
ಬೆಂಗಳೂರು(ಮಾ.28): ಡಿವೈಎಸ್ಪಿ ಗಣಪತಿ ಮತ್ತು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನವನ್ನೇ ಸೃಷ್ಟಿಸಿತ್ತು. ಮೇಲಧಿಕಾರಿಗಳ ಕಿರುಕುಳ ಮತ್ತು ಸಚಿವ ಜಾರ್ಜ್ ಕಿರುಕುಳವನ್ನು ಗಣಪತಿ ಕ್ಯಾಮೆರಾ ಎದುರು ಹೇಳಿಕೊಂಡಿದ್ದರು. ಹೀಗಿರುವಾಗಲೂ ಆದರೆ, ಪೊಲೀಸ್ ಸಿಬ್ಬಂದಿಯ ಇಂಥಹ ಆತ್ಮಹತ್ಯೆಗಳಿಗೆ ಮೇಲಧಿಕಾರಿಗಳ ಕಿರುಕುಳ ಕಾರಣ ಅಲ್ಲವೇ ಅಲ್ಲ. ಇಂಥಾದ್ದೊಂದು ಉತ್ತರ ನೀಡಿದ್ದಾರೆ ಗೃಹ ಸಚಿವ ಪರಮೇಶ್ವರ್.
-ಕೌಟುಂಬಿಕ ಕಲಹ, ಸಾಲಬಾಧೆ
-ಸಾಂಸಾರಿಕ ಜೀವನದಲ್ಲಿ ಬೇಸರ
-ಗುಣಮುಖವಾಗದ ರೋಗ
-ಪ್ರೇಮ ಪ್ರಕರಣಗಳಲ್ಲಿ ವಿಫಲ
-ಜೀವನದಲ್ಲಿ ಜಿಗುಪ್ಸೆ
ಇಡೀ ಉತ್ತರದಲ್ಲಿ ಎಲ್ಲಿಯೂ ಮೇಲಾಧಿಕಾರಿಗಳ ಕಿರುಕುಳವಾಲೀ, ವರ್ಗಾವಣೆ ರಾಜಕಾರಣವಾಗಲೀ, ಸಚಿವರು, ಶಾಸಕರು, ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪವಾಗಲಿ ಆತ್ಮಹತ್ಯೆಗೆ ಕಾರಣ ಎಂಬ ಸಣ್ಣ ಉಲ್ಲೇಖವೂ ಇಲ್ಲ.
3 ವರ್ಷಗಳಲ್ಲಿ 52 ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ..!
2015ರಲ್ಲಿ ಅತೀ ಹೆಚ್ಚು, 21 ಮಂದಿ ಆತ್ಮಹತ್ಯೆ..!
ಇಂಥದ್ದೊಂದು ಅಂಕಿ ಅಂಶವನ್ನೂ ಸರ್ಕಾರ ನೀಡಿದೆ. ಈ ಉತ್ತರವನ್ನೇ ನಂಬೋದಾದರೆ, ಪೊಲೀಸರಿಗೆ ಇಲಾಖೆಯಲ್ಲಿ ಯಾವುದೇ ಕಿರುಕುಳವೂ ಇಲ್ಲ. ತೊಂದರೆಯೂ ಇಲ್ಲ. ಸರ್ಕಾರದ ಈ ಉತ್ತರವನ್ನು ನಂಬುವುದು ಬಿಡುವುದು ರಾಜ್ಯದ ಜನರಿಗೇ ಬಿಟ್ಟಿದ್ದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.