ಅಕ್ಷರ ದಾಸೋಹಿ ಪುಟ್ಟಮ್ಮ ಮಹಿಳಾ ಸಾಧಕಿ ಪ್ರಶಸ್ತಿಗೆ ಭಾಜನ

By Suvarna Web DeskFirst Published Apr 29, 2017, 8:29 AM IST
Highlights

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಪ್ರತಿಯೊಂದು ಹೆಣ್ಣು ಶಾಲೆಗೆ ಹೋಗಿ ಓದಿ ವಿದ್ಯಾವಂತರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ಕೊಡಬೇಕು.. ಹೀಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಮಹಿಳೆ ಪುಟ್ಟಮ್ಮ. ಇವರ ಶೈಕ್ಷಣಿಕ ಕ್ಷೇತ್ರದಲ್ಲಿ ಏನೆಲ್ಲ ಸಾಧನೆ ಮಾಡಿದಾರೆ ಅಂತ ನೋಡೋಣ.

 

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಪ್ರತಿಯೊಂದು ಹೆಣ್ಣು ಶಾಲೆಗೆ ಹೋಗಿ ಓದಿ ವಿದ್ಯಾವಂತರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ಕೊಡಬೇಕು.. ಹೀಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಮಹಿಳೆ ಪುಟ್ಟಮ್ಮ. ಇವರ ಶೈಕ್ಷಣಿಕ ಕ್ಷೇತ್ರದಲ್ಲಿ ಏನೆಲ್ಲ ಸಾಧನೆ ಮಾಡಿದಾರೆ ಅಂತ ನೋಡೋಣ.

ಈ ಶಾಲೆಯ ಹೆಸರು ಭಾರತೀಯ ಸಂಸ್ಕ್ರತಿ ವಿದ್ಯಾಪೀಠ. 1957ರಲ್ಲಿ ಶಾಲೆ ಶುರುವಾದಾಗ ಶಾಲೆಯಲ್ಲಿ ಕೇವಲ 4 ವಿದ್ಯಾರ್ಥಿಗಳು ಹಾಗು 2 ಶಿಕ್ಷಕರು.  ಈಗ ಸಂಸ್ಥೆ 5000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 300 ಶಿಕ್ಷಕರನ್ನು ಹೊಂದಿದೆ. ಈ ಶಾಲೆಯ ಸಂಸ್ಥಾಪಕಿ ಶ್ರೀಮತಿ ಪುಟ್ಟಮ್ಮ.  ಚಾಮರಾಜಪೇಟೆಯಲ್ಲಿ ಸಂಸ್ಥಾಪಿಸಿದ ಈ ಶಾಲೆ ಹಾಗೂ ಕಾಲೇಜು ಇದೀಗ ವಿಜಯನಗರ, ರಾಮನಗರ, ಮಾಲಗಡ ಎಂಬ ಜಾಗಗಳಲ್ಲಿ ಪ್ರಾರಂಭಿಸಿದ್ದಾರೆ. ಈ ಸಂಸ್ಥೆ ಶಾಲೆಯಿಂದ ಶುರುವಾಗಿದ್ದು ಈಗ ಪಿಯು ಹಾಗು ಡಿಗ್ರಿ ಕಾಲೇಜ್  ಕೂಡ ಪ್ರಾರಂಭಿಸಲಾಗಿದೆ.

ಇವರ ಶಿಕ್ಷಣದಿಂದ  ವಿದ್ಯಾರ್ಥಿಗಳು ಹಲವಾರು ಕ್ಷೇತ್ರದಲ್ಲಿ ಮಿಂಚಿದ್ದಾರೆ. ಕ್ರೀಡೆ, ಶಿಕ್ಷಣ, ವೈದ್ಯಕೀಯ ಕ್ಷೇತ್ರ, ಇಂಜಿನಿಯರ್, ಸಿನಿಮಾ ಕ್ಷೇತ್ರ ಹಾಗು ರಾಜಕೀಯದಲ್ಲಿ ಮಿಂಚಿದ್ದಾರೆ. ಹಿಂದಿ ಕಲಿಯಲು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂಪ್ಪ,ಬಂಗಾರಪ್ಪ, ಉಪ ಮುಖ್ಯಮಂತ್ರಿ ಈಶ್ವರಪ್ಪ, ನಿರ್ದೇಶಕ ನಾಗಾಭರಣ ಬರುತ್ತಿದ್ದರು. ಇನ್ನು ನಟಿ ಪ್ರೇಮಾ ಅವರು ಕೂಡ ಇದೇ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದ್ರು. ಇನ್ನು ನಾಡ ಪ್ರಭು ಕೆಂಪೆಗೌಡ ಪ್ರಶಸ್ತಿ, ದ್ರಾವಿಡ ಬ್ರಾಹ್ಮಣ ಪ್ರಶಸ್ತಿ, ಮೈತ್ರಿಸಮೂಹದಿಂದ ಮಾಗಣಿ ಇವರಿಗೆ ದೊರೆತ ಪ್ರಶಸ್ತಿಗಳು.

’ತುಮ್ ಬುರಾಯಿಯೊಂಕೊ ಮಿಟಾನೆಕಿ ಹತಿಯಾರ್ ಬನೊ’ ಎಂಬ  ಗಾಂಧಿಯವರು ಮಾತುಗಳು ಪ್ರೇರಣೆಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ 60 ವರ್ಷಗಳಿದಂದ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ..  ಇವರ ಈ ಸೇವೆಗೆ ನಮ್ಮದೊಂದು ಸಲಾಂ..

 

click me!