ಸಣ್ ಸಣ್ ಸುದ್ದಿಗಳು

Published : Apr 29, 2017, 07:46 AM ISTUpdated : Apr 11, 2018, 12:48 PM IST
ಸಣ್ ಸಣ್ ಸುದ್ದಿಗಳು

ಸಾರಾಂಶ

ಸ್ಥಳೀಯ ಸುದ್ದಿಗಳು | ರಾಷ್ಟ್ರೀಯ ಸುದ್ದಿಗಳು | ವಿದೇಶ ಸುದ್ದಿಗಳು | ರಾಜಕೀಯ ಸುದ್ದಿಗಳು | ವಾಣಿಜ್ಯ ಸುದ್ದಿಗಳು | ಅಪರಾಧ ಸುದ್ದಿಗಳು | ಮನರಂಜನೆ ಸುದ್ದಿಗಳು | ಕ್ರೀಡಾ ಸುದ್ದಿಗಳು | ಜೀವನಶೈಲಿ | ತಂತ್ರಜ್ಞಾನ | ಆರೋಗ್ಯ | ಶಿಕ್ಷಣ |

ದೇಶದ ರಸ್ತೆಗಳಿಂದ ವಿಐಪಿ ಸಂಸ್ಕೃತಿಯನ್ನು ತೆಗೆಯುವುದು ಕೂಡಾ ಸ್ವಚ್ಛ ಭಾರತದ ಭಾಗವಾಗಿದೆಯೆಂದಿರುವ ಪ್ರಧಾನಿ ನರೇಂದ್ರ ಮೋದಿ, ನವಭಾರತದಲ್ಲಿ ವಿಐಪಿ ಸಂಸ್ಕೃತಿ ಬದಲಾಗಿ ಇಪಿಐ (ಎವ್ರಿ ಪರ್ಸನ್ ಇಸ್ ಇಂಪಾರ್ಟೆಂಟ್)  ಸಂಸ್ಕೃತಿ ಇರುವುದು ಎಂದು ಹೇಳಿದ್ದಾರೆ. ಮನ್ ಕೀ ಬಾತ್ ನಲ್ಲಿ ಮಾತನಾಡಿದ ಮೋದಿ,  ಕಾರುಗಳ ಮೇಲಿಂದ ಕೆಂಪು ದೀಪ ತೆಗೆಯುವುದರ ಮೂಲಕ ವಿಐಪಿ ಸಂಸ್ಕೃತಿಗೆ ತಿಲಾಂಜಲಿ ನೀಡಲಾಗಿದೆ ಎಂದು ಹೇಳಿದ್ದಾರೆ.  

ಶ್ರೀನಗರ: ಬಿಗಡಾಯಿಸುತ್ತಿರುವ ಕಾಶ್ಮೀರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಇಂದು ಜಮಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಶ್ರೀನಗರದಲ್ಲಿ ಭೇಟಿಯಾಗಿದ್ದಾರೆ. ಕಳೆದ ವಾರ ಮೆಹಬೂಬಾ ಮುಫ್ತಿ ಗೃಹ ಮಂತ್ರಿ ರಾಜನಾಥ್ ಸಿಂಗ್'ರನ್ನು ಭೇಟಿಯಾಗಿ, ಎರಡು-ಮೂರು ತಿಂಗಳೊಳಗೆ ರಾಜ್ಯದ ಪರಿಸ್ಥಿತಿಯನ್ನು ಸಹಜರೂಪಕ್ಕೆ ತರುವುದಾಗಿ ಭರವಸೆ ನೀಡಿದ್ದರು.

ಲಂಡನ್: ಮುಂಬರುವ ಮೇ.28ರಂದು ಪಾಕಿಸ್ತಾನದ ಪರಮಾಣು ಶಸ್ತ್ರಗಳು ಹಾಗೂ ಬಲೂಚಿಸ್ತಾನದಲ್ಲಿ ಪಾಕ್-ಚೀನಾ ಮೈತ್ರಿಯ ವಿರುದ್ಧ ಜಗತ್ತಿನ ವಿವಿಧ ನಗರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಸ್ವತಂತ್ರ ಬಲೂಚಿಸ್ತಾನ್ ಚಳುವಳಿ (ಎಫ್’ಬಿಎಮ್) ಹೇಳಿದೆ. ಮೇ.28, 1998ರಲ್ಲಿ ಬಲೂಚಿಸ್ತಾನದ ಚಾಗೈ ಪರ್ವತಶ್ರೇಣಿಗಳಲ್ಲಿ ಪರಮಾಣು ಪರೀಕ್ಷೆ ನಡೆಸುವ ಮೂಲಕ ಪಾಕಿಸ್ತಾನವು ಅಲ್ಲಿನ ನೆಲವನ್ನು ಶಾಶ್ವತವಾಗಿ ಕೆಡಿಸಿದೆ ಎಂದು ಚಳುವಳಿ ನಾಯಕ  ಹಿರ್ಬೈರ್ ಮಾರ್ರಿ ಹೇಳಿದ್ದಾರೆ.

ಮುಂಬೈ: ಗೀಚಲಾದ ಅಥವಾ ಕಳೆಗುಂದಿದ ನೋಟುಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು ಎಂದು ರಾಷ್ಟ್ರಾದ್ಯಂತ ಇರುವ ಎಲ್ಲ ಬ್ಯಾಂಕ್‌'ಗಳಿಗೆ ಆರ್‌'ಬಿಐ ಸೂಚನೆ ನೀಡಿದೆ. ನೂತನವಾಗಿ ಬಿಡುಗಡೆ ಮಾಡಲಾಗಿರುವ ರೂ.500 ಮತ್ತು ರೂ.2,000 ಮುಖಬೆಲೆಯ ನೋಟುಗಳ ಮೇಲೆ ಏನಾದರೂ ಬರೆದಿದ್ದರೆ ಅಥವಾ ಒಗೆದ ಬಟ್ಟೆಯಲ್ಲಿ ನೆನೆದ ಕಾರಣಕ್ಕೆ ಬಣ್ಣ ಕಳೆಗುಂದಿದ ನೋಟುಗಳನ್ನು ಬ್ಯಾಂಕ್‌ಗಳು ತಿರಸ್ಕರಿಸುತ್ತಿವೆ ಎಂದು ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳು ನೋಟು ತಿರಸ್ಕರಿಸುವಂತಿಲ್ಲ ಎಂದು ಆರ್‌ಬಿಐ ಹೇಳಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!