ಮೋದಿ ವಿರುದ್ಧ ನಿಂದನೆ ಗೊತ್ತುವಳಿ ಮಂಡಿಸಲು ಯೆಚೂರಿ ನೋಟಿಸ್

By Suvarna Web DeskFirst Published Nov 24, 2016, 12:26 PM IST
Highlights

ನೋಟಿನ ಅಪಮೌಲ್ಯೀಕರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಖುದ್ದಾಗಿ ಬಂದು ರಾಜ್ಯಸಭೆಯಲ್ಲಿ ಸ್ಪಷ್ಟೀಕರಣ  ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.  ಕಚೇರಿಯಲ್ಲಿದ್ದೂ ಸಂಸತ್ತು ಕಲಾಪಗಳಿಗೆ ಪ್ರಧಾನಿ ಹಾಜರಾಗದಿರುವುದು ಪ್ರತಿಪಕ್ಷಗಳಿಗೆ ಸಿಟ್ಟು ತರಿಸಿದೆ.

ನವದೆಹಲಿ (ನ.24): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಸತ್ತು ನಿಯಮಗಳ ನಿಂದನೆ ಗೊತ್ತುವಳಿಯನ್ನು ಮಂಡಿಸಲು ಕಮ್ಯೂನಿಸ್ಟ್ ನಾಯಕ ಸೀತರಾಮ್ ಯೆಚೂರಿ ರಾಜ್ಯಸಭೆಯಲ್ಲಿ ನೋಟಿಸ್ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಸತ್ತು ನಿಯಮಗಳ ನಿಂದನೆ ಗೊತ್ತುವಳಿಯನ್ನು ಮಂಡಿಸುವ ವಿಚಾರದಲ್ಲಿ ಸಭಾಧ್ಯಕ್ಷರಿಗೆ ನೋಟಿಸ್ ಕೊಡಲಾಗಿದೆ. ಅವರು ಅದನ್ನು ಪರಿಗಣಿಸುವರು ಎಂಬ ವಿಶ್ವಾಸವಿದೆ, ಎಂದು ಸೀತರಾಮ್ ಯೆಚೂರಿ ಹೇಳಿದ್ದಾರೆ.

ನೋಟಿನ ಅಪಮೌಲ್ಯೀಕರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಖುದ್ದಾಗಿ ಬಂದು ರಾಜ್ಯಸಭೆಯಲ್ಲಿ ಸ್ಪಷ್ಟೀಕರಣ  ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.  ಕಚೇರಿಯಲ್ಲಿದ್ದೂ ಸಂಸತ್ತು ಕಲಾಪಗಳಿಗೆ ಪ್ರಧಾನಿ ಹಾಜರಾಗದಿರುವುದು ಪ್ರತಿಪಕ್ಷಗಳಿಗೆ ಸಿಟ್ಟು ತರಿಸಿದೆ.

ಇಂದು ರಾಜ್ಯಸಭೆಯಲ್ಲಿ ನೊಟು ನಿಷೇಧದ ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಭೋಜನ ವಿರಾಮದ ಬಳಿಕ ಗೈರಾಗಿದ್ದರು.  

click me!