ಅಂಧರ ಬಾಳಿಗೆ ಬೆಳಕಾಗಿರುವ ಡಾ.ಸಿಬಿಲ್

By Suvarna Web DeskFirst Published Apr 29, 2017, 12:55 PM IST
Highlights

ಹೆಸರು ಡಾ.ಸಿಬಿಲ್​​ ಮೇಶರಮಕರ್​​. ಬೀದರ್​​ನಲ್ಲಿ ವೇಲಮೆಗನಾ ಕಣ್ಣಿನ ಆಸ್ಪತ್ರೆ ಕಟ್ಟಿ, 1500ಕ್ಕೂ ಹೆಚ್ಚು ಅಂಧರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆಯೇ ಇವರ ಮನೆ. ರೋಗಿಗಳೇ ಮಕ್ಕಳು.

ಅನಾಥ ಮಕ್ಕಳ ಪಾಲಿಗೆ ಅಮ್ಮಾನೂ ಇವ್ರೇ, ರೋಗಿಗಳ ಪಾಲಿನ ವೈದ್ಯರೂ ಇವ್ರೇ. ಹಸಿದ ಹೊಟ್ಟೆಗೆ ಅನ್ನ ಕೊಡೋ ಅನ್ನಪೂರ್ಣೆಯೂ ಇವ್ರೇ, ಅಂಧರ ಬಾಳನ್ನು ಬೆಳಗಿದ ಬೆಳಕೂ ಇವ್ರೇ.

ಹೆಸರು ಡಾ.ಸಿಬಿಲ್​​ ಮೇಶರಮಕರ್​​. ಬೀದರ್​​ನಲ್ಲಿ ವೇಲಮೆಗನಾ ಕಣ್ಣಿನ ಆಸ್ಪತ್ರೆ ಕಟ್ಟಿ, 1500ಕ್ಕೂ ಹೆಚ್ಚು ಅಂಧರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆಯೇ ಇವರ ಮನೆ. ರೋಗಿಗಳೇ ಮಕ್ಕಳು.

ಮೂಲತಃ ಮಂಗಳೂರು, ಬಂದಿದ್ದು ಬೀದರ್’​ಗೆ. 17 ವರ್ಷಗಳಿಂದ ಬಡ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡ್ತಿದ್ದಾರೆ.. 25ಕ್ಕೂ ಹೆಚ್ಚು ಮಕ್ಕಳಿಗೆ ಮಕ್ಕಳಿಗೂ ಆಶ್ರಯ ನೀಡಿದ್ದಾರೆ.

ಇವರ ಸೇವೆಯನ್ನು ಕಂಡು, ಹಲವು ಸಂಘ ಸಂಸ್ಥೆಗಳು ಗೌರವಿಸಿವೆ. ಬೀದರ್​ ಜಿಲ್ಲಾಡಳಿತ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇಂಥಾ ಸಾಧಕಿಗೆ, ಈಗ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದ ಮಹಿಳಾ ಪ್ರಶಸ್ತಿಯ ಗರಿ.

click me!