ಆಧ್ಯಾತ್ಮಿಕ ಕೊರತೆಯೇ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣ

By Suvarna Web DeskFirst Published Apr 29, 2017, 12:42 PM IST
Highlights

ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಆತ್ಮಹತ್ಯೆ ಮನಸ್ಥಿತಿಯಿಂದ ಹೊರಬರಲು ಸಾಧ್ಯವೆಂದು ರೈತರಿಗೆ ಗುರೂಜಿ ಸಲಹೆ ನೀಡಿದ್ದಾರೆ.

ಮುಂಬೈ(ಏ.29): ದೇಶಾದ್ಯಂತ ರೈತರ ಆತ್ಮಹತ್ಯೆಗೆ ಬಡತನವೊಂದೇ ಕಾರಣವಲ್ಲ. ಅವರಲ್ಲಿನ ಆಧ್ಯಾತ್ಮಿ ಕತೆಯ ಕೊರತೆಯೂ ಕಾರಣವಾಗಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ‘ನಾವು ಮಹಾರಾಷ್ಟ್ರದ ವಿದರ್ಭದ 512 ಕಿ.ಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿದ್ದೇವೆ. ಇದರ ಆಧಾರದಲ್ಲಿ ಹೇಳುವುದಾದರೆ, ರೈತರ ಆತ್ಮಹತ್ಯೆಗೆ ಬಡತನವೊಂದೇ ಕಾರಣವಲ್ಲ. ಅವರಲ್ಲಿ ಆಧ್ಯಾತ್ಮಿಕ ಕೊರತೆಯೂ ಕಾರಣವಾಗಿದೆ. ಹಾಗಾಗಿ, ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರೂ ರೈತರಿಗೆ ಆಧ್ಯಾತ್ಮಿಕತೆಯನ್ನು ತಲುಪಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ,' ಎಂದಿದ್ದಾರೆ.

ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಆತ್ಮಹತ್ಯೆ ಮನಸ್ಥಿತಿಯಿಂದ ಹೊರಬರಲು ಸಾಧ್ಯವೆಂದು ರೈತರಿಗೆ ಗುರೂಜಿ ಸಲಹೆ ನೀಡಿದ್ದಾರೆ.

ಸರ್ಕಾರದ ಅಧಿಕೃತ ವರದಿಯಂತೆ ಕಳೆದ ಜನವರಿಯಲ್ಲಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಸುಮಾರು 400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.

click me!