
ಬೆಂಗಳೂರು[ಸೆ.21]: ತನ್ನ ಗಂಡ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸದೆ ಚಿತ್ರ ಹಿಂಸೆ ನೀಡುತ್ತಿದ್ದಾನೆಂದು ಯುವತಿಯೊಬ್ಬಳು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಾಸಿಪಾಳ್ಯದ ನಿವಾಸಿ ರಾಜಿ ಎಂಬಾಕೆ ತನ್ನ ಗಂಡ ರಜ್ಜು ವಿರುದ್ಧ ಠಾಣೆಯಲ್ಲಿದೂರನ್ನು ನೀಡಿದ್ದಾಳೆ. 4 ತಿಂಗಳ ಹಿಂದೆ ಇವರಿಬ್ಬರ ವಿವಾಹವಾಗಿದೆ. ಪತಿ ಮಾಂಸದಂಗಡಿ ವ್ಯಾಪಾರ ಮಾಡುತ್ತಿದ್ದು ಮೊದಲ ಮದುವೆ ಮುಚ್ಚಿಟ್ಟು ನನ್ನನ್ನು ವಿವಾಹವಾಗಿದ್ದಾನೆ. ನಿತ್ಯವೂ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವುದಾಗಿ ಯುವತಿ ಆರೋಪಿಸಿದ್ದಾಳೆ. ಪೊಲೀಸರು ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
[ದಂಪತಿ ಹೆಸರನ್ನು ಬದಲಾಯಿಸಲಾಗಿದೆ]
ಯುವತಿಯ ಅಡ್ಡಗಟ್ಟಿ ದರೋಡೆಗೆ ಯತ್ನ: ಕಿಡಿಗೇಡಿಗೆ ಧರ್ಮದೇಟು
ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದ ಕಿಡಿಗೇಡಿಯೊಬ್ಬನನ್ನು ಹಿಡಿದು ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಮೈಸೂರು ರಸ್ತೆಯ ಮೈಲಸಂದ್ರ ಗೇಟ್ ಬಳಿ ಗುರುವಾರ ನಡೆದಿದೆ. ಕೆಂಗೇರಿ ನಿವಾಸಿ ದಿನೇಶ್ ಬಂಧಿತ. ಪಿಜಿಯಿಂದ ಬೆಳಗ್ಗೆ ಕೆಲಸಕ್ಕೆ ಹೊರಟ್ಟಿದ್ದ ಯುವತಿಗೆ ಚಾಕು ತೋರಿಸಿ ಸುಲಿಗೆ ಆರೋಪಿ ಯತ್ನಿಸಿದ್ದಾನೆ.
ಆಗ ಸಂತ್ರಸ್ತೆ ಜೋರಾಗಿ ರಕ್ಷಣೆಗೆ ಕೂಗಿಕೊಂಡಾಗ ಧಾವಿಸಿದ ಸಾರ್ವಜನಿಕರು, ಆರೋಪಿಗೆ ಗೂಸಾ ಕೊಟ್ಟ ಪೊಲೀಸರಿಗೆ ವಶಕ್ಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ದಿನೇಶ್‌ನ ಮೂವರು ಸಹಚರರು ತಪ್ಪಿಸಿಕೊಂಡಿದ್ದು, ಅವರ ಪತ್ತೆಗೆ ತನಿಖೆ ನಡೆದಿದೆ. ಒಂಟಿಯಾಗಿ ಸಂಚರಿಸುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಆರೋಪಿಗಳು ದುಷ್ಕೃತ್ಯ ಎಸಗುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.