
ಪಾಲಕ್ಕಾಡ್[ಜ.09]: ಶಬರಿಮಲೆ ಅಯ್ಯಪ್ಪ ದೇವಾಲಯದ ಮಾರ್ಗದಲ್ಲಿ ಇರುವ ಪ್ರಸಿದ್ಧ ವಾವರ್ ಮಸೀದಿಯ ಗರ್ಭಗೃಹ ಪ್ರವೇಶಿಸಲು ಯತ್ನಿಸಿದ ತಮಿಳುನಾಡಿನ ಹಿಂದು ಮಕ್ಕಳ್ ಕಚ್ಚಿ ಸಂಘಟನೆಯ ಮೂವರು ಮಹಿಳೆಯರು ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಾವರ್‌ಗೆ ಅಯ್ಯಪ್ಪಸ್ವಾಮಿಯ ಮುಸ್ಲಿಂ ಭಕ್ತ ಎಂಬ ಎಂಬ ಪ್ರತೀತಿಯಿದೆ. ಶಬರಿಮಲೆಗೆ ಹೋಗುವಾಗ ಭಕ್ತರು ಈ ಮಸೀದಿಗೆ ಪ್ರದಕ್ಷಿಣೆ ಹಾಕಿ ಕಾಯಿ ಒಡೆಯುವುದು ಸಂಪ್ರದಾಯ. ಹೀಗಾಗಿ ಇದು ಭಾವೈಕ್ಯತೆಯ ಸಂಕೇತ. ಆದರೆ ಮಸೀದಿಯ ಗರ್ಭಗೃಹದಲ್ಲಿ ಪ್ರವೇಶಿಸಲು ಪುರುಷ ಹಾಗೂ ಮಹಿಳಾ ಭಕ್ತರಿಬ್ಬರಿಗೂ ನಿರ್ಬಂಧವಿದೆ.
ಆದರೆ ತಮಿಳ್ನಾಡಿನ ಕೊಯಮತ್ತೂರು ಭಾಗದಿಂದ ಬಂದಿದ್ದ ಹಿಂದು ಮಕ್ಕಳ್ ಕಚ್ಚಿಯ ಈ 6 ಕಾರ್ಯಕರ್ತರು, ‘ಶಮರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶಾವಕಾಶ ಸಿಕ್ಕಿರುವಾಗ ನಾವೇಕೆ ಮಸೀದಿ ಗರ್ಭಗೃಹದಲ್ಲಿ ಪ್ರವೇಶಿಸಬಾರದು?’ ಎಂದು ಪ್ರಶ್ನಿಸಿ ನುಗ್ಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯತ್ನದ ಆರೋಪ ಹೊರಿಸಿ ಈ ಆರೂ ಮಂದಿಯನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ