ಟ್ರಾಫಿಕ್ ನಿಯಮ ಪಾಲಿಸಿದ್ರೆ ಭರ್ಜರಿ ಗಿಫ್ಟ್.. ಕ್ಲಿಕ್ಕಾದ ಐಡಿಯಾ!

Published : Jul 18, 2019, 10:06 PM ISTUpdated : Jul 18, 2019, 10:10 PM IST
ಟ್ರಾಫಿಕ್ ನಿಯಮ ಪಾಲಿಸಿದ್ರೆ ಭರ್ಜರಿ ಗಿಫ್ಟ್.. ಕ್ಲಿಕ್ಕಾದ ಐಡಿಯಾ!

ಸಾರಾಂಶ

ಟ್ರಾಫಿಕ್ ರೂಲ್ಸ್ ಪಾಲಿಸಲು ಜನರಿಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸಗಳು ಆಗುತ್ತಲೆ ಇರುತ್ತವೆ. ಪುಣೆ ಟ್ರಾಫಿಕ್ ಪೊಲೀಸರು ಒಂದು ಮಾದರಿ ಕೆಲಸ ಮಾಡಿದ್ದಾರೆ.

ಪುಣೆ[ಜು. 18] ಟ್ರಾಫಿಕ್ ನಿಯಮ ಪಾಲನೆಗೆ ಉತ್ತೇಜನ ನೀಡಲು ಪುಣೆ ಟ್ರಾಫಿಕ್ ಪೊಲೀಸರು ಅದ್ಭುತ ಐಡಿಯಾ ಮಾಡಿದ್ದಾರೆ. ಆನ್ ಲೈನ್ ಆಹಾರ ಸರಬರಾಜಿನಲ್ಲಿ ಹೆಸರು ಮಾಡಿರುವ ಜೋಮ್ಯಾಟೋ ಮತ್ತು ಸ್ವಿಗ್ಗಿ ಜತೆ ಟ್ರಾಫಿಕ್ ಪೊಲೀಸರು ಒಪ್ಪಂದವೊಂದನ್ನು ಮಾಡಿಕೊಂಡಿದ್ದಾರೆ.

ಏನಿದು ಯೋಜನೆ:? ಸವಾರರು ಅಥವಾ ಗ್ರಾಹಕರು 10 ಅಂಕಿಯ ಕೋಡ್ ಮೂಲಕ ಸ್ವಿಗ್ಗಿ ಮತ್ತು ಜೋಮ್ಯಾಟೋ ಆರ್ಡರ್ ಗಳ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದುದು. ಪೊಲೀಸರು ನಿಲ್ಲಿಸಿ ಕೇಳಿದಾಗ ಸವಾರನ ಮಾಹಿತಿ ಕ್ಲೀನ್ ಆಗಿದ್ದರೆ ಅಂದರೆ ಯಾವುದೇ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಪ್ರಕರಣ ಇಲ್ಲವಾದರೆ 10 ಡಿಜಿಟ್ ನ ಕೂಪನ್ ಒಂದನ್ನು ನೀಡಲಾಗುತ್ತದೆ.

53 ಬಾರಿ ನಿಯಮ ಉಲ್ಲಂಘಿಸಿದ ಬೆಂಗಳೂರು ಫುಡ್ ಡೆಲಿವರಿ ಬಾಯ್!

ಈಗಾಗಲೇ ಈ ಬಗೆಯಲ್ಲಿ 10 ಸಾವಿರ ಕೂಪನ್ ನೀಡಲಾಗಿದ್ದು ಜನಸ್ಪಂದನೆ ವ್ಯಕ್ತವಾಗುತ್ತಿದೆ. ಇದು ಮಾತ್ರವಲ್ಲದೇ  ಎಲೆಕ್ಟ್ರಾನಿಕ್, ಬಟ್ಟೆ ಅಂಗಡಿ, ಮಾಲ್ ಗಳೊಂದಿಗೂ ಪೊಲೀಸ್ ಇಲಾಖೆ ಟೈ ಅಪ್ ಮಾಡಿಕೊಂಡಿದೆ.

ಈ ಯೋಜನೆಗೆ ಜನರಿಂದ ಅಥವಾ ಸಂಸ್ಥೆಗಳಿಂದ ಹಣ ತೆಗೆದುಕೊಳ್ಳಲಾಗಿಲ್ಲ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರು ಕಟ್ಟುವ ದಂಡ ನೇರವಾಗಿ ಖಜಾನೆಗೆ ಹೋಗುತ್ತಿದೆ  ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!