
ಬೀಜಿಂಗ್ [ನ.09] ಜಗತ್ತಿನ ಪ್ರಪ್ರಥಮ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ನ್ಯೂಸ್ ಆ್ಯಂಕರ್ ಚೀನಾದಲ್ಲಿ ಸೃಷ್ಟಿಯಾಗಿ ವಾರ್ತೆಯನ್ನು ಓದಿದ್ದಾನೆ.
ನವೆಂಬರ್7 ವೂಝೆನ್ ನಲ್ಲಿ ನಡೆದಿದ್ದ ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಈ ಕೃತಕ ಬುದ್ದಿಮತ್ತೆ ನ್ಯೂಸ್ ಆ್ಯಂಕರ್ ನ ಅನಾವರಣ ಮಾಡಿತು.
ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ ಈ ಆ್ಯಂಕರ್ ತಾನು ಬರವಣಿಗೆಯಲ್ಲಿ ನೀಡಿದ್ದನ್ನು ತೆರೆಯ ಮೇಲೆ ಓದಬಲ್ಲೆ ಎಂದಿದ್ದಾನೆ. ಚೀನದ ಕ್ಸಿನ್‌ಹುವಾ ಮತ್ತು ಸರ್ಚ್ ಇಂಜಿನ್ ಕಂಪೆನಿ ಸೊಗೋವ್ ಸಂಸ್ಥೆ ಜತೆಗೂಡಿ ಸೃಷ್ಟಿಸಿದ್ದ ಈ ನ್ಯೂಸ್ ಆ್ಯಂಕರ್ ಚೀನಾದ ಝಿನುವಾದ ಜಾಂಗ್ ಜಾಹೋ ಎಂಬ ಆ್ಯಂಕರ್ ನ ಪ್ರತಿರೂಪವಾಗಿದ್ದು ಮನುಷ್ಯರಂತೆ ಭಾವನೆಗಳನ್ನು ವ್ಯಕ್ತಪಡಿಸಿದ್ದಾನೆ.
ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಹೊಸ ಬೆಳವಣಿಗೆಗಳು ಇದ್ದೇ ಇರುತ್ತವೆ. ಅದಕ್ಕೆ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಆದರೆ ಇನ್ನು ಮುಂದೆ ಈ ಹೊಸ ಆ್ಯಂಕರ್ ನನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.