ಎಸ್’ಎನ್’ಸಿ ಲ್ಯಾವೆಲಿನ್ ಭ್ರಷ್ಟಾಚಾರ ಪ್ರಕರಣದಿಂದ ಪಿನರಾಯಿ ವಿಜಯನ್ ಖುಲಾಸೆ

By Suvarna Web DeskFirst Published Aug 23, 2017, 4:09 PM IST
Highlights

ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್’ಗೆ ಬಿಗ್ ರಿಲೀಫ್ ಸಿಕ್ಕಿದೆ. ಎಸ್’ಎನ್’ಸಿ ಲ್ಯಾವೆಲಿನ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಿನರಾಯಿ ವಿಜಯನ್’ಗೆ ಕೇರಳ ಹೈಕೋರ್ಟ್ ಖುಲಾಸೆ ಮಾಡಿದೆ.

ತಿರುವನಂತಪುರಂ (ಆ.23): ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್’ಗೆ ಬಿಗ್ ರಿಲೀಫ್ ಸಿಕ್ಕಿದೆ. ಎಸ್’ಎನ್’ಸಿ ಲ್ಯಾವೆಲಿನ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಿನರಾಯಿ ವಿಜಯನ್’ಗೆ ಕೇರಳ ಹೈಕೋರ್ಟ್ ಖುಲಾಸೆ ಮಾಡಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಎಸ್’ಎನ್’ಸಿ ಲ್ಯಾವೆಲಿನ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಿನರಾಯಿ ವಿಜಯನ್ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲ.   ಅನೇಕ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ ಆದರೆ ಸಿಬಿಐ ವಿಜಯನ್ ಮೇಲೆ ಮಾತ್ರ ಆರೋಪ ಹೊರಿಸಿದೆ ಎಂದು ಹೈಕೋರ್ಟ್ ಹೇಳಿದೆ.

1995 ರಲ್ಲಿ ವಿಜಯನ್ ರಾಜ್ಯದ ಧನ ಸಚಿವರಾಗಿದ್ದರು. ಪಲ್ಲಿವಾಸಲ್, ಶೆಂಕುಲಾಮ್ ಮತ್ತು ಪನ್ನಿಯಾರ್’ನಲ್ಲಿ ನಲ್ಲಿ ಹೈಡ್ರೋ ಪವರ್ ಪ್ರಾಜೆಕ್ಟ್ ನಿರ್ಮಿಸಲು ಕೆನಡಾ ಮೂಲದ ಎಸ್’ಎನ್’ಸಿ ಲ್ಯಾವೆಲಿನ್ ಕಂಪನಿಯಿಂದ 374 ಕೋಟಿ ರೂ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

ಇಂದು ವಿಜಯನ್ ಅವರನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದೆ.

click me!