ಇದು ಹಸುವಲ್ಲೋ ಅಣ್ಣಾ... ವಿನೂತನವಾಗಿ ಶುರುವಾಗಿರುವ ಪ್ರತಿಭಟನೆ

By Suvarna Web DeskFirst Published Jul 4, 2017, 5:59 PM IST
Highlights

ಮಹಿಳಾ ದೌರ್ಜನ್ಯ ಖಂಡಿಸಿ ಆಗಾಗ ಬೇರೆ ಬೇರೆ ರೂಪದಲ್ಲಿ ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಪ್ಲಕಾರ್ಡ್ ಹಿಡಿದು ಬೀದಿಗಿಳಿಯುವುದನ್ನು ನೋಡಿದ್ದೇವೆ. ಆದರೆ ಮಹಿಳಾ ದೌರ್ಜನ್ಯದ ವಿರುದ್ಧ ಇಲ್ಲೊಬ್ಬರು ವಿನೂತನ ರೀತಿಯಲ್ಲಿ ಆಂದೋಲನ ಶುರು ಮಾಡಿದ್ದಾರೆ.

ಮುಂಬೈ (ಜು.03): ಮಹಿಳಾ ದೌರ್ಜನ್ಯ ಖಂಡಿಸಿ ಆಗಾಗ ಬೇರೆ ಬೇರೆ ರೂಪದಲ್ಲಿ ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಪ್ಲಕಾರ್ಡ್ ಹಿಡಿದು ಬೀದಿಗಿಳಿಯುವುದನ್ನು ನೋಡಿದ್ದೇವೆ. ಆದರೆ ಮಹಿಳಾ ದೌರ್ಜನ್ಯದ ವಿರುದ್ಧ ಇಲ್ಲೊಬ್ಬರು ವಿನೂತನ ರೀತಿಯಲ್ಲಿ ಆಂದೋಲನ ಶುರು ಮಾಡಿದ್ದಾರೆ.

ಇತ್ತೀಚಿಗೆ ಗೋ ರಕ್ಷಣೆ ನೆಪದಲ್ಲಿ ದೇಶದಲ್ಲಿ ಹತ್ಯೆಗಳು ಹೆಚ್ಚಾಗುತ್ತಿದೆ. ಇನ್ನೊಂದು ಕಡೆಯಲ್ಲಿ ಮಹಿಳೆಯರ ರಕ್ಷಣೆಯನ್ನು ನಿರ್ಲಕ್ಷಿಸಲಾಗಿದೆ. ನಾವು ಹಸುಗಳಿಗೆ ರಕ್ಷಣೆ ಕೊಡುವುದಾದರೆ ಮಹಿಳೆಯರಿಗೆ ಯಾಕಿಲ್ಲ ಎಂದು ಫೊಟೋಗ್ರಾಫರ್ ಸುಜಾತ್ರೋ ಘೋಷ್ ಪ್ರಶ್ನಿಸಿದ್ದಾರೆ. ಮಹಿಳೆಯರ ಮೇಲಿನ ಹಲ್ಲೆಯ ವಿರುದ್ಧ ದನಿ ಎತ್ತಿರುವ ಸುಜಾತ್ರೋ ಘೋಷ್ ಫೋಟೋಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವಿನೂತನವಾಗಿ ಆಂದೋಲನವನ್ನು ಶುರು ಮಾಡಿದ್ದಾರೆ. ಹಸುವಿನ ಮಾಸ್ಕ್ ಧರಿಸಿ ಮಹಿಳೆಯರ ಬೇರೆ ಬೇರೆ ಪೋಸ್’ಗಳನ್ನು ತೆಗೆದು ಹಸುವಿಗಿರುವಷ್ಟು ಸುರಕ್ಷತೆ ನಮಗಿಲ್ಲ ಎಂದು ಬಿಂಬಿಸಿ ಗಮನ ಸೆಳೆಯುವುದು ಇವರ ಉದ್ದೇಶ. ಇವರು ತೆಗೆದಿರುವ ಕೆಲವು ಫೋಟೋಗಳು ಇಲ್ಲಿವೆ.

 

click me!