
ಮನಸ್ಸೊಂದಿದ್ರೆ ಬೆಟ್ಟವನ್ನು ಬೇಕಾದ್ರೂ ಬಾಗಿಸಬಹುದು. ಛಲವೊಂದಿದ್ರೆ ತಿರುಗೋ ಭೂಮಿಯನ್ನೂ ನಿಲ್ಲಿಸಬಹುದು. ನೀರೇ ಇಲ್ಲದ ನೆಲದಲ್ಲಿ ನೀರು ಜಿನುಗುವಂತೆ ಮಾಡಬಹುದು ಅನ್ನೋದಕ್ಕೆ ಈ ಆಧುನಿಕ ಭಗೀರಥಿನೇ ಸಾಕ್ಷಿ..
ಹೆಸರು ಗೌರಿ ನಾಯಕ್. ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರ. ಇವರಿಗೆ 6 ಗುಂಟೆ ತೋಟ ಇದೆ. ಅದಕ್ಕೆ ನೀರು ಬೇಕು ಅನ್ನಿಸಿದಾಗ, ತಾವೇ ಸಲಕರಣೆ ಹಿಡಿದು 60 ಅಡಿ ಬಾವಿ ತೋಡಿದರು.
ಒಂದಡಿ ಆಳ ತೋಡೋದಕ್ಕೆ ಅಬ್ಬಬ್ಬಾ ಅಂತಾರೆ ಜನ. ಅಂಥಾದ್ರಲ್ಲಿ 60 ಅಡಿ ಆಳದ ಬಾವಿಯನ್ನ ಒಬ್ಬರೇ ತೋಡಿ, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ ಗೌರಿ ನಾಯಕ್. ಪಾತಾಳದಿಂದ ಗಂಗೆ ಉಕ್ಕಿ ಬರೋವರೆಗೂ ಬಿಡದೇ, ಮಕ್ಕಳ ಸಹಾಯವನ್ನೂ ಪಡೆಯದೇ ದಿಟ್ಟತನ ಮೆರೆದ ಸಾಧಕಿ 51 ವರ್ಷದ ಗೌರಿ ನಾಯಕ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ಮಹಿಳಾ ಪ್ರಶಸ್ತಿಯ ತೀರ್ಪುಗಾರರ ವಿಶೇಷ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.