ಬೆಂಗಳೂರು[ಜು. 18] ಆಧುನಿಕ ಮಹಿಳೆಯರು ಎಲ್ಲ ರಂಗದಲ್ಲಿಯೂ ಪ್ರಭುತ್ವ ಸಾಧಿಸಿದ್ದರೂ ಆಗಾಗ ಅನಿವಾರ್ಯ ಕಾರಣಕ್ಕೆ ಕೆಲ ಸಮಸ್ಯೆ ಎದುರಿಸಬೇಕಾಗುತ್ತದೆ. ಶತಾಬ್ಧಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಚರಿಸುವಾಗ ಆದ ಕುಡುಕನೊಬ್ಬನೊಂದಿಗೆ ಲೈಂಗಿಕ ಶೋಷಣೆಯಾದಾಗ ಈ ಮಹಿಳೆ ಏನು ಮಾಡಿದರು ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಶ್ನೋತ್ತರ ಮಾಲಿಕೆ ತರಹ ಈ ಟ್ವಿಟರ್ ಥ್ರೇಡ್ ಇದೆ. ಮೊದಲು ನಿಮ್ಮ ಸುತ್ತಲಿನ ಜನರನ್ನು ಅಲರ್ಟ್ ಮಾಡಿ ಯಾಕೆಂದರೆ ಘಟನೆಗೆ ಅವರೇ ವಿಟ್ನೇಸ್..ಅವರು ಒಂದು ವೇಳೆ ಸಹಾಯ ಮಾಡದಿದ್ದರೆ ಟಿಟಿಗೆ ತಿಳಿಸಿ.. ಅದು ಸಾಧ್ಯವಾಗದಿದ್ದರೆ ಹತ್ತಿರದಲ್ಲಿರುವ ರೈಲು ನಿಲ್ದಾಣದಲ್ಲಿ ಯಾವ ಪೊಲೀಸ್ ಸ್ಟೇಶನ್ ಇದೆ ಎಂದು ಪತ್ತೆ ಮಾಡಿಕೊಳ್ಳಿ. ಜೀರೋ ಎಫ್ ಐಆರ್ ಮೂಲಕವೂ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲೂ ಸಾಧ್ಯವಿದೆ ಎಂದು ಬರೆದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.