ಭಾಗ-1: ಮಸಾಜ್ ಪಾರ್ಲರ್ಗಳಲ್ಲಿದೆ ಹ್ಯಾಪಿ ಎಂಡಿಂಗ್!: ಸುವರ್ಣ ನ್ಯೂಸ್ ಕಾರ್ಯಾಚರಣೆಯಲ್ಲಿ ಖಾಕಿ ಬೆತ್ತಲು!

Published : Mar 28, 2017, 04:01 AM ISTUpdated : Apr 11, 2018, 12:55 PM IST
ಭಾಗ-1: ಮಸಾಜ್ ಪಾರ್ಲರ್ಗಳಲ್ಲಿದೆ ಹ್ಯಾಪಿ ಎಂಡಿಂಗ್!: ಸುವರ್ಣ ನ್ಯೂಸ್ ಕಾರ್ಯಾಚರಣೆಯಲ್ಲಿ ಖಾಕಿ ಬೆತ್ತಲು!

ಸಾರಾಂಶ

ಇವತ್ತು ಸಿಲಿಕಾನ್ ಸಿಟಿ ಬೆಂಗಳೂರಿನ  ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ. ಸುವರ್ಣನ್ಯೂಸ್​ ನಡೆಸಿದ ರಹಸ್ಯ ಕಾರ್ಯಾಚರಣೆಯೊಂದರಲ್ಲಿ ಪೊಲೀಸರ ಮುಖವಾಡ ಬಯಲಾಗಿದೆ. ನಗರವನ್ನು ಕಾಪಾಡುತ್ತೇವೆ ಅಂತ ನಿಂತಿರುವ ಪೊಲೀಸರೇ ದಂಧೆಗೆ ಇಳಿದರೆ ಏನಾಗುತ್ತದೆ ಎನ್ನುವ ನಗ್ನ ಸತ್ಯ ಸುವರ್ಣನ್ಯೂಸ್ ಬಿಚ್ಚಿಟ್ಟಿದೆ!

ಬೆಂಗಳೂರು(ಮಾ.28): ಇವತ್ತು ಸಿಲಿಕಾನ್ ಸಿಟಿ ಬೆಂಗಳೂರಿನ  ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ. ಸುವರ್ಣನ್ಯೂಸ್​ ನಡೆಸಿದ ರಹಸ್ಯ ಕಾರ್ಯಾಚರಣೆಯೊಂದರಲ್ಲಿ ಪೊಲೀಸರ ಮುಖವಾಡ ಬಯಲಾಗಿದೆ. ನಗರವನ್ನು ಕಾಪಾಡುತ್ತೇವೆ ಅಂತ ನಿಂತಿರುವ ಪೊಲೀಸರೇ ದಂಧೆಗೆ ಇಳಿದರೆ ಏನಾಗುತ್ತದೆ ಎನ್ನುವ ನಗ್ನ ಸತ್ಯ ಸುವರ್ಣನ್ಯೂಸ್ ಬಿಚ್ಚಿಟ್ಟಿದೆ!

ಬೆಂಗಳೂರು ನಗರ ಬೆಳೆಯುತ್ತಿದೆ. ಐಟಿ ಬಿಟಿ ಗಳಂಥಾ ತಂತ್ರಜ್ಞಾನವನ್ನು ತನ್ನೊಡಲೊಳಗಿಟ್ಟುಕೊಂಡಿರುವ ಸಿಲಿಕಾನ್ ಸಿಟಿ, ಅಷ್ಟೇ ಕರಾಳ ಮುಖಗಳನ್ನು ತನ್ನ ಅಂತರಾಳದಲ್ಲಿಟ್ಟುಕೊಂಡಿದೆ. ಬ್ಯೂಟಿ ಸಲೂನ್ ಹೆಸರಿನಲ್ಲಿ ಅಮಾಯಕರಿಗೆ ವಂಚನೆ ಮಾಡಿ, ವೇಶ್ಯಾವಾಟಿಕೆ ಅಡ್ಡೆಗಳಿಗೆ ಯುವ ಪೀಳಿಗೆಯನ್ನ ಸೆಳೆಯುತ್ತಿರುವ ಕಾಮುಕರ ದಂಧೆಯನ್ನು ಸುವರ್ಣನ್ಯೂಸ್ ಬಯಲು ಮಾಡಿದೆ.  ಇಂಟರ್'​ನೆಟ್​ ಮುಂದೆ ಕುಳಿತರೆ ಸಾಕು, ಇಂಥಾ ಅದೆಷ್ಟೋ ಫೋನ್ ನಂಬರ್​ಗಳು ನಮ್ಮ ಕೈಗೆ ಸಿಗುತ್ತವೆ. ಆದರೆ, ಆ ಟೆಕ್ನಾಲಜಿಗೆ ತಿಲಾಂಜಲಿಯಿಟ್ಟು, ಈ ಬಾರಿ ಈ ದಂಧೆಯ ವಿಸ್ತೃತ ರೂಪ ತಿಳಿದುಕೊಳ್ಳಲು ನಾವು ಡಯಲ್ ಮಾಡಿದ್ದು ಜಸ್ಟ್ ಡಯಲ್​'ಗೆ...!

ಫೋನ್ ಮಾಡಿ ಒಂದೇ ನಿಮಿಷ ಅಷ್ಟೇ! ಫೋನ್​ಗಳ ಸುರಿಮಳೆ. ಆ ಪೈಕಿ ಕೆಲ ನಿಜವಾದ ಸ್ಪಾ ಸೆಂಟರ್​'ಗಳು ಕರೆ ಮಾಡಿದರೆ, ಹೆಚ್ಚಿನವು ಸ್ಪಾ ಹೆಸರಿನಲ್ಲಿ ಹುಡುಗಿಯರನ್ನಿಟ್ಟುಕೊಂಡು ದಂಧೆ ನಡೆಸುತ್ತಿದ್ದ ಕರೆಗಳು. ಇಂದಿರಾನಗರ, ಮಲ್ಲೇಶ್ವರಂ, ಬಿಟಿಎಂ ಲೇಔಟ್, ಶೇಷಾದ್ರಿಪುರ, ಹಲಸೂರು ಹೀಗೆ ನಗರದ ಮೂವತ್ತು ಕಡೆಗಳಿಂದ ನಮಗೆ ಕರೆ  ಬಂದಾಗ,  ಎಲ್ಲರ ಬಾಯಲ್ಲೂ ಬಂದಿದ್ದು, ಒಂದೇ ಪದ 'ಹ್ಯಾಪಿ ಎಂಡಿಂಗ್'...!

ಹ್ಯಾಪಿ ಎಂಡಿಂಗ್ ಅಂದರೆ, ಏನು ಎಂದು ತಿಳಿದುಕೊಳ್ಳಲು ನಮಗೂ ಸ್ವಲ್ಪ ಸಮಯ ಬೇಕಾಯ್ತು. ಹೀಗೆ ಕರೆ ಬಂದ ಮೂವತ್ತು ಏರಿಯಾಗಳ ಪೈಕಿ ನಾವು ಆಯ್ಕೆ ಮಾಡಿಕೊಂಡಿದ್ದು ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿನ ಫ್ರೋಫೆಷನಲ್ ಸ್ಪಾ ಸೆಂಟರ್.

ಸಿಎಂಎಚ್ ರಸ್ತೆಯಲ್ಲಿರುವ ಪ್ರೊಫೆಶನಲ್ ಸ್ಪಾ ಕಡೆಯಿಂದಲೇ ನಮಗೆ ಕರೆ ಬಂತು. ಎಲ್ಲಿಗೆ ಬರಬೇಕು ಎಂದು ಕೇಳಿದಾಗ ಇಂದಿರಾನಗರ ಏಯ್ಟೀ ಫೀಟ್ ರಸ್ತೆಗೆ ಬನ್ನಿ ಸಾಕು, ನಾವೇ ಪಿಕಪ್ ಮಾಡುತ್ತೇವೆ ಅಂದವರು ನಾವಲ್ಲಿಗೆ ಹೋದ, ಎರಡೇ ನಿಮಿಷದಲ್ಲಿ ನಮ್ಮನ್ನ ಪಿಕಪ್ ಮಾಡಿದ್ರು...!

ಒಳಗೆ ಹೋದಾಗ ಕಾಣಿಸಿದ್ದು, ನಿಜಕ್ಕೂ ಹೇಸಿಗೆ ಹುಟ್ಟಿಸುವಂತಹ ಅಸಹ್ಯದ ವಾತಾವರಣ. ಹತ್ತು ಜನ ಪಿಂಪ್​'ಗಳು, ಇಪ್ಪತ್ತಕ್ಕೂ ಹೆಚ್ಚು ಕಸ್ಟಮರ್​'ಗಳು. ಟ್ರಾವೆಲ್ ಏಜೆಂಟರ ನೆಪದಲ್ಲಿ ಹೋದ ನಮಗೆ, ಅಲ್ಲಿನ ದಂಧೆ ಅನಾವರಣಗೊಂಡಿತ್ತು. ಇನ್ನು, ಒಳಗೆ ಹೋಗುವ ಮೊದಲೇ ಅವರಿಗೆ ಹಣ ಕೊಟ್ಟು ಒಳಗೆ ಎಂಟ್ರಿಯಾಗಲೇಬೇಕು.

ಈ ವೇಳೆ ಎಂಎಲ್​ಎ ಹೆಸರಿನಲ್ಲಿ ಟ್ರಾವೆಲ್ ಏಜೆಂಟ್'ನೊಂದಿಗೆ ಮಾತನಾಡಿದ ನಮಗೆ, ಅವರು ಹೇಳಿದ ಮಾತುಗಳನ್ನು ಕೇಳಿಸಿಕೊಂಡು ಆಶ್ಚರ್ಯವಾಗಿತ್ತು, ಇಲ್ಲಿ ಪಾರ್ಕಿಂಗ್ ಪ್ಲೇಸ್ ಕೊಡ್ತಾರಂತೆ. ಸೇಫ್ಟೀ ಇರುತ್ತಂತೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳೋ ಅಗತ್ಯವೇ ಇರೋದಿಲ್ಲ ಎಂದು ಹೇಳುತ್ತಿರುವಾಗಲೇ ಗಲಾಟೆಯ ಸದ್ದೊಂದು ಕೇಳಿ, ಫೋನ್ ಕಟ್ ಆಗುತ್ತೆ.

ಆ ಗಲಾಟೆ ಏನ್ ಗೊತ್ತಾ..?

ಟ್ರಾವೆಲ್ ಏಜೆಂಟ್ ಹೆಸರಿನಲ್ಲಿ ದಂಧೆಯ ಜಾಗದಲ್ಲಿದ್ದ ನಮ್ಮ ಪ್ರತಿನಿಧಿಯ ಮೇಲೆ ಅವರಿಗಾಗಲೇ ಅನುಮಾನ ಶುರುವಾಗಿತ್ತು. ಪಿಂಪ್​ಗಳ ಪೈಕಿ ಒಬ್ಬ  ನಮ್ಮ ಹತ್ತಿರ ಬಂದಿದ್ದ. ನಮ್ಮ ಜೇಬಿನಲ್ಲಿದ್ದ ಕ್ಯಾಮರಾ ಅವನ ಕಣ್ಣಿಗೆ ಬಿದ್ದಿತ್ತು. ಆದನ್ನ ಒಳಗಿಟ್ಟುಕೊಳ್ಳಿ ಅಂಥಾ ಹೇಳಿದ ಕೆಲವೇ ಕ್ಷಣಗಳಲ್ಲಿ, ಅಲ್ಲಿದೆ ಹಣವಿಲ್ಲದೇ ಸ್ಥಳಕ್ಕೆ ಬಂದಿದ್ದ ಗ್ರಾಹಕನೊಬ್ಬನಿಗೆ ಹಿಗ್ಗಾಮುಗ್ಗಾ ಏಟುಗಳು ಬೀಳುತ್ತಿದ್ದವು.

ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಕರಾಳ ದಂಧೆಯ ಒಂದು ಸ್ಯಾಂಪಲ್ ಅಷ್ಟೇ, ಇಂಥಾ ಹಲವು ದಂಧೆಗಳು ಸುವರ್ಣನ್ಯೂಸ್​ ನಡೆಸಿದ ರಹಸ್ಯ ಕ್ಯಾಮಾರದಲ್ಲಿ ಸೆರೆಯಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌