ಮುಟ್ಟಿನ ದಿನಗಳಲ್ಲಿ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಪ್ರವೇಶಿಸಬಾರದು: ಕಾಂಗ್ರೆಸ್ ನಾಯಕ

By Suvarna Web DeskFirst Published Mar 28, 2017, 6:25 AM IST
Highlights

ಋತುಸ್ರಾವ ಸಂದರ್ಭದಲ್ಲಿ ಮಹಿಳೆಯರು ಪೂಜಾಸ್ಥಳಗಳನ್ನು ಪ್ರವೇಶಿಸಬಾರದೆಂದು ಹೇಳಿರುವುದಕ್ಕೆ ವೈಜ್ಞಾನಿಕ ಕಾರಣಗಳಿವೆ. ಋತುಸ್ರಾವವು ಮಲಿನವಾಗಿರುತ್ತದೆ, ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ತಿರುವನಂತಪುರಂ (ಮಾ.28): ಋತುಸ್ರಾವದ ಅವಧಿಯಲ್ಲಿ ಮಹಿಳೆಯರು ಯಾವುದೇ ಧಾರ್ಮಿಕ ಸ್ಥಳಗಳೊಳಗೆ ಪ್ರವೇಶಿಸಬಾರದೆಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಋತುಸ್ರಾವ ಸಂದರ್ಭದಲ್ಲಿ ಮಹಿಳೆಯರು ಪೂಜಾಸ್ಥಳಗಳನ್ನು ಪ್ರವೇಶಿಸಬಾರದೆಂದು ಹೇಳಿರುವುದಕ್ಕೆ ವೈಜ್ಞಾನಿಕ ಕಾರಣಗಳಿವೆ. ಋತುಸ್ರಾವವು ಲಿನವಾಗಿರುತ್ತದೆ. ಮುಸ್ಲಿಮ್ ಮಹಿಳೆಯರು ಈ ಅವಧಿಯಲ್ಲಿ ಉಪವಾಸ ಮಾಡುವುದಿಲ್ಲ. ಈ ಅವಧಿಯಲ್ಲಿ ಮಹಿಳೆಯರು ದೇವಸ್ಥಾನ, ಮಸೀದಿ ಅಥವಾ ಚರ್ಚ್'ಗಾಗಲಿ ಹೋಗಬಾರದು ಎಂದು ಕೇರಳ ಪ್ರದೇಶ ಕಾಂಗ್ರೆಸ್'ನ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ಹೇಳಿದ್ದಾರೆ.

ಹಾಲಿ ಕಾಂಗ್ರೆಸ್ ಅಧಕ್ಷ ವಿ.ಎಂ. ಸುಧೀರನ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದು, ಊಮ್ಮನ್ ಚಾಂಡಿ ಆಪ್ತ ಎಂ.ಎಂ.ಹಸನ್ ಅವರಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

click me!