ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಸ್ ಲೀಗ್: ಪ್ರಿ-ಕ್ವಾಟರ್ ಫೈನಲ್’ಗೆ ಸೈನಾ ಲಗ್ಗೆ

By Suvarna Web DeskFirst Published Aug 23, 2017, 4:34 PM IST
Highlights

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಲೀಗ್’ನಲ್ಲಿ ಭಾರತೀಯ ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಶುಭಾರಂಭ ಮಾಡಿದ್ದಾರೆ. ಸ್ವಿಟ್ಜರ್’ಲ್ಯಾಂಡ್’ನ ಸಬ್ರೀನಾ ಜಾಕ್ವೆಟನ್ನು 21-11 21-12 ನೇರ ಸಸೆಟ್’ಗಳಿಂದ ಸೋಲಿಸುವ ಮೂಲಕ ಪ್ರಿ-ಕ್ವಾಟರ್ ಫೈನಲ್’ಗೆ ಲಗ್ಗೆಯಿಟ್ಟಿದ್ದಾರೆ.

ಗ್ಲಾಸ್ಗೋ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಲೀಗ್’ನಲ್ಲಿ ಭಾರತೀಯ ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಶುಭಾರಂಭ ಮಾಡಿದ್ದಾರೆ.

ಸ್ವಿಟ್ಜರ್’ಲ್ಯಾಂಡ್’ನ ಸಬ್ರೀನಾ ಜಾಕ್ವೆಟನ್ನು 21-11 21-12 ನೇರ ಸಸೆಟ್’ಗಳಿಂದ ಸೋಲಿಸುವ ಮೂಲಕ ಪ್ರಿ-ಕ್ವಾಟರ್ ಫೈನಲ್’ಗೆ ಲಗ್ಗೆಯಿಟ್ಟಿದ್ದಾರೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಬೈ ಪಡೆದಿದ್ದ ಸೈನಾ ಆರಂಭದಿಂದಲೂ ಅಕ್ರಮಣಕಾರಿಯಾಗಿ ಆಟವಾಡಿ ಅನಾಯಾಸವಾಗಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಇನ್ನೂ ಸೈನಾ ಮುಂದಿನ ಪಂದ್ಯದಲ್ಲಿ ಭಾರತದ ತಾನ್ವಿ ಲಾಡ್ ಹಾಗೂ ವಿಶ್ವದ ನಂ. 2ನೇ ಶ್ರೇಯಾಂಕಿತೆ, ಕೊರಿಯಾದ ಸಂಗ್ ಜೀ ಹ್ಯೂನ್ ಅವರಿಬ್ಬರಲ್ಲಿ ವಿಜೇತರಾದವರ ವಿರುದ್ಧ ಸೆಣಸಾಡಲಿದ್ದಾರೆ.

click me!