿ

 ಹೂ                       ಕೆಆರ್ ಮಾರ್ಕೆಟ್ ದರ            ಮಲ್ಲೇಶ್ವರಂ ಮಾರ್ಕೆಟ್ ದರ 

ಕನಕಾಂಬರ  (ಕೆಜಿ)         1600 ರೂ                         2000 ರೂ     

ಕಾಕಡ  (ಕೆಜಿ)                 400 ರೂ                            600 ರೂ

ಗುಲಾಬಿ  (ಕೆಜಿ)              240 ರೂ                            300 ರೂ

ಮಲ್ಲಿಗೆ    (ಕೆಜಿ)             800 ರೂ                            1000 ರೂ

ಸುಗಂಧರಾಜ (ಕೆಜಿ)        160 ರೂ                           400 ರೂ

ಸೇವಂತಿಗೆ ಮಾರ್         120 ರೂ                            200 ರೂ       

ಆಮೂರ್ ಮಲ್ಲೆ  (ಕೆಜಿ)     800 ರೂ                           900 ರೂ

ತಾವರೆ ಜೋಡಿ 100                                             160 ರೂ

 

ಹಣ್ಣಿನ ದರವೂ ಗಗನಕ್ಕೇರಿದೆ.

ಸೇಬು ಹಣ್ಣು ಕೆಜಿ 160 ರೂ.

ದಾಳಿಂಬೆ 140 ರೂ

ಅನನಾಸು ಜೋಡಿ 80 ರೂ

ಬಾಳೆಹಣ್ಣು 10

ಹಬ್ಬಕ್ಕೆ ಬೇಕಾದ ಬಾಳೆ ಕಂದು, ಮಾವಿನೆಲೆ, ಹೂ ಹಣ್ಣುಗಳು ಹೀಗೆ ಎಲ್ಲವೂ ದರ ಗಗನಕ್ಕೇರಿದೆ. ಆದ್ರು ಜನ ಮಾತ್ರ ಹಬ್ಬದ ಸಂಭ್ರದಲ್ಲಿದ್ದು ಖರೀದಿಯಲ್ಲಿ ತೊಡಗಿದ್ದಾರೆ.  ಈ ಬಾರಿಯ ವರಮಹಾಲಕ್ಷ್ಮಿ ಪೂಜೆ ಎಲ್ಲರಿಗೂ ಸಂತಸ ತರಲಿ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ವದ ಶುಭಾಶಯಗಳು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಏರ್‌ಪೋರ್ಟ್‌ ಪಿಕ್-ಅಪ್ ನಿಯಮ ಸಡಿಲಿಕೆ: ಫ್ರೀ ಪಾರ್ಕಿಂಗ್ 15 ನಿಮಿಷಕ್ಕೆ ವಿಸ್ತರಣೆ!
'ಲಯನ್ ಕಿಂಗ್' ನಟಿಯ ದುರಂತ ಅಂತ್ಯ: ಬಾಯ್‌ಫ್ರೆಂಡ್‌ನಿಂದಲೇ ಕೊಲೆ