ಈ ಊರಲ್ಲಿ ನೈಟಿ ತೊಟ್ಟರೆ 2 ಸಾವಿರ ದಂಡ, ಹುಡುಕಿ ಕೊಟ್ಟರೆ ಸಾವಿರ ರೂ. ಬಹುಮಾನ

By Web DeskFirst Published Nov 9, 2018, 6:09 PM IST
Highlights

ಹೈದರಾಬಾದ್[ನ.09]  ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ತೊಡುವ ಕೆಲ ಬಟ್ಟೆಗಳ ಮೇಲೆ ನಿಷೇಧ ಹೇರುವುದನ್ನು ಉತ್ತರ ಭಾರತದಲ್ಲಿ ನೋಡಬಹುದಾಗಿತ್ತು. ಅಲ್ಲಿನ ಕಾಫ್ ಪಂಚಾಯಿತಿಗಳು ಇಂಥ ಅನೇಕ ತೀರ್ಮಾನಗಳನ್ನು ತೆಗೆದುಕೊಂಡು ಜನರ ಮೇಲೆ ಹೇರಿರುವ ಅನೇಕ ಉದಾಹರಣೆ ನೋಡಬಹುದು.

ಆದರೆ ಈಗ ದಕ್ಷಿಣ ಭಾರತದಲ್ಲೂ ಅಂಥದ್ದೇ ಒಂದು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಈ ಗ್ರಾಮದಲ್ಲಿ ಮಹಿಳೆಯರು ನೈಟಿ ತಿಟುವಂತಿಲ್ಲ. ಹಾಗೇನಾದರೂ ತೊಟ್ಟರೆ ಅವರಿಗೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ನಿಮಗೆ ಗರ್ಲ್‌ಫ್ರೆಂಡ್ ಇದ್ದಾರಾ? ಹುಡುಗಿ ಕೇಳಿದ್ದಕ್ಕೆ ಉದ್ಯಮಿ ಮಾಡಿದ್ದೇನು

ಹಗಲು ಹೊತ್ತಿನಲ್ಲಿ ಪಶ್ಚಿಮ ಗೋದಾವರಿಯ ಹಳ್ಳಿಯೋದರಲ್ಲಿ ತೆಗೆದುಕೊಂಡ ತೀರ್ಮಾನ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಟ್ ಸೆಟ್ ಮಾಡಿದೆ. ಇದಾದ ಮೇಲೆ ಸ್ಥಳೀಯ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತೊಕಲಪಲ್ಲೆ ಹಳ್ಳಿಯಲ್ಲಿ ನೈಟಿಗೆ ನಿಷೇಧ ಹೇರಲಾಗಿದೆ. ನೈಟಿ ಧರಿಸಿ ಓಡಾಡಿದವರ ಬಗ್ಗೆ ಮಾಹಿತಿ ನೀಡಿದರೆ ಅವರಿಗೆ ಸಾವಿರ ರೂ. ಬಹುಮಾನ ಸಹ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.  

click me!