ದುಬಾರಿಯಾಯ್ತು ಗಂಡು ಮಗುವಿನ ಆಸೆ: 10ನೇ ಬಾರಿ ಗರ್ಭ ಧರಿಸಿ ಸತ್ತಳು!

Published : Jan 01, 2019, 10:14 AM IST
ದುಬಾರಿಯಾಯ್ತು ಗಂಡು ಮಗುವಿನ ಆಸೆ: 10ನೇ ಬಾರಿ ಗರ್ಭ ಧರಿಸಿ ಸತ್ತಳು!

ಸಾರಾಂಶ

ಮಹಾರಾಷ್ಟ್ರದಲ್ಲಿ ಹೃದಯವಿದ್ರಾವಕ ಘಟನೆ| 9 ಬಾರಿ ಗರ್ಭ ಧರಿಸಿ 7 ಹೆಣ್ಣು ಹೆತ್ತಿದ್ದಳು| ಈ ಬಾರಿ ಗಂಡು ಹೆರಲೇಬೇಕೆಂದು ಕುಟುಂಬದ ಒತ್ತಡ| ಹೆರಿಗೆ ವೇಳೆ ರಕ್ತಸ್ರಾವದಿಂದ ತಾಯಿ, ನವಜಾತ ಮಗು ಸಾವು

ಮುಂಬೈ[ಜ.01]: 9 ಬಾರಿ ಗರ್ಭಧರಿಸಿ 7 ಹೆಣ್ಣು ಹೆತ್ತಿದ್ದ ಈಕೆ ಮೇಲೆ 10ನೇ ಬಾರಿಯಾದರೂ ಗಂಡಾಗಲಿ ಎಂಬ ಒತ್ತಡವಿತ್ತು. ಅದಕ್ಕೆಂದೇ ಆಕೆ 10ನೇ ಬಾರಿ ಗರ್ಭಧರಿಸಿದಳು. ಆದರೆ ತಾನೊಂದು ಬಗೆದರೆ ದೈವವು ಬೇರೆಯದನ್ನೇ ಬಗೆದಿತ್ತು. ತೀವ್ರ ರಕ್ತಸ್ರಾವದಿಂದ ಈಕೆ ನವಜಾತ ಶಿಶುವಿನೊಂದಿಗೇ ಅಸುನೀಗಿದಳು!

ಹೌದು. ಈ ಹೃದಹವಿದ್ರಾವಕ ಘಟನೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಾಜಲಗಾಂವ್‌ ಪಟ್ಟಣದಲ್ಲಿ ನಡೆದಿದೆ.

ಮೀನಾ ಏಖಂಡೆ (38) ಎಂಬ ಈಕೆ ಮಾಜಲಗಾಂವ್‌ನಲ್ಲಿ ಪಾನ್‌ ಶಾಪ್‌ ನಡೆಸುತ್ತಿದ್ದಳು. ಈಗಾಗಲೇ 9 ಬಾರಿ ಗರ್ಭ ಧರಿಸಿದ್ದ ಈಕೆ 7 ಹೆಣ್ಣು ಮಕ್ಕಳನ್ನು ಹೆತ್ತಿದ್ದಳು. 2 ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಳು.

ಆದರೆ ಗಂಡುಮಗಉ ಹೆರಲೇಬೇಕು ಎಂದು ಕುಟುಂಬವು ಈಕೆಯ ಮೇಲೆ ಒತ್ತಡ ಹೇರುತ್ತಿತ್ತು. ಈ ಕಾರಣ 10ನೇ ಬಾರಿ ಗರ್ಭಿಣಿಯಾಗಿದ್ದಳು. ಶನಿವಾರ ಮಾಜಲಗಾಂವ್‌ನ ಆಸ್ಪತ್ರೆಗೆ ಈಕೆಯನ್ನು ದಾಖಲಿಸಿದಾಗ ಅವಧಿಪೂರ್ವ ಮಗುವಿಗೆ ಜನ್ಮ ನೀಡಿ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಇದು ಆಕಸ್ಮಿಕ ಸಾವು ಎಂದು ಪರಿಗಣಿಸಿರುವ ಪೊಲೀಸರು ಮೃತಳ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಇನ್ನೊಂದು ಬೇಸರದ ಸಂಗತಿಯೆಂದರೆ ಮೀನಾ ಹೆತ್ತಿದ್ದ 7 ಹೆಣ್ಣುಮಕ್ಕಳ ಪೈಕಿ ಈಗಾಗಲೇ ಒಬ್ಬಾಕೆ ಸಾವನ್ನಪ್ಪಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ