
ಬೆಂಗಳೂರು[ಜ.01]: ಬಹುಭಾಷಾ ನಟ ಪ್ರಕಾಶ್ ರೈ ಹೊಸ ವರ್ಷಕ್ಕೆ ಹೊಸ ಹೆಜ್ಜೆ ಇರಿಸಿದ್ದು, ತಾನು ರಾಜಕೀಯಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ. ಹೊಸ ವರ್ಷದ ಶುಭಾಷಯಗಳನ್ನು ಕೋರಿ ಮಾಡಿರುವ ಟ್ವೀಟ್‌ನಲ್ಲಿ ತಮ್ಮ ಈ ಹೊಸ ನಿರ್ಧಾರವನ್ನು ಪ್ರಕಟಿಸಿದ್ದಾರೆ.
"
ಹೌದು ಇಂದು ಮಧ್ಯರಾತ್ರಿ 12 ಗಂಟೆಗೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ 'ಎಲ್ಲರಿಗೂ ಹೊಸ ವರ್ಷದ ಹರ್ದಿಕ ಶುಭಾಷಯಗಳು. ಹೊಸ ಆರಂಭ, ಹೊಸ ಜವಾಬ್ದಾರಿ... ನಿಮ್ಮ ಬೆಂಬಲದೊಂದಿಗೆ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಮಾಹಿತಿಯನ್ನು ಶೀಘ್ರದಲ್ಲೇ ನೀಡುತ್ತೇನೆ. ಈ ಬಾರಿ ಜನರ ಸರ್ಕಾರ... #citizensvoice#justasking ಲೋಕಸಭೆಯಲ್ಲೂ ನನ್ನ ಸಮರ ಮುಂದುವರೆಯಲಿದೆ' ಎಂದಿದ್ದಾರೆ.
ಈ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಬಳಿಕ ನಟ ಪ್ರಕಾಶ್ ರೈ ನೀಡುತ್ತಿದ್ದ ಹೇಳಿಕೆಗಳು ಹಾಗೂ ಅವರ ನಡೆ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದವು. ಹೀಗಿದ್ದರೂ ಪ್ರಕಾಶ್ ರೈ ಮಾತ್ರ ಇವೆಲ್ಲವನ್ನೂ ಅಲ್ಲಗಳೆದಿದ್ದರು. ಆದರೀಗ ಹೊಸ ವರ್ಷದ ಹೊಸ್ತಿಲಲ್ಲಿ ತಮ್ಮ ಹೊಸ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಸದ್ಯ ಅವರು ಬೆಂಗಳೂರು ಕೇಂದ್ರದಿಂದ ಮಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆಯಾದರೂ, ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ